Connect with us

Districts

ಸಹಜ ಸ್ಥಿತಿಯತ್ತ ಶಿರಸಿ-ಎಲ್ಲಿ ಏನಾಗುತ್ತೋ ಅನ್ನೋ ಭಯದಲ್ಲಿ ಪೊಲೀಸರು

Published

on

-ಮುರುಡೇಶ್ವರ, ಯಲ್ಲಾಪುರದಲ್ಲಿ ಬಂದ್ ವದಂತಿ!

ಕಾರವಾರ: ಬಂದ್ ಬಂದ್ ಬಂದ್. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಕಳೆದ ಐದು ದಿನಗಳಿಂದ ನಡೀತಿರೋ ಬಂದ್ ಗಳಿಂದ ಪೊಲೀಸರು ಹೈರಾಣಾಗಿ ಹೋಗಿದ್ದಾರೆ. ಇಂದು ಎಲ್ಲಿ ಗಲಾಟೆ ನಡೆಯುತ್ತೋ, ಎಲ್ಲಿ ಬಂದ್ ಆಗುತ್ತೋ ಅನ್ನೋ ಆತಂಕದಲ್ಲೇ ಪೊಲೀಸರು ಕಾಲ ಕಳೆಯುವಂತಾಗಿದೆ.

ಅಲ್ಲದೆ ಈ ಮಧ್ಯೆ ಇಂದು ಮುರುಡೇಶ್ವರ ಮತ್ತು ಯಲ್ಲಾಪುರದಲ್ಲಿ ಬಂದ್ ಆಚರಿಸಲಾಗುತ್ತೆ ಅನ್ನೋ ವದಂತಿಗಳು ಹಬ್ಬಿವೆ. ಡಿಸೆಂಬರ್ 6ರಂದು ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ ಎರಡು ದಿನ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರು. ಈ ವೇಳೆ ಚಂದಾವರದಲ್ಲಿ ಧ್ವಜದ ವಿಚಾರವಾಗಿ ಎರಡು ಕೋಮಿನವರ ನಡುವೆ ಗಲಾಟೆ ನಡೆದು ಅದು ಕೋಮುಗಲಭೆ ಬಣ್ಣ ಪಡಿತು.

ಅಂದು ಕಾಣೆಯಾಗಿದ್ದ ಹಿಂದೂ ಯುವಕ ಪರೇಶ್ ಮೇಸ್ತ ಮೃತದೇಹ ಡಿಸೆಂಬರ್ 8ರಂದು ಕೆರೆಯಲ್ಲಿ ಪತ್ತೆಯಾಯ್ತು. ಇದಾದ ಬಳಿಕ ಉತ್ತರಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಯುವಕನನ್ನು ಅನ್ಯಧರ್ಮೀಯರೇ ಕೊಲೆ ಮಾಡಿದ್ದಾರೆಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಹೀಗಾಗಿ ಹೊನ್ನಾವರ, ಕುಮಟಾದಲ್ಲಿ ನಡೆದಿದ್ದ ಬಂದ್‍ಗಳು ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು.

ಅಷ್ಟೇ ಅಲ್ಲದೆ ಮಂಗಳವಾರ ಶಿರಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿಪಾಸ್ತಿ ಹಾಳಾಗಿದ್ದು, ಪೊಲೀಸರು ಸೇರಿದಂತೆ 13 ಮಂದಿಗೆ ಗಾಯಗಳಾಗಿತ್ತು. ಇನ್ನು ಮಂಗಳವಾರ ನಿಷೇಧಾಜ್ಞೆ ಉಲ್ಲಂಘಿಸಿ ಯಾತ್ರೆ ಹೊರಟಿದ್ದ ಶಿರಸಿ ಶಾಸಕ ಕಾಗೇರಿ ಸೇರಿದಂತೆ 70 ಮಂದಿ ಹಿಂದೂ ನಾಯಕರನ್ನು ಬಂಧಿಸಲಾಯ್ತು.

ಗಲಭೆ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಎಸ್‍ಎಸ್ ನಕುಲ್ ನೇತೃತ್ವದಲ್ಲಿ ಸಭೆ ನಡಿದಿದ್ದು, 11 ತಾಲೂಕಿನಲ್ಲಿಯೂ ಶಾಂತಿ ಸಭೆ ನಡೆಸುವಂತೆ ಎಸಿ ಹಾಗೂ ತಹಶೀಲ್ದಾರ್ ಗೆ ಮನವಿ ಮಾಡಿದ್ದಾರೆ. ಇನ್ನು ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ, ಇದೆಲ್ಲಾ ಸಂಘ ಪರಿವಾರಗಳ ಕಿತಾಪತಿ ಎಂದಿದ್ದಾರೆ.

https://www.youtube.com/watch?v=dZ2QYyQX7lQ

https://www.youtube.com/watch?v=6gDTIt2kztg

https://www.youtube.com/watch?v=mLbtbTysyQg

https://www.youtube.com/watch?v=wMhoBywNC5w

https://www.youtube.com/watch?v=YWp8oHGTKro

https://www.youtube.com/watch?v=l2bS6mJ_ysM

https://www.youtube.com/watch?v=9GHFyRsVyyQ

https://www.youtube.com/watch?v=N94xeWb2ryM

https://www.youtube.com/watch?v=d2u3htXp_s4

 

Click to comment

Leave a Reply

Your email address will not be published. Required fields are marked *