ಬೆಂಗಳೂರು: ನಾಗಮಂಗಲದಲ್ಲಿ (Nagamangala) ಗಣೇಶ ವಿಸರ್ಜನೆ (Ganesh Procession) ವೇಳೆ ನಡೆದ ಕೋಮು ಗಲಭೆಗೆ ಪೊಲೀಸ್ (Police) ಮತ್ತು ಗುಪ್ತಚರ ಇಲಾಖೆ (Intelligence Bureau) ವೈಫಲ್ಯವೇ ಕಾರಣ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.
ಹೌದು. ಕಳೆದ ವರ್ಷವೇ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಗಲಾಟೆ ನಡೆದಿದ್ದ ಕಾರಣ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕಿತ್ತು. ಆದರೆ ಮುನ್ನೆಚ್ಚರಿಕೆ ವಹಿಸದ ಕಾರಣ ಈ ಗಲಭೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ವೈಫಲ್ಯ ಹೇಗೆ?
ನಾಗಮಂಗಲದ ಸ್ಥಿತಿಗತಿ ಗಮನಿಸಿದರೆ ಇದು ಪೂರ್ವನಿಯೋಜಿತ ಕೃತ್ಯ ಎನ್ನುವುದು ತಿಳಿಯುತ್ತದೆ. ಇದಕ್ಕೆ ಸಾಕ್ಷಿ ಪೆಟ್ರೋಲ್ ಬಾಂಬ್, ಕಲ್ಲು, ತಲವಾರ್‌ಗಳು. ಭಾರೀ ಪ್ರಮಾಣದಲ್ಲಿ ಕಲ್ಲುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಇದರ ಜೊತೆ ಪೆಟ್ರೋಲ್ ಬಾಂಬ್ ಸಂಗ್ರಹಿಸುವ ಮೂಲಕ ಮೊದಲೇ ಗಲಭೆಗೆ ಬೇಕಾದ ವಸ್ತುಗಳನ್ನು ರಹಸ್ಯವಾಗಿ ಇಟ್ಟುಕೊಂಡಿದ್ದರು. ಜೊತೆಗೆ ಭಾರೀ ಸಂಖ್ಯೆಯಲ್ಲಿ ಯುವಕರು ಮಸೀದಿ ರಸ್ತೆಯಲ್ಲಿ ಸೇರಿದ್ದರು. ಇಷ್ಟೆಲ್ಲಾ ಪೂರ್ವಭಾವಿ ಸಿದ್ಧತೆ ಮಾಡಿದ್ದರೂ ಗುಪ್ತಚರ ಇಲಾಖೆ ಈ ವಿಚಾರ ತಿಳಿಯುವಲ್ಲಿ ವಿಫಲವಾಗಿತ್ತು. ಈ ಪೂರ್ವಭಾವಿ ವಿಚಾರ ಗೊತ್ತಾಗಿದ್ದರೆ ಗಲಭೆಯನ್ನು ಮಟ್ಟ ಹಾಕಬಹುದಿತ್ತು. ಇದನ್ನೂ ಓದಿ: ನಾನಿನ್ನೂ ವೆಬ್‌ಸೀರಿಸ್ ನೋಡಿಲ್ಲ, ಮಾಡುವವರು ಸರ್ಕಾರವನ್ನು ಒಳ್ಳೆಯ ರೀತಿಯಲ್ಲಿ ತೋರಿಸಲ್ಲ: ಎಸ್.ಜೈಶಂಕರ್
Advertisement
ಗಲಭೆಗೂ ಮುನ್ನವೇ ಪೊಲೀಸ್ ಇಲಾಖೆ ಮೈ ಮರೆತಿತ್ತು. ಬದ್ರಿಕೊಪ್ಪಲು ಗ್ರಾಮದಿಂದ ಹೊರಟ ಮೆರವಣಿಗೆ ಮಂಡ್ಯ ವೃತ್ತಕ್ಕೆ ಬಂದಾಗ ಅನ್ಯಕೋಮಿನ ಯುವಕರು ಕ್ಯಾತೆ ಎತ್ತಿದ್ದರು. ಈ ವೇಳೆ ಮೆರವಣಿಗೆಯ ದಾರಿಯನ್ನು ಬದಲಿಸಿದರು. ಈ ಸಂದರ್ಭದಲ್ಲೇ ಪ್ರತಿಭಟನಾ ಯುವಕರಿಗೆ ತಿಳಿ ಹೇಳಬಹುದಿತ್ತು. ಆದರೆ ಪೊಲೀಸರು ಆ ಕೆಲಸ ಮಾಡಿರಲಿಲ್ಲ.
Advertisement
ಪೊಲೀಸರು ಮತ್ತೆ ಮಸೀದಿ ಇರುವ ರಸ್ತೆಯಲ್ಲಿ ಮೆರವಣಿಗೆಗೆ ಅವಕಾಶ ನೀಡಿದ್ದರು. ಈ ವೇಳೆ ಜೈ ಗಣಪತಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಾಗಿ ಪ್ರತಿಯಾಗಿ ಅಲ್ಲಾ-ಹು ಅಕ್ಬರ್ ಘೋಷಣೆ ಕೂಗಿ ಕಲ್ಲು ತೂರಿದ್ದಾರೆ.
ಕಳೆದ ಬಾರಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಯಾವ ದಾರಿಯಲ್ಲಿ ಮೆರವಣಿಗೆ ಹೋಗುತ್ತದೆ? ಎಷ್ಟು ಪೊಲೀಸರನ್ನು ಭದ್ರತೆಗೆ ನಿಯೋಜಿಸಬೇಕು ಎನ್ನುವುದು ತಿಳಿದಿರಬೇಕಿತ್ತು. ಎರಡನೆಯದಾಗಿ ಪ್ರತಿಭಟನಾ ಯುವಕರಿಗೆ ಪೊಲೀಸರು ತಿಳಿ ಹೇಳಬೇಕಿತ್ತು. ಪೊಲೀಸರು ಈ ಎರಡು ಕೆಲಸ ಸರಿಯಾಗಿ ಮಾಡಿದ್ದರೆ ಗಲಭೆ ಆಗುತ್ತಿರಲಿಲ್ಲ ಎಂಬ ಮಾತು ಕೇಳಿ ಬಂದಿದೆ.
ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಗುಪ್ತಚರ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಶರತ್‌ಚಂದ್ರ ಅವರನ್ನು ಎತ್ತಗಂಡಿ ಮಾಡಲಾಗಿದೆ. ಇದರ ಜೊತೆ ನಾಗಮಂಗಲ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅಶೋಕ್ ಕುಮಾರ್ (Ashok Kumar) ಅವರನ್ನು ದಕ್ಷಿಣ ವಲಯ ಡಿಐಜಿಪಿ ಬೋರಲಿಂಗಯ್ಯ ಅವರು ಅಮಾನತು ಮಾಡಿ ಆದೇಶ ಪ್ರಕಟಿಸಿದ್ದಾರೆ.