ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಸರಗಳ್ಳರನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಂಟಿ ಮಹಿಳೆಯರು ಹಾಗೂ ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ಸರ ಎಗರಿಸುತ್ತಿದ್ದ ಮೂವರು ಅಂತರಾಜ್ಯ ಸರಗಳ್ಳರನ್ನ ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ. ಅರುಣ್ ಕಾರ್ತಿಕ್ ಹಾಗೂ ಜಯಕುಮಾರ್ ಬಂಧಿತ ಆರೋಪಿಗಳು. ಇನ್ನೂ ಸರಿಯಾಗಿ ಮೀಸೆಯೂ ಮೂಡದ ಆರೋಪಿಗಳು ಸಲೀಸಾಗಿ ಹಣ ಮಾಡಬೇಕು ಎಂದು ಚೈನ್ ಸ್ನಾಚಿಂಗ್ ಮಾಡುತ್ತಿದ್ದರು ಎಂದು ಸರ ಕಳೆದುಕೊಂಡವರು ಹೇಳಿದ್ದಾರೆ.
Advertisement
ಆರೋಪಿಗಳು ಸರಗಳವು ಮಾಡೋ ಮುನ್ನ ಕೃತ್ಯಕ್ಕೆ ಬಳಸಲು ಬೈಕ್‍ಗಳನ್ನ ಕದಿಯುತ್ತಿದ್ದರು. ನಂತರ ಕದ್ದ ಬೈಕಿನಲ್ಲಿ ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸರ ಎಗರಿಸುತ್ತಿದ್ದರು. ಸದ್ಯ ಬಂಧಿತ ಆರೋಪಿಗಳಿಂದ ಹನುಮಂತನಗರ, ಕೆ.ಎಸ್.ಲೇಔಟ್, ಪುಟ್ಟೆನಹಳ್ಳಿ ಸೇರಿದಂತೆ ನಗರದ 12 ಠಾಣೆಯಲ್ಲಿ ಕಳುವಾಗಿದ್ದ 1 ಕೆಜಿ 220 ಗ್ರಾಂ ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದು, ಆರೋಪಿಗಳ ಬಂಧನದಿಂದಾಗಿ 35 ಸರಗಳವು ಪ್ರಕರಣಗಳು ಪತ್ತೆಯಾಗಿವೆ.
Advertisement
ಬೈಕ್ ಎಗರಿಸ್ತಿದ್ದ ಅಂತರಾಜ್ಯ ಕಳ್ಳರ ಬಂಧನ:
ತಡರಾತ್ರಿ ಮನೆ ಮುಂದೆ ಪಾರ್ಕ್ ಮಾಡಿದ್ದ ಬೈಕ್ ಗಳನ್ನ ಎಗರಿಸಿ ಪರಾರಿಯಾಗುತ್ತಿದ್ದ ಮೂವರು ಅಂತರಾಜ್ಯ ಸರಗಳ್ಳರನ್ನ ವಿವಿಪುರಂ ಪೊಲೀಸರು ಬಂಧಿಸಿದ್ದಾರೆ. ಮುನೀರ್ ಬಾಷ, ಮೊಹಮ್ಮದ್ ಮುಜಾಹಿದ್ ಹಾಗೂ ಮೋಗನ್ ಬಂಧಿತ ಆರೋಪಿಗಳು.
Advertisement
Advertisement
ಪಲ್ಸರ್ ಹಾಗೂ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ನಂತರ ನಂಬರ್ ಪ್ಲೇಟ್ ಚೇಂಜ್ ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು. ಬೆಂಗಳೂರಿನ ಅಶೋಕ್‍ನಗರ ಜಯನಗರ ವಿಲ್ಸನ್ ಗಾರ್ಡನ್ ಜಯನಗರ ಸೇರಿದಂತೆ ನಗರದಲ್ಲಿ ಸುಮಾರು 20 ಲಕ್ಷ ಬೆಲೆಬಾಳುವ ಸುಮಾರು 17 ಬೈಕ್ ಗಳನ್ನ ಪೊಲೀಸರು ವಶಪಡಿಸಿಕೊಂಡಿಸಿದ್ದಾರೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv