ಬಾಲಿವುಡ್ ಸೂಪರ್ ಸ್ಟಾರ್ಸ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನಂದ ಕಿಶೋರ್

Public TV
1 Min Read
nanda kishore

ನ್ನಡ ಚಿತ್ರರಂಗದಲ್ಲಿ ಇದೀಗ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ನಂದ ಕಿಶೋರ್ ವೃತ್ತಿರಂಗದಲ್ಲಿ ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಗಾಂಧಿನಗರದಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ವಿಕ್ಟರಿ ಬಾರಿಸುವ `ಪೊಗರು’ ನಿರ್ದೇಶಕ ಈಗ ಬಿಟೌನ್‌ನ ಸ್ಟಾರ್ಸ್‌ಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.‌

nanda kishore 1ಚಂದನವನದ ನಟ ನಟಿಯರು ಮಾತ್ರ ಈಗ ಪರಭಾಷೆಗಳಲ್ಲಿ ಸೌಂಡ್ ಮಾಡ್ತಿರೋದು ಮಾತ್ರವಲ್ಲ ನಿರ್ದೇಶಕರು ಕೂಡ ಪರಭಾಷೆಗಳಲ್ಲಿ ಗುರುತಿಸಿಕೊಳ್ತಿದ್ದಾರೆ. ಈ ಸಾಲಿಗೆ `ರನ್ನ’, `ಪೊಗರು’, `ಮುಕುಂದ ಮುರಾರಿ’ ಚಿತ್ರಗಳ ನಿರ್ದೇಶಕ ನಂದ ಕಿಶೋರ್ ಕೂಡ ಒಬ್ಬರು. ಬಾಲಿವುಡ್ ಮತ್ತು ಟಾಲಿವುಡ್ ಸ್ಟಾರ್‌ಗಳಾದ ಸಂಜಯ್ ದತ್ ಮತ್ತು ವರುಣ್ ತೇಜ್ ಒಂದೇ ಸಿನಿಮಾದಲ್ಲಿ ತೋರಿಸಲು ಪ್ಲ್ಯಾನ್ ಮಾಡಿದ್ದಾರೆ.

nandakishore`ಕೆಜಿಎಫ್ 2′ ನಂತರ ಸಿಕ್ಕಾಪಟ್ಟೆ ಡಿಮ್ಯಾಂಡ್‌ನಲ್ಲಿರುವ ಸಂಜಯ್ ದತ್‌ಗಾಗಿಯೇ ಸೂಪರ್ ಕಥೆಯೊಂದನ್ನ ನಂದ ಕಿಶೋರ್ ರೆಡಿ ಮಾಡಿದ್ದಾರೆ. ಸಂಜಯ್ ದತ್ ಕಥೆ ಕೇಳಿ ಥ್ರಿಲ್ ಆಗಿ, ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ತೆಲುಗಿನ ಸ್ಟಾರ್ ವರುಣ್ ತೇಜ್ ಕೂಡ ಸಾಥ್ ನೀಡಿಲಿದ್ದಾರೆ. ಇದನ್ನೂ ಓದಿ:ಸೋದರ ಸೊಸೆ ತಾನ್ಯ ಸಾವಿನ ಕುರಿತು ದಿಯಾ ಮಿರ್ಜಾ ಭಾವುಕ

nanda kishoreಇತ್ತೀಚೆಗಷ್ಟೇ ನಿರ್ದೇಶಕ ನಂದ ಕಿಶೋರ್ ಕೂಡ ಮುಂಬೈಗೆ ಹೋಗಿ ಬಂದಿದ್ದಾರೆ. ಈ ಇಬ್ಬರು ಸ್ಟಾರ್‌ಗಳಿಂದ ಕಥೆಗೆ ಓಕೆ ಅಂದಿದ್ದು ಆಗಿದೆ. ಇನ್ನೂ ಅಧಿಕೃತ ಅನೌನ್ಸ್ ಆಗೋದೊಂದೆ ಬಾಕಿ. ಅಲ್ಲಿಯವರೆಗೂ ಚಿತ್ರದ ಮತ್ತಷ್ಟು ಅಪ್‌ಡೇಟ್‌ಗಾಗಿ ಕಾದು ನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *