ಚಿಕ್ಕಮಗಳೂರು: ದತ್ತ ಜಯಂತಿಯಂದು (Datta Jayanti) ತಾಲೂಕಿನ ದತ್ತಪೀಠ ಮಾರ್ಗದಲ್ಲಿ ಮೂಳೆ (Nails) ಹಾಕಿ ದುಷ್ಕೃತ್ಯ ನಡೆಸಲು ಹುನ್ನಾರ ನಡೆಸಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
Advertisement
ಬಂಧಿತರು ಚಿಕ್ಕಮಗಳೂರಿನ (Chikkamagaluru) ದುಬೈ ನಗರ ನಿವಾಸಿಗಳಾದ ಮಹಮದ್ ಶಹಬಾಸ್ ಹಾಗೂ ವಾಹೀದ್ ಹುಸೇನ್ ಎಂದು ಗುರುತಿಸಲಾಗಿದೆ. ಡಿಸೆಂಬರ್ 6, 7 ಮತ್ತು 8 ರಂದು ಚಿಕ್ಕಮಗಳೂರು ನಗರದಲ್ಲಿ ದತ್ತಜಯಂತಿ ಕಾರ್ಯಕ್ರಮವಿತ್ತು. ಡಿಸೆಂಬರ್ 6 ರಂದು ದತ್ತಜಯಂತಿಯ ಮೊದಲ ದಿನ ಅನುಸೂಯ ಜಯಂತಿ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ಸಾವಿರಾರು ಮಹಿಳೆಯರು ಮೆರವಣಿಗೆ ನಡೆಸಿ ದತ್ತಪೀಠಕ್ಕೆ ತೆರಳಿ ಹೋಮ-ಹವನ ನಡೆಸುವವರಿದ್ದರು. ಆದರೆ, ಈ ವೇಳೆ ಕಿಡಿಗೇಡಿಗಳು ದತ್ತಪೀಠದ ಮಾರ್ಗದಲ್ಲಿ ಸುಮಾರು 2 ಕಿ.ಮೀ. ಸಣ್ಣ-ಸಣ್ಣ ಮೊಳೆ ಚೆಲ್ಲಿದ್ದರು. ಇದರಿಂದ ಪೊಲೀಸ್ ಸೇರಿದಂತೆ ನಾಲ್ಕೈದು ವಾಹನಗಳು ಮಾರ್ಗ ಮಧ್ಯೆಯೇ ಪಂಚರ್ ಆಗಿದ್ದವು. ಕೂಡಲೇ ಪೊಲೀಸರು ಮೊಳೆ ತೆಗೆದು ಸರಾಗ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇದನ್ನೂ ಓದಿ: ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಹುನ್ನಾರ – ರಸ್ತೆಯುದ್ದಕ್ಕೂ ಮೊಳೆಗಳನ್ನು ಹಾಕಿದ ಕಿಡಿಗೇಡಿಗಳು
Advertisement
Advertisement
ಘಟನೆ ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ಕೂಡ ದಾಖಲಿಸಿಕೊಂಡಿದ್ದರು. ಕಳೆದ ಎಂಟತ್ತು ದಿನಗಳಿಂದ ತನಿಖೆ ನಡೆಸಿದ ಪೊಲೀಸರು ಚಿಕ್ಕಮಗಳೂರಿನ ದುಬೈ ನಗರದ ಇಬ್ಬರನ್ನು ಬಂಧಿಸಿದ್ದಾರೆ. ಅವರು ಎಲ್ಲಿ ಮೊಳೆ ಖರೀದಿಸಿರು ಎಂಬ ಮಾಹಿತಿಯನ್ನೂ ಕಲೆ ಹಾಕಿ, ವೈಜ್ಞಾನಿವಾಗಿ ಸಾಬೀತು ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇನ್ನೂ ಐದಾರು ಜನ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಇದ್ದು ಪೊಲೀಸರು ಅವರಿಗೂ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು ಸರ್ಕಾರಿ ಹಾಸ್ಟೆಲ್‌ನಲ್ಲಿ PUC ವಿದ್ಯಾರ್ಥಿನಿಗೆ ಹೆರಿಗೆ
Advertisement
ಮೂರು ದಿನದ ಕಾರ್ಯಕ್ರಮಲ್ಲಿ ಮೊದಲ ದಿನವೇ ರಸ್ತೆಗೆ ಮೊಳೆ ಸುರಿದಿದ್ದರಿಂದ ಉಳಿದ ಎರಡು ದಿನಗಳ ಬಗ್ಗೆ ಆತಂಕ ಉಂಟಾಗಿತ್ತು. ಶಾಸಕ ಸಿ.ಟಿ.ರವಿ ಕೂಡ ಇಂತಹ ಬೆದರಿಕೆಗೆ ಬಗ್ಗಲ್ಲ, ದತ್ತಜಯಂತಿಯನ್ನು ಮತ್ತಷ್ಟು ಅದ್ಧೂರಿಯಾಗಿ ಆಚರಿಸಲು ಹಠ ಬಂದಿದೆ ಎಂದಿದ್ದರು. ಈ ನಡುವೆ ಕಾರ್ಯಕ್ರಮ ಚೆನ್ನಾಗಿ ನಡೆದಿತ್ತು. ಚುನಾವಣೆ ವರ್ಷವೇ ಕಿಡಿಗೇಡಿಗಳ ಈ ದುಷ್ಕೃತ್ಯದಿಂದ ಚಿಕ್ಕಮಗಳೂರು ಜನ ಕೂಡ ಆತಂಕಕ್ಕೀಡಾಗಿದ್ದರು.