ಬೆಳಗಾವಿ: ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಬಿಜೆಪಿ ಶಾಸಕನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಗೋವಾ ಬಿಜೆಪಿ ಶಾಸಕ ಗ್ಲೆನ್ ಶಿಕ್ಲಾನ್ ಪುತ್ರ ಕೈಲ್ ಟಿಕ್ಲೋ ನನ್ನು ಪೊಲೀಸರು ಬಂಧಿಸಿದ್ದರು. ಸೋಮವಾರ ಸಂಜೆ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಲ್ ಟಿಕ್ಲೋನನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ.
ಏನಿದು ಪ್ರಕರಣ?
ಸೋಮವಾರ ಸಂಜೆ ಬೆಳಗಾವಿಯ ಹೆದ್ದಾರಿ 4 ರಲ್ಲಿ ಗ್ಲೆನ್ ಶಿಕ್ಲಾನ್ ಪುತ್ರ ಕೈಲ್ ಟಿಕ್ಲೋ ಬಿಎಂಡಬ್ಲ್ಯೂ ಕಾರನ್ನು ಓಡಿಸುತ್ತಿದ್ದನು. ಈ ವೇಳೆ ಅತಿವೇಗವಾಗಿ ರಸ್ತೆಬದಿ ನಿಂತಿದ್ದ ಯುವತಿಯೊಬ್ಬಳಿಗೆ ಡಿಕ್ಕಿ ಹೊಡೆದಿದ್ದ. ಡಿಕ್ಕಿ ಹೊಡೆದ ರಭಸಕ್ಕೆ ಆಜಾದ್ ನಗರದದ ನಿವಾಸಿಯಾಗಿರುವ ಸ್ಯಾನಿಯತ್ ವಾಹಿದ್ ಬಿಸ್ತಿ (18) ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಅಪಘಾತದ ನಂತರ ರೊಚ್ಚಿಗೆದ್ದ ಸ್ಥಳೀಯರು ಶಾಸಕ ಪುತ್ರನ ಕಾರನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದರು. ಇತ್ತ ಅಪಘಾತವಾಗುತ್ತಿದ್ದಂತೆ ಕಾರು ಬಿಟ್ಟು ಶಾಸಕನ ಪುತ್ರ ಪರಾರಿಯಾಗಿದ್ದ. ಅಷ್ಟೇ ಅಲ್ಲದೇ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಶಾಸಕನ ಪುತ್ರ ಮಾಳಮಾರುತಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕೌಂಟರ್ ಕೇಸ್ ದಾಖಲಿಸಿದ್ದ.
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಬಳಿಕ ಪೊಲಿಸರು ಕೈಲ್ ಟಿಕ್ಲೋ ನ ಬಂಧಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv