ಲಿಕ್ವಿಡ್ ಹಾಕಿದ್ರೆ ನಕಿಲಿ ನೋಟು ಅಸಲಿಯಾಗುತಂತೆ..!

Public TV
1 Min Read
BGK KHOTANOT ARREST

– ಖೋಟಾ ನೋಟು ವಂಚಕರ ಜಾಲ ಪತ್ತೆ

ಬಾಗಲಕೋಟೆ: ಜನರನ್ನು ನಂಬಿಸಿ ಕಪ್ಪು ಕಾಗದಕ್ಕೆ ಲಿಕ್ವಿಡ್ ಹಾಕಿದ್ರೆ ನೈಜ ನೋಟಾಗಿ ಬದಲಾಗುತ್ತವೆ ಎಂದು ಮೋಸ ಮಾಡುತ್ತಿದ್ದ ವಂಚಕರ ಜಾಲವನ್ನು ಜಿಲ್ಲೆಯ ಸಿಇಎನ್ ಪೊಲೀಸರು ಕಾರ್ಯಾಚರಣೆ ಮಾಡಿ ಪತ್ತೆ ಮಾಡಿದ್ದಾರೆ.

ಸೋಮಶೇಖರ್ ಹಳ್ಳೂರ, ಮಲ್ಲಿಕಾರ್ಜುನ ತೋರಗಲ್, ಈರಣ್ಣ ಹಾದಿಮನಿ ಬಂಧಿತ ವಂಚಕರು. ಈ ಮೂವರ ಇನ್ನೋರ್ವ ಸೇರಿ ನೋಟಿನಾಕಾರದ ಕಪ್ಪು ಕಾಗದವನ್ನು ಜನರಿಗೆ ನೀಡಿ ಇದಕ್ಕೆ ನಾವು ಕೊಡುವ ಲಿಕ್ವಿಡ್ ಹಾಕಿದ್ರೆ ನಿಜವಾದ ನೋಟು ಆಗುತ್ತೆ ಎಂದು ವಂಚನೆ ಮಾಡುತ್ತಿದ್ದರು. ಅಲ್ಲದೆ 500 ಹಾಗೂ 2000 ಮುಖಬೆಲೆಯ ನೋಟ್‍ಗಳಾಗುತ್ತವೆ ಎಂದು ಜನರನ್ನು ವಂಚಿಸುತ್ತಿದ್ದರು. ಆರೋಪಿಗಳಲ್ಲಿ ಮೂವರು ನಕಲಿ ನೋಟ್ ವಂಚಕರನ್ನು ಪೊಲೀಸರು ಕಾರ್ಯಚರಣೆ ಮಾಡಿ ಬಂಧಿಸಿದ್ದು, ಓರ್ವ ಆರೋಪಿ ಪರಾರಿಯಾಗಿದ್ದಾನೆ.

BGK KHOTANOT ARREST 2

ಬಂಧಿತ ಮೂವರು ಗುಳೇದಗುಡ್ಡ ಪಟ್ಟಣದವರು ಎಂದು ಗುರುತಿಸಲಾಗಿದ್ದು, ಮರಿಯಪ್ಪ ಮಾದರ ಎಂಬ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಗಳು ಜನರಿಗೆ ಕಪ್ಪು ನಕಲಿ ನೋಟ್ ನೀಡಿ ಹಣ ಪಡೆದು ವಂಚಿಸುವ ಪ್ರಯತ್ನದಲ್ಲಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಇಎನ್ ಪೊಲೀಸರು ಗುಳೇದಗುಡ್ಡ ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿ ನಡೆಯುತ್ತಿದ್ದ ದಂದೆಗೆ ಬ್ರೇಕ್ ಹಾಕಿದ್ದಾರೆ. ಆರೋಪಿಗಳ ಬಳಿ ಇದ್ದ 2 ಸಾವಿರ ರೂ. ಮುಖಬೆಲೆಯ ಎರಡು ಖೋಟಾ ನೋಟನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಘಟನೆ ಕುರಿತು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *