ಬೆಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭೀಕರ ಮಾನವ ಬಾಂಬ್ ಸ್ಫೋಟದಲ್ಲಿ ವೀರ ಯೋಧರು ಮರಣ ಹೊಂದಿದ್ದರು. ವೀರರನ್ನು ಕಳೆದುಕೊಂಡು ದೇಶ ಕಣ್ಣೀರಿಡುತ್ತಿದ್ದರೆ ಕೆಲ ಆಂತರಿಕ ಶತ್ರುಗಳು ಪಾಕಿಸ್ತಾನಕ್ಕೆ ಜೈ ಎಂದಿದ್ದರು. ಈಗ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆನೇಕಲ್ ನ ಸ್ಫೂರ್ತಿ ಕಾಲೇಜ್‍ನಲ್ಲಿ ಕಾಶ್ಮೀರ ಮೂಲದ ವಾಕರ್ ಅಹಮದ್, ಗೌಹಾರ್ ಮತ್ತು ಜಾಕೀರ್ ಮಕ್ ಬುಲ್ ಬಂಧಿತ ವಿದ್ಯಾರ್ಥಿಗಳು. ಇವರು ಬಂಗಾಳ ಮೂಲದ ವಿದ್ಯಾರ್ಥಿ ಕೌಶಿಕ್ ತನ್ನ ಫೇಸ್ ಬುಕ್ ನಲ್ಲಿ ಯೋಧರ ಸಾವು ಅನ್ಯಾಯವೆಂದು ಶತ್ರು ರಾಷ್ಟ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಕಾಶ್ಮೀರ ವಿದ್ಯಾರ್ಥಿಗಳಾದ ವಾಕರ್ ಅಹಮದ್, ಗೌಹಾರ್, ಮತ್ತು ಜಾಕೀರ್ ಮಕ್ ಬುಲ್ ಪಾಪಿ ಪಾಕಿಸ್ತಾನಕ್ಕೆ ಜೈ ಎಂದು ವೀರರ ಸಾವನ್ನು ಗೇಲಿ ಮಾಡಿದ್ದರು.
Advertisement
Advertisement
ವಿದ್ಯಾರ್ಥಿಗಳು ಕುಡಿವ ನೀರು ಮತ್ತು ಬಳಸುವ ವಿದ್ಯುತ್ ಪಾಕಿಸ್ತಾನದ್ದು ಎಂದಿದ್ದರು. ಕಾಶ್ಮೀರ ಪಾಕಿಸ್ತಾನದಿಂದ, ಭಾರತದಿಂದಲ್ಲ ಅಂತ ಬರೆದುಕೊಂಡಿದ್ದರು. ಇದನ್ನ ಪ್ರಶ್ನಿಸಿದ ಬಂಗಾಳ ವಿದ್ಯಾರ್ಥಿ ಕೌಶಿಕ್ ನ ಮೇಲೆ ಮೂವರು ಸೇರಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪ್ರಿನ್ಸಿಪಾಲ್ ನೀಡಿದ ದೂರಿನ ಆಧಾರದ ಮೇಲೆ ಮೂವರು ದೇಶದ್ರೋಹಿ ವಿದ್ಯಾರ್ಥಿಗಳನ್ನ ಅರೆಸ್ಟ್ ಮಾಡಲಾಗಿದೆ.
Advertisement
ನಾವು ನೀವು ಕಟ್ಟುವ ಟ್ಯಾಕ್ಸ್ ನಿಂದ ಜೀವನ ನಡೆಸುತ್ತಿದ್ದಾರೆ. ಕಾಶ್ಮೀರದಲ್ಲಿ ತಿನ್ನೋಕೆ ಅನ್ನ ಇಲ್ಲ. ಓದುವುದಕ್ಕೆ ಸಹಾಯ ಮಾಡಿ ಅಂತ ಪ್ರಧಾನ ಮಂತ್ರಿಗೆ ಲೆಟರ್ ಕೂಡ ಬರೆದು, ಬೆಂಗಳೂರಿನ ಸ್ಫೂರ್ತಿ ಕಾಲೇಜಿನಲ್ಲಿ ನರ್ಸಿಂಗ್ ಸೀಟ್ ಗಿಟ್ಟಿಸಿಕೊಂಡಿದ್ದರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಹೇಳಿದ್ದಾರೆ.
Advertisement
ಬೆಂಗಳೂರಲ್ಲೇ ಓದಿ, ಕೆಲಸ ಕೂಡ ಮಾಡಿದ್ದ ಕಾಶ್ಮೀರ ವಿದ್ಯಾರ್ಥಿ ಹಬೀದ್ ಮಲ್ಲಿಕ್, ನಿಜವಾದ ಸರ್ಜಿಕಲ್ ಸ್ಟ್ರೈಕ್ ಅಂದರೆ ಇದು ಅಂತ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದನು. ಯಾವಾಗ ಸಾರ್ವಜನಿಕರಿಂದ ಆಕ್ರೋಶ ಹೆಚ್ಚಾಯಿತೋ ಫೇಸ್ ಬುಕ್ ನಿಂದ ಡಿಲೀಟ್ ಮಾಡಿದ್ದನು. ಹಬೀದ್ ಮೇಲೆ ಸದ್ಯ ಎಚ್‍ಎಸ್‍ಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ದೇಶದ್ರೋಹ, ದೇಶಕ್ಕೆ ಮಾರಕವಾಗುವ ಹೇಳಿಕೆ ಹಾಗೂ ಶಾಂತಿ ಕದಲುವ ಹಾಗೂ ರಾಷ್ಟ್ರ ನೀತಿಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv