ವಾಷಿಂಗ್ಟನ್: ಮಹಿಳೆಯೊಬ್ಬಳು ಕೋವಿಡ್-19 ಸೋಂಕಿನಿಂದ ಪಾರಾಗಲು ಸೋಂಕಿತ ಮಗನನ್ನೇ ಕಾರ್‌ನ ಟ್ರಂಕ್‌ನಲ್ಲಿ ಕೂಡಿ ಹಾಕಿದ ಘಟನೆ ಅಮೆರಿಕಾದ ಟೆಕ್ಸಾಸ್‌ನಲ್ಲಿ ನಡೆದಿದೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಶಿಕ್ಷಕಿಯಾಗಿರುವ ಸಾರಾ ಬೀಮ್(41) ಜನವರಿ 3 ರಂದು ಹ್ಯಾರಿಸ್ ಕೌಂಟಿಯ ಡ್ರೈವ್-ಥ್ರೂ ಕೋವಿಡ್-19 ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಳು. ಅಲ್ಲಿದ್ದ ಸಿಬ್ಬಂದಿ ಕಾರಿನ ಒಳಗಡೆಯಿಂದ ಬರುತ್ತಿದ್ದ ಶಬ್ಧವನ್ನು ಆಲಿಸಿದ್ದಾರೆ. ಆಗ ಆಕೆ ತನ್ನ ಮಗನನ್ನು ಟ್ರಂಕ್‌ನ ಒಳಗಡೆ ಬಂಧಿಸಿರುವ ವಿಷಯ ಬಹಿರಂಗ ಪಡಿಸಿದ್ದಾಳೆ.
Advertisement
ಈ ಆಘಾತಕಾರಿ ವಿಚಾರವನ್ನು ತಿಳಿದ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಇನ್ನೊಂದು ಮದುವೆಯಾಗ್ತೀನಿ ಎಂದ ತಂದೆಯನ್ನು ಕೊಂದ ಮಗ!
Advertisement
Advertisement
ಮಹಿಳೆಯ 13 ವರ್ಷದ ಮಗನಿಗೆ ಕೋವಿಡ್-19 ಸೋಂಕು ತಗುಲಿದ್ದು, ಸೋಂಕು ತನಗೆ ಹರಡಬಾರದೆಂಬ ಕಾರಣಕ್ಕೆ ಆತನನ್ನು ಕಾರ್‌ನ ಟ್ರಂಕ್ ಒಳಗಡೆ ಬಂಧಿಸಿದ್ದ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನು ಸಾಬೀತುಪಡಿಸಲು ಆಕೆ ಮಗನನ್ನು ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾಳೆ. ಇದನ್ನೂ ಓದಿ: ಸೇನಾ ನೆಲೆಯಲ್ಲೇ ಮಕ್ಕಳನ್ನು ಕೆಟ್ಟದಾಗಿ ನಿಂದಿಸಿದ್ದಕ್ಕೆ ವ್ಯಕ್ತಿಗೆ 50 ವರ್ಷ ಜೈಲು ಶಿಕ್ಷೆ!
Advertisement
ಆದರೆ ಮಹಿಳೆಯ ಬೇಜವಾಬ್ದಾರಿ ಕೃತ್ಯಕ್ಕೆ ಪೊಲೀಸರು ಕೇಸ್ ದಾಖಲಿಸಿ, ಬಂಧಿಸಿದ್ದಾರೆ. ಅದೃಷ್ಟವಶಾತ್ ಬಾಲಕನಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.