– ಇನ್ನಷ್ಟು ದಿನ ಮೌನದಲ್ಲಿ ಇರುತ್ತೇವೆ
ದಾವಣಗೆರೆ: ನಾವುಗಳು ಇನ್ನಷ್ಟು ದಿನ ಮೌನವನ್ನು ಮುಂದುವರಿಸುತ್ತೇನೆ. ಈಗ ಮಾತನಾಡುವ ಸಂದರ್ಭ ಕಡಿಮೆಯಿದೆ ಎಂದು ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಮುರುಘಾ ಶರಣರು (Muruga Mutt Seer) ಹೇಳಿದ್ದಾರೆ.
ಮೊದಲ ಪೋಕ್ಸೋ ಪ್ರಕರಣದಲ್ಲಿ (POCSO Case) ಖುಲಾಸೆಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲರಿಗೂ ಸಂವಿಧಾನ ದಿನದ ಶುಭಾಶಯಗಳು. ಈಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಆರೋಪಿಗಳನ್ನು ರಕ್ಷಿಸಲು ತನಿಖಾಧಿಕಾರಿಗಳು ಸರಿಯಾದ ದಾಖಲೆ ಸಲ್ಲಿಸಿರಲಿಲ್ಲ: ಒಡನಾಡಿ ಪರಶು
ಈ ವೇಳೆ ಎರಡನೇ ಪೋಕ್ಸೋ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ, ಈಗ ಉತ್ತರ ನೀಡುವುದಿಲ್ಲ. ಮುಂದೆ ನಿಮ್ಮೆಲ್ಲರನ್ನು ಇಲ್ಲಿಗೆ ಕರೆದು ಸುದ್ದಿಗೋಷ್ಠಿ ನಡೆಸಲಾಗುವುದು. ಆಗ ಉತ್ತರ ನೀಡಲಾಗುವುದು. ಇವತ್ತಿಗೆ ಇಷ್ಟು ಸಾಕು ಎಂದು ತಿಳಿಸಿ ತೆರಳಿದರು. ಇದನ್ನೂ ಓದಿ: ಪೋಕ್ಸೋ ಪ್ರಕರಣದಲ್ಲಿ ಬಿಗ್ ರಿಲೀಫ್ – ಮುರುಘಾ ಶ್ರೀ ನಿರ್ದೋಷಿ
ಚಿತ್ರದುರ್ಗ ನ್ಯಾಯಾಲಯದಿಂದ ಖುಲಾಸೆಯಾದ ನಂತರ ದಾವಣಗೆರೆಯ ಶಿವಯೋಗಿ ಮಂದಿರಕ್ಕೆ ಮುರುಘಾಶ್ರೀಗಳು ಆಗಮಿಸಿದರು. ಮುರುಘಾ ಶ್ರೀ ಅವರ ಬರುವಿಕೆಗೆ ಕಾಯುತ್ತಿದ್ದ ಭಕ್ತರು ಶ್ರೀಗಳು ಬರುತ್ತಿದ್ದಂತೆ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಮಂದಿರಕ್ಕೆ ಬಂದ ಬಳಿಕ ಜಯದೇವ ಜಗದ್ಗುರುಗಳ ಗದ್ದುಗೆಗೆ ಮುರುಘಾಶ್ರೀ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

