ಭುವನೇಶ್ವರ: ಲೈಂಗಿಕ ಅಪರಾಧಗಳಿಂದ ಮಕ್ಕಳ ವಿಶೇಷ ರಕ್ಷಣಾ ಕಾಯ್ದೆ(ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶ ಸುಭಾಶ್ ಕುಮಾರ್ ಬಿಹಾರಿ ಅವರು ಒಡಿಶಾದ ಕಟಕ್ ನಗರದ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸುಭಾಶ್ ಕುಮಾರ್ ಬಿಹಾರಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ತೋರುತ್ತದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕಟಕ್‌ನ ಸಹಾಯಕ ಪೊಲೀಸ್ ಕಮಿಷನರ್ ತಪಸ್ ಚಂದ್ರ ಪ್ರಧಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ 5 ಶಾಸಕರನ್ನು ಕಳೆದುಕೊಂಡ ನಿತೀಶ್ ಕುಮಾರ್ – ಜೆಡಿಯು ಎಂಎಲ್‌ಎಗಳು ಬಿಜೆಪಿಯೊಂದಿಗೆ ವಿಲೀನ
Advertisement
Advertisement
ಬಿಹಾರಿ ಅವರು 2 ದಿನಗಳ ರಜೆಯ ಬಳಿಕ ಶುಕ್ರವಾರ ಕೆಲಸಕ್ಕೆ ಮರಳಬೇಕಿತ್ತು. ಆದರೆ ಅವರು ಶುಕ್ರವಾರವೂ ರಜೆಗಾಗಿ ಅರ್ಜಿ ಸಲ್ಲಿಸಿದ್ದರು. ಅವರು ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅರ್ಜಿಯನ್ನು ಬರೆಯುವಂತೆ ತಿಳಿಸಿದ್ದಾಗಿ ಅವರ ಸ್ಟನೋಗ್ರಾಫರ್ ಆರ್‌ಎನ್ ಮಹಾಪಾತ್ರ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ನಿಂತಿದ್ದ ಬಸ್‍ಗೆ ಡಿಕ್ಕಿ ಹೊಡೆದ ಟ್ರಕ್ – ನಾಲ್ವರು ಸಾವು, 24 ಮಂದಿಗೆ ಗಾಯ
Advertisement
ಇದಾದ ಬಳಿಕ ಬಿಹಾರಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬಗ್ಗೆ ನನಗೆ ಮಾಹಿತಿ ಸಿಕ್ಕಿತು. ಅವರು ತಮ್ಮ ಪತ್ನಿ ಹಾಗೂ ಮಗಳು ಮನೆಯಲ್ಲಿ ಇಲ್ಲದಿದ್ದಾಗ ಈ ಘಟನೆ ನಡೆದಿದೆ. ಆದರೆ ಪೊಲೀಸರು ಅವರನ್ನು ಕಟಕ್‌ನ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು, ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ತಿಳಿಸಿದರು.
Advertisement
ಘಟನೆ ಬಗ್ಗೆ ಕಟಕ್‌ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.