ಬೆಂಗಳೂರು: ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಪೋಸ್ಟ್ ಮಾಡಿದ್ದ ಬಾಲಕನನ್ನು ಆರ್.ಟಿ ನಗರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ಬಾಲಕ ಬೈಕ್ ವ್ಹೀಲಿಂಗ್ ಮಾಡಿ ಫೇಸ್ ಬುಕ್‍ನಲ್ಲಿ ಪೋಸ್ಟ್ ಹಾಕಿದ್ದನು. ಫೇಸ್ ಬುಕ್ ಪೋಸ್ಟ್ ಆಧರಿಸಿ ಆರ್.ಟಿ ನಗರ ಸಂಚಾರಿ ಪೊಲೀಸರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಬಾಲಕನನ್ನು ಬಂಧಿಸಿದ್ದಾರೆ. ಆರ್.ಟಿ ನಗರದ ಡಾಲರ್ಸ್ ಕಾಲೋನಿಯ 1ನೇ ಮುಖ್ಯರಸ್ತೆಯ ಬಳಿ ಬಾಲಕ ವ್ಹೀಲಿಂಗ್ ಮಾಡಿದ್ದು, ನಂತರ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದನು. ಫೇಸ್‍ಬುಕ್ ಪೋಸ್ಟ್ ನೋಡಿದ ಪೊಲೀಸರು ಬಾಲಕನ ಮನೆಗೆ ಹೋಗಿ ಆತನನ್ನು ಬಂಧಿಸಿದ್ದಾರೆ.
ವ್ಹೀಲಿಂಗ್ ವೇಳೆ ಬಾಲಕ ಬಳಸಿದ್ದ ಯಮಹ ಬೈಕ್‍ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕ ಅಪ್ರಾಪ್ತನಾಗಿರುವುದರಿಂದ ಪೋಷಕರ ಮೇಲೂ ಆರ್.ಟಿ ನಗರ ಸಂಚಾರಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಸದ್ಯ ಆರ್.ಟಿ ನಗರ ಪೊಲೀಸ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕರ ಅಪಾಯಕಾರಿ ಬೈಕ್ ವ್ಹೀಲಿಂಗ್ ಹಾವಳಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ವಿಶೇಷವಾಗಿ ಪೊಲೀಸ್ ತಂಡವೊಂದು ರಚನೆಯಾಗಿದೆ. ಈ ಪೊಲೀಸ್ ತಂಡ ವ್ಹೀಲಿಂಗ್ ಮಾಡಿ ಅದನ್ನು ಫೇಸ್‍ಬುಕ್ ಗೆ ಪೋಸ್ಟ್ ಮಾಡಿದರೆ ಅವರನ್ನು ಬಂಧಿಸುತ್ತಾರೆ. ಈಗಾಗಲೇ ಆರ್.ಟಿ ನಗರ ಸಂಚಾರಿ ಪೊಲೀಸರಿಂದ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದರು.
ಬಾಲಕ ಆರ್.ಟಿ ನಗರದ ಮುಖ್ಯ ರಸ್ತೆಯ ಕಬಾಬ್ ಮ್ಯಾನರ್ ಹೊಟೆಲ್ ಬಳಿ ವ್ಹೀಲಿಂಗ್ ಮಾಡುತ್ತಿದ್ದನು. ನಂತರ ವ್ಹೀಲಿಂಗ್ ಮಾಡಿದ್ದ ತನ್ನ ಫೋಟೋವನ್ನ ಫೇಸ್ ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದನು. ಇದನ್ನು ಗಮನಿಸಿದ ಪೊಲೀಸರು ಫೇಸ್‍ಬುಕ್ ಪೋಸ್ಟ್ ನೋಡಿ ಬಾಲಕನ ಮನೆಗೆ ಬಂದು ಪೋಷಕರಿಗೆ ನೋಟೀಸ್ ಕೊಟ್ಟಿದ್ದಾರೆ. ಈ ಸಂಬಂಧ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವ್ಹೀಲಿಂಗ್ ವೇಳೆ ಬಾಲಕ ಬಳಸಿದ್ದ ಡಿಯೋ ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews