– ಕೊನೆಗೂ ಆರೋಪಿ ಅರೆಸ್ಟ್
ರಾಯಚೂರು: ಜಿಲ್ಲೆಯ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
50 ವರ್ಷದ ಅರುಣ್‍ಕುಮಾರ್ ಠಾಕೂರ್ ಬಂಧಿತ ಆರೋಪಿ. ಈತ ಸ್ಟೇಷನರಿ ಅಂಗಡಿ ವ್ಯಾಪಾರಿಯಾಗಿದ್ದನು. ಫೆಬ್ರವರಿ 25 ರಂದು ಶಾಲೆಗೆ ಹೋಗಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರು ಮನೆಗೆ ಊಟಕ್ಕೆ ಹೋಗುತ್ತಿದ್ದರು. ಈ ವೇಳೆ ಆರೋಪಿ ಠಾಕೂರ್ ಅಂಗಡಿಯೊಳಗೆ ಅವರಿಬ್ಬರನ್ನು ಕರೆದು ಅತ್ಯಾಚಾರ ಎಸಗಿದ್ದನು.
Advertisement
Advertisement
ಅಷ್ಟೇ ಅಲ್ಲದೆ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಸ್ಟೇಷನರಿ ಸಾಮಾನುಗಳನ್ನ ನೀಡಿ ಬೆದರಿಸಿ ಕಳುಹಿಸಿದ್ದನು. ಘಟನೆ ಬಳಿಕ ಆರೋಪಿ ಠಾಕೂರ್ ಪರಾರಿಯಾಗಿದ್ದನು.
Advertisement
ಈ ಘಟನೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಕಾವಿ ವೇಷ ಧರಿಸಿ ಓಡಾಡುತ್ತಿದ್ದ ಆರೋಪಿ ಠಾಕೂರ್ ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.