ಬೆಂಗಳೂರು: ಯವತಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಅದ್ರೆ ಕೇವಲ ಅರ್ಧಗಂಟೆಯಲ್ಲಿ ಪ್ರಕರಣವನ್ನು ಬೇಧಿಸಿ ಯುವತಿಯನ್ನು ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Advertisement
ಯುವತಿ ಚಿತ್ರದುರ್ಗದಿಂದ ದೊಡ್ಡಪ್ಪನ ಮಗ ರಾಜೀವ್ ಜೊತೆ ಬೆಂಗಳೂರಿನ ಹೊಸೂರು ರಸ್ತೆಯ ಸಂಬಂಧಿಕರ ಮನೆಗೆ ಬಂದಿದ್ದರು. ಆದ್ರೆ ಸಂಬಂಧಿಕರ ಮನೆ ಸಿಗದ ಕಾರಣ ಯುವತಿ ಮತ್ತು ಅಕೆಯ ಅಣ್ಣ ವಾಪಸ್ಸು ಊರಿಗೆ ಹೋಗಲು ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ರಾತ್ರಿ 1.30ರ ಸಮಯಕ್ಕೆ ಬಂದಿದ್ರು. ಆ ಸಂದರ್ಭದಲ್ಲಿ ಅಂಡರ್ ಪಾಸ್ ಬಳಿ ಇವ್ರನ್ನ ಅಡ್ಡಗಟ್ಟಿದ ಮೂರು ಜನ ಪುಂಡರು ಯುವತಿಯ ಅಣ್ಣನಿಗೆ ಥಳಿಸಿ ಯುವತಿಯನ್ನ ಅಪಹರಿಸಿದ್ರು. ಇದನ್ನ ಕಂಡ ಆಟೋ ಚಾಲಕರೊಬ್ಬರು ಕೂಡಲೇ ಯಶವಂತಪುರ ಪೋಲಿಸ್ರಿಗೆ ವಿಷಯ ತಿಳಿಸಿದ್ದಾರೆ.
Advertisement
Advertisement
ಕಡಿಗೇಡಿಗಳು ಯುವತಿಯನ್ನ ಗೋಡೌನ್ ಒಂದ್ರಲ್ಲಿ ರೇಪ್ ಮಾಡಲು ಪ್ರಯತ್ನ ಪಟ್ಟಿದ್ರು. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸ್ರು, ಕಿಡ್ನ್ಯಾಪ್ ಆದ ಅರ್ಧಗಂಟೆಯಲ್ಲೇ ಟ್ರಾವೆಲ್ ಆಫೀಸಿನ ಗೋಡೌನ್‍ನಲ್ಲಿ ಯುವತಿಯನ್ನ ರಕ್ಷಿಸಿ ಕರೆತಂದಿದ್ದಾರೆ. ಅಪಹರಣ ಮಾಡಿದ ಮೂವರಲ್ಲಿ ಫಯಾಜ್ ಎಂಬವನನ್ನು ಬಂಧಿಸಿರುವ ಪೊಲೀಸ್ರು ಇನ್ನಿಬ್ಬರಾದ ಝಬೇರ್ ಹಾಘು ಫತಾಕಿ ಬಾಬುಗಾಗಿ ಬಲೆ ಬೀಸಿದ್ದಾರೆ.