ಚಿತ್ರದುರ್ಗ: ಆರೋಪಿಯನ್ನು ಅರೆಬೆತ್ತಲೆಯಾಗಿ ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಈ ಘಟನೆ ನಡೆದಿದೆ. ನಾಯಕನಹಟ್ಟಿ ಗ್ರಾಮದ ವಿಗ್ರಹ ವ್ಯಾಪಾರಿ ವೇಣುಗೋಪಾಲ್ ಬಂಧಿತ ಆರೋಪಿ. ಈತ ಪಕ್ಕದ ಮನೆಯವರ ಜೊತೆ ಗಲಾಟೆ ಮಾಡಿದ್ದ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿತ್ತು.
Advertisement
Advertisement
ಈ ಹಿನ್ನೆಲೆಯಲ್ಲಿ ವೇಣುಗೋಪಾಲ್ ಮನೆಗೆ ಹೋದ ಕಾನ್‌ಸ್ಟೇಬಲ್ ಚಂದ್ರನಾಯಕ್ ಅರೆಸ್ಟ್ ವಾರೆಂಟ್ ಹಿಡಿದು ಬಂದಿದ್ದರು. ಆ ಸಮಯದಲ್ಲಿ ವೇಣುಗೋಪಾಲ್ ಸ್ನಾನಕ್ಕೆ ಹೋಗಿದ್ದರು.
Advertisement
ಆದರೆ ನಾಯಕನಹಟ್ಟಿ ಪಿಎಸ್‌ಐ ಮಹೇಶ್ ಕೂಡಲೇ ಅವರನ್ನು ಕರೆತರುವಂತೆ ಕಾನ್‌ಸ್ಟೇಬಲ್ ಸೂಚನೆ ನೀಡಿದ್ದರಿಂದ ವೇಣುಗೋಪಾಲ್ ಎಷ್ಟೇ ಮನವಿ ಮಾಡಿಕೊಂಡರು, ಆರೋಪಿಯನ್ನು ಅರೆಬೆತ್ತಲೆ ಮೆರವಣಿಗೆ ಮೂಲಕ ನಾಯಕನಟ್ಟಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಈ ಬಗ್ಗೆ ಆರೋಪಿ ವೇಣುಗೋಪಾಲ್ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಭಾವನಾತ್ಮಕ ಹೇಳಿಕೆ ಹೃದಯ ಇದ್ದವರಿಗೆ ಮಾತ್ರ ಅರ್ಥವಾಗುತ್ತದೆ: ಎಚ್‍ಡಿಕೆ
Advertisement
ಆರೋಪಿಯನ್ನು ಪೊಲೀಸರು ಅರೆ ಬೆತ್ತಲೆಯಲ್ಲಿ ಠಾಣೆಗೆ ಕರೆದೊಯ್ಯುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲೆಯಾದ್ಯಂತ ಪ್ರಜ್ಞಾವಂತರಿAದ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಎಚ್ಚೆತ್ತಿರುವ ಚಿತ್ರದುರ್ಗ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಆರೋಪಿ ಬೇಕಂತಲೇ ಈ ರೀತಿ ಮಾಡಿದ್ದಾರೆ. ಪೊಲೀಸರು ಬಟ್ಟೆ ಹಾಕಿಕೊಳ್ಳಿ ಎಂದರೂ ಸಹ, ಯಾರ ಮಾತನ್ನು ಕೇಳದೆ ಏಕಾಏಕಿ ರಸ್ತೆಗೆ ಬಂದಿದ್ದಾರೆ. ಸದ್ಯಕ್ಕೆ ವಿಚಾರಣೆ ನಡೆಯುತ್ತಿದೆ ಎಂದು ಚಿತ್ರದುರ್ಗ ಎಸ್.ಪಿ ಜಿ. ರಾಧಿಕಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ
ಅರೆಬೆತ್ತಲೆ ಸ್ಥಿತಿಯಲ್ಲಿ ಕರೆತಂದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಯಕನಹಟ್ಟಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.