ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್‌ಗೆ (Darshan) ರಾಜಾತಿಥ್ಯ ಸಿಗುತ್ತಿದೆ ಅಂತ ಫೋಟೋವೊಂದು ಭಾರೀ ಚರ್ಚೆ ಹುಟ್ಟು ಹಾಕಿದ ಬೆನ್ನಲ್ಲೇ ನಿರ್ದೇಶಕ ನಂದ ಕಿಶೋರ್ ಮಾತನಾಡಿದ್ದಾರೆ. ಎಐ ಟೆಕ್ನಾಲಜಿ ಬಂದಿರೋದ್ರಿಂದ ಫೋಟೋ ಮಾರ್ಫಿಂಗ್ ಮಾಡಿರಬಹುದು ಎಂದು ‘ಪೊಗರು’ ಡೈರೆಕ್ಟರ್ ನಂದ ಕಿಶೋರ್ (Nanda Kishore) ಮಾತನಾಡಿದ್ದಾರೆ.
Advertisement
ಎಐ ಟೆಕ್ನಾಲಜಿ ಬಂದಿರೋದ್ರಿಂದ ಯಾವ ಫೋಟೋನಾ ಹೇಗೆ ಬೇಕಾದರೂ ಮಾರ್ಪಿಂಗ್ ಮಾಡಬಹುದು. ಇನ್ನೂ ಪೊಲೀಸ್ ಇಲಾಖೆ ತುಂಬಾ ನಿಷ್ಠೆಯಿಂದ ಕೆಲಸ ಮಾಡುತ್ತಿದೆ. ಹಾಗಾಗಿ ಜೈಲಿನಲ್ಲಿ ಹೀಗೆ ಆಗ್ತಿದೆ ಅಂತ ನನಗೆ ಅನಿಸುತ್ತಿಲ್ಲ. ಬೇರೆ ಯಾವುದು ಫೋಟೋನೂ ವೈರಲ್ ಆಗಿಲ್ಲ. ಆದರೆ ಇದೇ ಫೋಟೋ ಎಲ್ಲಾ ಕಡೆ ವೈರಲ್ ಆಗ್ತಿದೆ ಅಂದರೆ ಏನಿದರ ಉದ್ದೇಶ ಎಂದು ಮಾತನಾಡಿದ್ದಾರೆ. ಈ ವಿಚಾರವಾಗಿ ಗೃಹಮಂತ್ರಿ ಪರಮೇಶ್ವರ್ ಅವರ ನಿರ್ಧಾರವನ್ನು ಪ್ರಶ್ನೆ ಮಾಡೋಕೆ ಆಗಲ್ಲ. ಆದರೆ ಇನ್ನೂ ಈ ಬಗ್ಗೆ ತನಿಖೆ ಆಗುತ್ತಿದೆ. ಸತ್ಯ ಆಚೆ ಬರುತ್ತದೆ ಕಾದು ನೋಡೋಣ ಎಂದಿದ್ದಾರೆ ನಂದ ಕಿಶೋರ್.
Advertisement
Advertisement
ಎಂತಹ ಮನುಷ್ಯನಾದರೂ ಪಶ್ಚಾತ್ತಾಪ ಇದ್ದೇ ಇರುತ್ತದೆ. ಟಿವಿ ಮುಂದೆ ಮಾಡಿದರೆ ಅದನ್ನು ಬೂಟಾಟಿಕೆ ಅಂತಾರೆ. ದರ್ಶನ್ ಅವರು ಪಶ್ಚಾತ್ತಾಪ ಪಡ್ತಿರೋದನ್ನ ಪೋಟೋ ತೆಗೆದಿಲ್ಲ. ಅವರ ಮುಂದೆ ಬಂದು ಮಗ ಅಪ್ಪಾಜಿ ಅನ್ನೋವಾಗ ಪಶ್ಚಾತ್ತಾಪ ಕಾಡಿರುತ್ತದೆ. ನಾವು ನಿಂತಿಕೊಂಡು ಜಡ್ಜ್ ಮಾಡೋಕೆ ಹೋಗಬಾರದು. ಇನ್ನೂ ವಿಲ್ಸನ್ ಗಾರ್ಡನ್ ನಾಗನ ಕುರಿತು ಎದುರಾದ ಪ್ರಶ್ನೆಗೆ, ಮನಪರಿವರ್ತನೆ ಆಗುವಂತ ಜಾಗದಲ್ಲಿ ಕ್ರೈಂ ಮಾಡಿದವರೇ ಇರುತ್ತಾರೆ ಅಲ್ವ. ಅಲ್ಲಿ ಸಾದು ಸಂತರು ಇರುತ್ತಾರಾ? ಎಂದು ಕೇಳಿದ್ದಾರೆ. ದೊಡ್ಡ ನಟ ದರ್ಶನ್ ಅವರ ಅಭಿಮಾನಿ ಇವರು ಆಗಿರಬಹುದು ಆ ಸಂದರ್ಭದಲ್ಲಿ ತೆಗೆದಿರಬಹುದು ಈ ಫೋಟೋ ಎಂದು ನಂದ ಕಿಶೋರ್ ಮಾತನಾಡಿದ್ದಾರೆ.
Advertisement
ಇದೆಲ್ಲವನ್ನು ನಾವು ಕಣ್ಣಾರೆ ನೋಡಿಲ್ಲ. ಇದು ಇನ್ನೂ ತನಿಖೆ ನಡೆಯುತ್ತಿದೆ. ಇದು ಮಾರ್ಫ್ಡ್ ಫೋಟೋ ನೋ ನಿಜವಾದ ಫೋಟೋನೋ ಗೊತ್ತಿಲ್ಲ ಸದ್ಯ ತನಿಖೆ ನಡೆಯುತ್ತಿದೆ. ಎಷ್ಟು ಜನ ಕಲಾವಿದರು ಇಲ್ಲ ಅಂದರು ಅವರ ವಾಯ್ಸ್ ಬಳಸ್ತಿದ್ದೀವಿ ಎಂದು ನಂದಕಿಶೋರ್ ವೈರಲ್ ಫೋಟೋ ಕುರಿತು ಮಾತನಾಡಿದ್ದಾರೆ. ಇನ್ನೂ ಈ ವೇಳೆ, ರೇಣುಕಾಸ್ವಾಮಿ ಕುಟುಂಬದ ಬಗ್ಗೆ ನಮಗೆ ತುಂಬಾ ದುಃಖ ಇದೆ. ಇಡೀ ಚಿತ್ರರಂಗ ಅವತ ಕುಟುಂಬದ ಪರ ನಿಂತಿದೆ. ಪಶ್ಚಾತ್ತಾಪ ಎಲ್ಲರಿಗೂ ಕಾಡುತ್ತಿದೆ ಎಂದು ಮಾತನಾಡಿದ್ದಾರೆ.