ಕೀವ್/ಮಾಸ್ಕೋ: ಉಕ್ರೇನ್ (Ukraine) ಗಡಿಗೆ ಕೇವಲ 5 ಕಿಮೀ ದೂರದಲ್ಲಿರುವ ಪೋಲೆಂಡ್‌ನ (Poland) ಪ್ರಜೊವೊಡೋವ್ ಎಂಬ ಹಳ್ಳಿಯಲ್ಲಿ ಕ್ಷಿಪಣಿಯೊಂದು ಅಪ್ಪಳಿಸಿದೆ.
ಆರಂಭದಲ್ಲಿ ಇದು ರಷ್ಯಾ (Russia) ಪ್ರಯೋಗಿಸಿದ ಕ್ಷಿಪಣಿ ಎಂದು ಸುದ್ದಿಯಾಗಿತ್ತು. ಇಬ್ಬರು ನಾಗರಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಪೋಲೆಂಡ್‌ನಲ್ಲಿ ಹೈ ಅಲರ್ಟ್ ಸೃಷ್ಟಿಯಾಗಿದ್ದು ಅಲ್ಲಿನ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ (Investigation) ಇದು ಉಕ್ರೇನ್ ಪ್ರಯೋಗಿಸಿದ ಕ್ಷಿಪಣಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೋಲೆಂಡ್ ಸೇನಾ (Poland Army) ಅಧಿಕಾರಿಗಳು ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಧಗ ಧಗನೆ ಹೊತ್ತಿ ಉರಿದ ಜಮ್ಮು-ಕಾಶ್ಮೀರದ ಜಾಮಿಯಾ ಮಸೀದಿ
Advertisement
Advertisement
ನಮ್ಮ ಕ್ಷಿಪಣಿ ದಾಳಿಯನ್ನು (Missile Attack) ತಡೆಯಲು ಉಕ್ರೇನ್ (Ukraine) ಹಾರಿಸಿದ ಏರ್ ಡಿಫೆನ್ಸ್ ಕ್ಷಿಪಣಿ ಎಂದು ರಷ್ಯಾ (Russia) ಹೇಳಿದೆ. ಉಕ್ರೇನ್ ಕ್ಷಿಪಣಿಯ ಫೋಟೋ ಲಭ್ಯವಾಗುತ್ತಿದ್ದಂತೆ ರಷ್ಯಾ ಪಾಶ್ಚಿಮಾತ್ಯ ಜಗತ್ತಿನ ಮೇಲೆ ಮುಗಿಬಿದ್ದಿದೆ. ಇದೆಲ್ಲಾ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸುವ ತಂತ್ರ ಎಂದು ಕಿಡಿಕಾರಿದೆ. ಆದರೆ ಉಕ್ರೇನ್ ಮಾತ್ರ ಇದು ತಮ್ಮ ಕೆಲಸವಲ್ಲ. ಇದು ರಷ್ಯಾದ ಕೆಲಸ. ಸಾಮೂಹಿಕ ಭದ್ರತೆ ಮೇಲಿನ ದಾಳಿ ಎಂದೇ ವಾದಿಸಿದೆ. ಇದನ್ನೂ ಓದಿ: ಸಂಸದರ ಟ್ವೀಟ್‍ಗೆ ಸಿಮೀತವಾದ ಸುರತ್ಕಲ್ ಟೋಲ್ ರದ್ದತಿ – ಮುಂದುವರಿದ ಹಣ ಸಂಗ್ರಹ
Advertisement
Advertisement
ರಷ್ಯಾ ಮತ್ತು ಉಕ್ರೇನ್ ನಡುವಿನ ಕದನ ತೀವ್ರಗೊಂಡಿದೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜಿ-20 ಶೃಂಗಸಭೆ ಉದ್ದೇಶಿಸಿ ಮಾತನಾಡುವ ವೇಳೆಯೇ, ಆ ದೇಶದ ಮೇಲೆ ರಷ್ಯಾ ಕ್ಷಿಪಣಿಗಳ ಸುರಿಮಳೆಗೈದಿದೆ.