– ಜಾಮೀನು ಪಡೆದಿದ್ದ ಪುಂಡರಿಗೆ ಬಿಗ್ ಶಾಕ್!
ಬೆಂಗಳೂರು: ಸೋಲದೇವನಹಳ್ಳಿಯಲ್ಲಿ (Soladevanahalli) ಯುವಕನ ಕಿಡ್ನಾಪ್ ಮಾಡಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಇಡೀ ನಾಗರೀಕ ಸಮಾಜವನ್ನ ತಲೆ ತಗ್ಗಿಸುವಂತೆ ಮಾಡಿತ್ತು. ಅಶ್ಲೀಲ ಫೋಟೋ ಕಳಿಸಿದ್ದ ಅಂತ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿದ ರೀತಿ ಕಿಡ್ನ್ಯಾಪ್ ಮಾಡಿ, ಬಟ್ಟೆ ಬಿಚ್ಚಿಸಿ ಕುಶಾಲ್ ಎಂಬ ಯುವಕನ ಮೇಲೆ ಪುಂಡರ ಗ್ಯಾಂಗ್ ಅಟ್ಟಹಾಸ ನಡೆಸಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು 8 ಮಂದಿಯನ್ನ ಅರೆಸ್ಟ್ ಮಾಡಿದ್ರು. ಪರೀಕ್ಷೆ ಹಿನ್ನೆಲೆ ಎಲ್ಲರಿಗೂ ಬೇಲ್ ಸಿಕ್ಕಿತ್ತು. ಆದ್ರೆ, ಈ ಕೇಸ್‌ಗೆ ಈಗ ಟ್ವಿಸ್ಟ್ ಸಿಕ್ಕಿದೆ.
ಪರೀಕ್ಷೆಯ ನೆಪ ಹೇಳಿ 8 ಆರೋಪಿಗಳು ಕೋರ್ಟ್‌ನಲ್ಲಿ ಜಾಮೀನು (Court Bail) ಪಡೆದಿದ್ರು. ಆದ್ರೆ, ಪರೀಕ್ಷೆ ಬರೆಯೋದಕ್ಕೆ ಆರೋಪಿಗಳಿಗೆ ಕಾಲೇಜು ಆಡಳಿತ ಮಂಡಳಿ ಅನುಮತಿಯೇ ಕೊಟ್ಟಿಲ್ಲ. ಪುಂಡ ವಿದ್ಯಾರ್ಥಿಗಳ ಹಾಜರಾತಿ ಇಲ್ಲದ ಕಾರಣ, ಪರೀಕ್ಷೆ ಬರೆಯಲು ಅನುಮತಿ ನೀಡಿಲ್ಲ. ಅಲ್ಲದೇ, ಹಾಲ್ ಟಿಕೆಟ್ ಸಹ ಕೊಟ್ಟಿಲ್ಲ. ಹೀಗಾಗಿ, ಪೊಲೀಸರು ಜಾಮೀನು ರದ್ದಿಗೆ ಕೋರ್ಟ್ ಮೊರೆ ಹೋಗಿದ್ದಾರೆ. ಮಧ್ಯಂತರ ಜಾಮೀನು ವಜಾಗೊಳಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಪರೀಕ್ಷೆಗೆ ಅರ್ಹತೆ ಇಲ್ಲದೆ ಇದ್ದರೂ ಸುಳ್ಳು ಹೇಳಿ ಆರೋಪಿಗಳು ಜಾಮೀನು ಪಡೆದಿದ್ದಾರೆ ಎಂದು ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಧಾರವಾಡದಲ್ಲಿ ಹೃದಯಾಘಾತಕ್ಕೆ 26 ವರ್ಷದ ಯುವತಿ ಬಲಿ
ಇನ್ನೂ, ಸೋಲದೇವನಹಳ್ಳಿ ಪೊಲೀಸರು ಪ್ರಕರಣ ಎ1 ಆರೋಪಿ ಹೇಮಂತ್‌ನನ್ನ ಅರೆಸ್ಟ್ ಮಾಡಿದ್ದಾರೆ. ಕುಶಾಲ್ ಕಿಡ್ನ್ಯಾಪ್‌ಗೆ ಈತನೇ ಪ್ಲ್ಯಾನ್ ಮಾಡಿದ್ದ. ಕಿಡ್ನಾಪ್ ಮಾಡಿ ಬೆತ್ತಲೆ ಮಾಡಿ ಹಲ್ಲೆ ನಡೆಸಿದ್ದ. ಹಲ್ಲೆ ವಿಡಿಯೋದಲ್ಲಿ ಹೇಳಿದಂತೆ ಎ1 ಆರೋಪಿಯಾಗಿದ್ದ ಹೇಮಂತ್, ಎಫ್‌ಐಆರ್ ಆಗ್ತಿದ್ದಂತೆ ತಲೆ ಮರೆಸಿಕೊಂಡಿದ್ದ. ತುಮಕೂರಿನಲ್ಲಿ ಎಸ್ಕೇಪ್ ಆಗ್ತಿದ್ದ ವೇಳೆ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಲಾಗಿದೆ. ಇದನ್ನೂ ಓದಿ: ಮೂವರು ಶಂಕಿತ ಉಗ್ರರ ಬಂಧನ ಕೇಸ್ – ಬೆಂಗ್ಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್ ಮಾಡಿದ್ದ ಉಗ್ರ ನಾಸೀರ್
ಈ ಹಿಂದೆ ಹೇಮಂತ್ ಮೇಲೆ ಇದೇ ರೀತಿ ಹಲ್ಲೆ ಮಾಡಿರುವ ಆರೋಪದ ಮೇಲೆ ಮೂರು ಎಫ್‌ಐಆರ್ ದಾಖಲಾಗಿವೆ. 2023 ರಲ್ಲಿ ಒಂದು ಹಾಗೂ 2024 ರಲ್ಲಿ ಎರಡು ಕೇಸ್ ದಾಖಲಾಗಿದ್ದು, ಇದು ಸೇರಿ 4 ಕೇಸ್ ನಲ್ಲಿ ಭಾಗಿಯಾಗಿದ್ದಾನೆ. ಇದನ್ನೂ ಓದಿ: ಸಿಎಂ, ಡಿಸಿಎಂ ಹೆಸ್ರಲ್ಲಿ ಕೋಟಿ ಕೋಟಿ ವಂಚನೆ – 20ಕ್ಕೂ ಹೆಚ್ಚು ಮಂದಿಗೆ ಪಂಗನಾಮ ಹಾಕಿದ್ದ ಮಹಿಳೆ ಅರೆಸ್ಟ್