ಬೆಂಗಳೂರು: ನಗರದಲ್ಲಿ 15 ವರ್ಷಗಳಿಂದ ಮನೆಗಳ್ಳತನ ಮಾಡುತ್ತ ಆಕ್ಟೀವ್ ಆಗಿದ್ದ ನೇಪಾಳಿ ಗ್ಯಾಂಗ್ (Nepali Gang) ಒಂದನ್ನು ಪೊಲೀಸರು (Police) ಅರೆಸ್ಟ್ ಮಾಡಿದ್ದಾರೆ.
ಅದು 15 ವರ್ಷ ಹಳೆಯ ಖತರ್ನಾಕ್ ಮನೆಗಳ್ಳತನದ ಗ್ಯಾಂಗ್. 15 ವರ್ಷದಿಂದ ಹೆಸರು ಬದಲಿಸಿಕೊಂಡು ಬೆಂಗಳೂರಿನಲ್ಲಿ (Bengaluru) ಆಕ್ಟೀವ್ ಆಗಿತ್ತು ಆ ನೇಪಾಳಿ ಗ್ಯಾಂಗ್. ಇದೀಗ ಫಿಂಗರ್ ಫ್ರಿಂಟ್‍ನಿಂದ ತಗಲಾಕಿಕೊಂಡು ಜೈಲು ಸೇರಿದ್ದಾರೆ. ಭರತ್ ದಾಮಿ, ಮಂಗಲ್ ಸಿಂಗ್, ಕುಬೇರ ಬಹದ್ದೂರ್ ದಾಮಿ ಬಂಧಿತ ಆರೋಪಿಗಳು. ಇತ್ತೀಚೆಗೆ ಬಾಣಸವಾಡಿ ಪೊಲೀಸ್ ಠಾಣೆಯ ಚಿನ್ನದಂಗಡಿಯೊಂದರಲ್ಲಿ ಕನ್ನ ಹಾಕಲು ಟೂಲ್ಸ್ ಸಮೇತ ರೆಡಿಯಾಗಿತ್ತು. ಇವರ ನಡೆ ನೋಡಿದ ನೈಟ್ ಬೀಟ್ ಪೊಲೀಸರು ಯಾರ್ರೊ ನೀವು ಅಂತಾ ಅನುಮಾನಪಟ್ಟಿದ್ರು. ಬಳಿಕ ಎಂಸಿಟಿಎನ್‍ಎಸ್ ಆ್ಯಪ್ (APP) ಮುಖಾಂತರ ಆರೋಪಿಗಳ ಫಿಂಗರ್ ಫ್ರಿಂಟ್ ಪರಿಶೀಲಿಸಿದಾಗ, ಇವರು ಹಳೆಯ ಖತರ್ನಾಕ್ ಮನೆಗಳ್ಳರು ಅಂತಾ ಗೊತ್ತಾಗಿದೆ. ಇದನ್ನೂ ಓದಿ: ವಿವಾಹಿತ ಮಹಿಳೆಯ ಖಾಸಗಿ ವೀಡಿಯೋ ಇಟ್ಕೊಂಡು ದೈಹಿಕ ಸಂಪರ್ಕಕ್ಕೆ ಪೀಡಿಸುತ್ತಿದ್ದ ಕಾಮುಕ ಅರೆಸ್ಟ್
ಬೆಂಗಳೂರಿನಲ್ಲಿ ಮನೆ ಕಳ್ಳತನ ಮಾಡಿ ಬಳಿಕ ನೇಪಾಳದಲ್ಲಿ ತಲೆಮರೆಸಿಕೊಳ್ಳುತ್ತಿದ್ದರು. ಬಳಿಕ ಹೆಸರು ಬದಲಿಸಿಕೊಂಡು ವಾಪಸ್ ಆಗಿ ಮತ್ತದೇ ಕೃತ್ಯದಲ್ಲಿ ತೊಡಗಿಕೊಳ್ಳುತ್ತಿದ್ದರು. ಇದೀಗ ಬಾಣಸವಾಡಿ ಪೊಲೀಸ್ ಠಾಣೆಯ ಚಿನ್ನದಂಗಡಿಯೊಂದರಲ್ಲಿ ಕಳ್ಳತನಕ್ಕೆ ಮುಂದಾಗುತ್ತಿದ್ದಾಗ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಅನುಮಾನ ಬಂದು ಕೂಡಲೇ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಮನೆ ಬಾಗಿಲು ಒಡೆಯುವ ವೆಪನ್‍ಗಳು ಪತ್ತೆಯಾಗಿವೆ. ಭರತ್ ಧಾಮಿ 15 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡ್ತಿದ್ರೆ, ಮಂಗಲ್‍ಸಿಂಗ್ 2007ರಿಂದ ತಲೆಮರೆಸಿಕೊಂಡಿದ್ದ. ಮೈಸೂರಿನ ಸರಸ್ವತಿಪುರಂ, ರಾಜಗೋಪಾಲ ನಗರ, ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮನೆಗಳ್ಳತನ ಮಾಡಿದ್ರು. ಸದ್ಯ ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: 6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k