ಬೆಂಗಳೂರು: ರೋಡ್‍ಗಳಲ್ಲಿ ವೀಲ್ಹಿಂಗ್ ಮಾಡಬೇಡಿ ಎಂದು ಪೊಲೀಸ್ ಇಲಾಖೆ ಸಾರಿ ಸಾರಿ ಹೇಳಿದರೂ ಯುವ ಪೀಳಿಗೆ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಹೀಗೆ ಸೋಮವಾರ ಸಿಲಿಕಾನ್ ಸಿಟಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ 12 ಮಂದಿ ಬೈಕ್ ಸವಾರರನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.
ಹೆಬ್ಬಾಳ, ಆರ್.ಟಿ.ನಗರ, ಯಲಹಂಕ, ನೆಲಮಂಗಲ, ಹೆರಘಟ್ಟ, ರಸ್ತೆಯಲ್ಲಿ ತಡರಾತ್ರಿ ಮಫ್ತಿಯಲ್ಲಿ ಪೊಲೀಸರ ತಂಡ ರೋಡಿಗಿಳಿದಿತ್ತು. ಈ ವೇಳೆ ರಾತ್ರಿ ರೋಡಿನಲ್ಲಿ 15ಕ್ಕೂ ಹೆಚ್ಚು ಬೈಕ್ ಸವಾರರು ವೀಲ್ಹಿಂಗ್ ಮಾಡುತ್ತಿರುವುದು ಖಾಕಿ ಕಣ್ಣಿಗೆ ಬಿದ್ದಿದೆ. ಆಗ ಪೊಲೀಸರು ವೀಲ್ಹಿಂಗ್ ಮಾಡುತ್ತಿದ್ದ ಯುವಕರನ್ನು ಬೆನ್ನತ್ತಿ ಹೋಗಿ ಸೆರೆಹಿಡಿದ್ದಾರೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಪ್ರೇಯಸಿ ಜೊತೆ ವೀಲ್ಹಿಂಗ್ ಮಾಡಿದ್ದ ಯುವಕನ ಬಂಧನ
Advertisement
Advertisement
ಈ ಹಿಂದೆ ವೀಲ್ಹಿಂಗ್ ಮಾಡುತ್ತಿದ್ದ ನಾಲ್ವರು ಯುವಕರಿಗೆ ಗ್ರಾಮಸ್ಥರು ಗೂಸಾ ಕೊಟ್ಟ ಘಟನೆ ಕೆಂಗೇರಿಯ ಹೆಮ್ಮಿಗೆಪುರ ಗ್ರಾಮದಲ್ಲಿ ನಡೆದಿತ್ತು. ಸ್ಕೂಟಿಗಳಲ್ಲಿ ಯುವಕರು ಆಗಸ್ಟ್ 4ರಂದು ಮಧ್ಯಾಹ್ನ ನೈಸ್ ರಸ್ತೆಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದರು. ಇದನ್ನು ನೋಡಿದ ಹೆಮ್ಮಿಗೆಪುರದ ಗ್ರಾಮಸ್ಥರು ಯುವಕರನ್ನು ತಡೆದು, ಹಿಗ್ಗಾಮುಗ್ಗ ಥಳಿಸಿದ್ದರು. ಅಷ್ಟೇ ಅಲ್ಲದೆ ಮತ್ತೊಮ್ಮೆ ವೀಲ್ಹಿಂಗ್ ಮಾಡದಂತೆ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದರು.
Advertisement
https://www.youtube.com/watch?v=mrzf9pynAio