ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ ಪೊಲೀಸರಿಗೆ ದಂಡ ವಿಧಿಸಲಾಗಿದೆ. ಎಸ್.ಐ ಸೋಮಶೇಖರ್ ಹಾಗೂ ಹೆಚ್.ಸಿ ಮಂಜುನಾಥ್‍ಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದನ್ನು ಕಾಮನ್ ಮ್ಯಾನ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ದಿನಾಂಕ ಹಾಗೂ ಫೊಟೋ ಸಮೇತ ಟ್ವೀಟ್ ಮಾಡಲಾಗಿತ್ತು. ಪೊಲೀಸರು ಟ್ರಾಫಿಕ್ ರೂಲ್ ಬ್ರೇಕ್ ಮಾಡಿರುವುದನ್ನು ಮಾರ್ಕ್ ಕೂಡ ಮಾಡಿ ಟ್ವಿಟ್ಟರ್ ನಲ್ಲಿ ಹಾಕಿಕೊಂಡು ಭಾಸ್ಕರ್ ರಾವ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
Advertisement
@btppubliceye @blrcitytraffic @jointcptraffic Traffic police violating One way rules
Place:Bashyam Circle Sadashivnagar,
Date:21.10.2019,
Time: 02.23.38 PM @deepolice12 pic.twitter.com/t6HwvMLBaz
— Common Man (@vachan1) October 21, 2019
Advertisement
ಸಾಂಕಿ ರಸ್ತೆಯಲ್ಲಿ ಒನ್ ವೇಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಪೇದೆ ಬೈಕ್ ಚಲಾಯಿಸಿದ್ದರು. ಪೊಲೀಸರ ಈ ನಡೆಯನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
Advertisement
ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಟ್ರಾಫಿಕ್ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡರು ಪೊಲೀಸರ ಮೇಲೆ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
Advertisement
They shouldn’t be doing but they obviously are on a assignment..
— Bhaskar Rao (@Nimmabhaskar22) October 21, 2019