ಬೆಂಗಳೂರು: ಐಪಿಎಸ್ ಹಿರಿಯ ಅಧಿಕಾರಿ ರೂಪಾ ಅವರ ಹೆಸರಲ್ಲಿ ಕರೆ ಮಾಡಿ ರೂಮ್ ಬುಕ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ.
ಆಶಾ ಪ್ರಕಾಶ್ ಬಂಧಿತ ಮಹಿಳೆ. ಈಕೆ ಹಿರಿಯ ಪೊಲೀಸ್ ಅಧಿಕಾರಿ ರೂಪಾ ಅವರು ಹೆಸರಲ್ಲಿ ಹೋಟೆಲ್ ಬುಕ್ ಮಾಡಿದ್ದಳು. ನಾನು ರೂಪಾ ಕೆಲಸದ ನಿಮಿತ್ತ ಜನವರಿಯಲ್ಲಿ ಉತ್ತರ ಪ್ರದೇಶದ ಲಕ್ನೋಗೆ ಬರುತ್ತಿರುವುದಾಗಿ ಲಕ್ನೋ ಎಸ್‍ಪಿಗೆ ಕರೆ ಮಾಡಿ ಮೂರು ದಿನಕ್ಕೆ ರೂಮ್ ಬುಕ್ ಮಾಡಿಸಿದ್ದಳು. ಮೂರು ದಿನ ಆದರೂ ರೂಪಾ ಬಾರದೇ ಇದ್ದಾಗ ಎಸ್‍ಪಿ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಲಕ್ನೋ ಎಸ್‍ಪಿ ರೂಪಾಗೆ ಕರೆ ಮಾಡಿ ಕೇಳಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಐಪಿಎಸ್ ಅಧಿಕಾರಿ ಡಿ. ರೂಪಾ ಹೆಸರಿನಲ್ಲಿ ಲಕ್ನೋ ಹೋಟೆಲ್ ನಲ್ಲಿ ರೂಂ ಬುಕ್!
Advertisement
Advertisement
ಕಾಲ್ ಮಾಡಿದ್ದು ಯಾಕೆ?
ಪತಿ ಇಲ್ಲ ಆಶಾ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಹೀಗಾಗಿ ಈಕೆಗೆ ಅನೇಕ ದೊಡ್ಡ ದೊಡ್ಡ ರಾಜಕಾರಿಣಿಗಳ, ಅಧಿಕಾರಿಗಳ ಲಿಂಕ್ ಇತ್ತು. ರೂಪಾ ಅವರು ಕೂಡ ಕರ್ನಾಟಕದಲ್ಲಿ ದೊಡ್ಡ ಅಧಿಕಾರಿಯಾಗಿದ್ದಾರೆ. ಹೀಗಾಗಿ ಇವರ ಹೆಸರು ಬಳಿಸಿಕೊಂಡರೆ ತಾನು ಸಿಕ್ಕಿಹಾಕಿಕೊಳ್ಳಲ್ಲ ಎಂದು ಪ್ಲಾನ್ ಮಾಡಿ ಅವರ ಹೆಸರನ್ನು ಬಳಸಿಕೊಂಡು ರೂಮ್ ಬುಕ್ ಮಾಡಿದ್ದಳು. ಲಕ್ನೋ ಪೊಲೀಸರು ಈ ಕುರಿತು ವಿಚಾರಣೆ ಮಾಡುವ ವೇಳೆ ಈಕೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಬಂದಿದೆ.
Advertisement
ಏನಿದು ಪ್ರಕರಣ?
ಮಹಿಳೆಯೊಬ್ಬರು ರೂಪಾ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಉತ್ತರ ಪ್ರದೇಶದ ಲಕ್ನೋ ಪೊಲೀಸರಿಗೆ ಕರೆ ಮಾಡಿದ್ದಳು. ನಾನು ಗೃಹ ರಕ್ಷಕ ದಳದ ಐಜಿಪಿ ಡಿ.ರೂಪಾ ಮಾತನಾಡುತ್ತಿದ್ದೇನೆ. ಕೆಲಸದ ನಿಮಿತ್ತ ಲಕ್ನೋಗೆ ಬರುತ್ತಿದ್ದೇನೆ. ಡಿಸೆಂಬರ್ 29 ರಿಂದ ಜನವರಿ 3ರವರೆಗೆ ಒಳ್ಳೆಯ ಹೋಟೆಲ್‍ನಲ್ಲಿ ರೂಂ ಬುಕ್ ಮಾಡಿ ಎಂದು ಹೇಳಿದ್ದಳು. ಅವರ ಮಾತನ್ನು ನಂಬಿದ್ದ ಅಧಿಕಾರಿ, ರೂಂ ಕೂಡ ಬುಕ್ ಮಾಡಿದ್ದರು. ಈ ಬಗ್ಗೆ ಪರಿಚಯದ ಅಧಿಕಾರಿ ವಿಕಾಸ್ ಚಂದ್ರ ತ್ರಿಪಾಠಿ ರೂಪಾಗೆ ಕರೆ ಮಾಡಿ ವಿಚಾರಿಸಿದಾಗ ಈ ಕೃತ್ಯ ಬಯಲಾಗಿತ್ತು.
Advertisement
ಯಾರೋ ನಿಮ್ಮ ಹೆಸರು ಹೇಳಿಕೊಂಡು ಈ ನಂಬರ್ ನಿಂದ ಕರೆ ಮಾಡಿದ್ದರು ಎಂದು ತ್ರಿಪಾಠಿ ಅವರು ರೂಪಾ ಅವರಿಗೆ ಕರೆ ಬಂದಿದ್ದ ನಂಬರ್ ನೀಡಿದ್ದರು. ರೂಪಾ ಅವರು ಆ ನಂಬರ್ ಗೆ ಕರೆ ಮಾಡಿದಾಗ ಮಹಿಳೆ ಸರಿಯಾಗಿ ಮಾತನಾಡದ ಕಾರಣ ಪೊಲೀಸರಿಗೆ ದೂರು ನೀಡಿದ್ದರು.
ತಮ್ಮ ಹೆಸರನ್ನು ದುರುಪಯೋಗ ಮಾಡಿಕೊಂಡ ಮಹಿಳೆಯನ್ನು ಪತ್ತೆ ಮಾಡುವಂತೆ ಬನಶಂಕರಿ ಪೊಲೀಸ್ ಠಾಣೆಗೆ ರೂಪಾ ಅವರು ದೂರು ಕೊಟ್ಟಿದ್ದರು. ಈ ಕುರಿತು ಪೊಲೀಸರು ವಂಚನೆ ಹಾಗೂ ಅಪರಾಧ ಕೃತ್ಯಕ್ಕೆ ಯತ್ನಿಸಿದ ಆರೋಪದಡಿ ಐಪಿಸಿ 417, 420(ವಂಚನೆ) 511 (ಅಪರಾಧ ಕೃತ್ಯ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದರು. ಈಗ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಆಶಾ ಪ್ರಕಾಶ್ ನನ್ನು ಬಂಧಿಸಿದ್ದಾರೆ. ಐಪಿಎಸ್‍ಅಧಿಕಾರಿ ರೂಪಾ ಅವರು ಈಗ ರೈಲ್ವೇ ಪೊಲೀಸ್ ವಿಭಾಗದ ಐಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv