ಧಾರವಾಡ: ಜಿಲ್ಲೆಯಲ್ಲಿ ಕೆಲದಿನಗಳಿಂದ ಚಲಾವಣೆಯಾಗುತ್ತಿದ್ದ ಖೋಟಾ ನೋಟಿನ ಜಾಡು ಹಿಡಿದ ಧಾರವಾಡ ಉಪನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಐವರನ್ನು ಬಂಧಿಸಿದ್ದಾರೆ.

ಬಂಧಿತರೆಲ್ಲಾ ಮುಗದ ಗ್ರಾಮದ ನಿವಾಸಿಗಳು. ಇವರು ನಕಲಿ ನೋಟು ಪ್ರಿಂಟ್ ಮಾಡುವ ಮೆಷಿನ್ ಇಟ್ಟುಕೊಂಡು, ದೀಪಾವಳಿ ಹಬ್ಬದ ವೇಳೆ ದೊಡ್ಡ ಪ್ರಮಾಣದಲ್ಲಿ ನೋಟು ಪ್ರಿಂಟ್ ಮಾಡಿ ಹೊರ ಬಿಟ್ಟಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ನವೆಂಬರ್ 5 ರಂದೇ ನಕಲಿ ನೋಟು ಹಾವಳಿ ಬಗ್ಗೆ ವರದಿ ಮಾಡಿತ್ತು. ಹೀಗಾಗಿ ಇದರ ಜಾಡು ಹಿಡಿದು ಹೊರಟ ಪೊಲೀಸರು ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದವರ ಗ್ಯಾಂಗ್‍ನ್ನು ಹಿಡಿದು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರರಿಂದ ಒಂದು ಪಲ್ಸರ್ ಬೈಕ್ ಹಾಗೂ ನಕಲಿ ನೋಟು ಪ್ರಿಂಟ್ ಮೆಷಿನ್ ವಶಕ್ಕೆ ಪಡೆದಿರುವ ಪೊಲೀಸರು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ- ಬರೋಬ್ಬರಿ 850ಕ್ಕೂ ಹೆಚ್ಚು ಮೊಬೈಲ್ ಫೋನ್ ವಶಕ್ಕೆ



