ಮೈಸೂರು: ಸಾಂಸ್ಕೃತಿಕ ನಗರಿಯನ್ನ ಬೆಚ್ಚಿ ಬೀಳಿಸುವ ಡ್ರಗ್ಸ್ ಮಾರಾಟ ಜಾಲ ಬೆಳಕಿಗೆ ಬಂದಿದೆ. ಭಾರತದಲ್ಲಿ ನಿಷೇಧಿತ ಖಾಟ್ ಡ್ರಗ್ಸ್ ಮಾರಾಟಕ್ಕೆ ಮುಂದಾಗಿದ್ದ ವಿದೇಶಿಗನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿಗೆ ವಿದ್ಯಾಭ್ಯಾಸಕ್ಕಾಗಿ ಬಂದಿರುವ ವಿದೇಶಿ ವಿದ್ಯಾರ್ಥಿಗಳಿಂದ ಈ ಡ್ರಗ್ಸ್ ಮಾರಾಟ ನಡೆಯುತ್ತಿದೆ. ಸರ್ಕಾರಿ ಕೊರಿಯರ್ ಗಳನ್ನೆ ಡ್ರಗ್ಸ್ ಸಾಗಣಿಕೆಗೆ ದಂಧೆಕೋರರು ಬಳಸಿಕೊಂಡಿದ್ದಾರೆ.
Advertisement
ಕೊರಿಯರ್ ಮೂಲಕ ಖಾಟ್ ಡ್ರಗ್ಸ್ ನ್ನು ಮುಂಬೈಗೆ ಕಳುಹಿಸುವಾಗ ಯಮನ್ ದೇಶದ ಆಮ್ಜಾ ಅಬ್ದೋವ ಖಾಸಿಂ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. 3 ವರ್ಷಗಳ ಹಿಂದೆ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಿದ್ದ ಆಮ್ಜಾ ಯಮನ್ ದೇಶದಿಂದ ಕೊರಿಯರ್ ಮೂಲಕವೇ ಖಾಟ್ ಡ್ರಗ್ಸ್ ತರಿಸಿದ್ದಾನೆ. ಈತನ ಬಳಿ ಇದ್ದ ಸುಮಾರು 7 ಕೆ.ಜಿ ತೂಕದ ಖಾಟ್ ಡ್ರಗ್ಸ್ ವಶ ಪಡಿಸಿಕೊಳ್ಳಲಾಗಿದೆ.
Advertisement
ಒಂದು ಕೆ.ಜಿ. ಖಾಟ್ ಬೆಲೆ ಬರೋಬ್ಬರಿ 2.60 ಲಕ್ಷ ರೂ ಇದ್ದು ಒಟ್ಟು 18 ಲಕ್ಷ ಮೌಲ್ಯದ ಖಾಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮೈಸೂರಿನಲ್ಲಿ ವಿದೇಶಿ ವಿದ್ಯಾರ್ಥಿಗಳ ಅಕ್ರಮ ವಿಸಾ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ವಿದೇಶಿ ವಿದ್ಯಾರ್ಥಿಗಳಿಂದಲೇ ಡ್ರಗ್ಸ್ ಮಾರಾಟ ಜಾಲ ಬೆಳಕಿಗೆ ಬಂದಿದೆ.
Advertisement