ಮುಂಬೈ: ವಜ್ರ ವ್ಯಾಪಾರಿ ನೀರವ್ ಮೋದಿಯ ಹಗರಣದಲ್ಲಿ ದಿನಕ್ಕೆ ಒಂದು ಸ್ಫೋಟಕ ಮಾಹಿತಿ ಲಭಿಸುತ್ತಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ನೀರವ್ ವಂಚಿಸಿದ್ದ ಮೊತ್ತ 11,400 ಕೋಟಿ ರೂ. ಬದಲಾಗಿ 12,700 ಕೋಟಿ ರೂ. ಎಂಬ ಮಾಹಿತಿ ಸಿಕ್ಕಿದೆ.
ಮೊದಲು ಬ್ಯಾಂಕ್ ಅಧಿಕಾರಿಗಳು ಸಿಬಿಐ ಗೆ ನೀಡಿದ್ದ ದೂರಿನಲ್ಲಿ 11,400 ಕೋಟಿ ರೂ. ಎಂದು ತಿಳಿಸಿದ್ದರು. ಆದರೆ ಈ ಕುರಿತು ಸೋಮವಾರ ರಾತ್ರಿ ಬಾಂಬೆ ಸ್ಟಾಕ್ ಎಕ್ಸ್ ಚೆಂಜ್(ಬಿಎಸ್‍ಇ) ಪಿಎನ್‍ಬಿ ಸಲ್ಲಿಸಿದ ಮಾಹಿತಿಯಲ್ಲಿ 1,300 ಕೋಟಿ ರೂ. ಹೆಚ್ಚುವರಿ ಹಣ ಸೇರ್ಪಡೆಯಾಗಿದೆ. ಇದರೊಂದಿಗೆ ನೀರವ್ ಮೋದಿ ಒಡೆತನದ ಗೀತಾಂಜಲಿ ಕಂಪನಿ ಹಾಗೂ ಸಂಬಂಧಿ ಮೆಹುಲ್ ಚೋಕ್ಸಿ 12,700 ಕೋಟಿ ವಂಚಿಸಿದ್ದಾರೆ.
Advertisement
Advertisement
ಫೆ.14ರಂದು ವಂಚನೆ ಪ್ರಕರಣ ಬೆಳಕಿಗೆ ಬಂದ ವೇಳೆಯಲ್ಲೇ ವಂಚನೆ ಪ್ರಮಾಣದ ಮೊತ್ತ ಮತ್ತಷ್ಟು ಹೆಚ್ಚಗಾಬಹುದೆಂದು ಅಂದಾಜಿಸಲಾಗಿತ್ತು. ಸಿಬಿಐ ಅಧಿಕಾರಿಗಳು ಬಹುಕೋಟಿ ಹಗರಣ ಸಂಬಂಧ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಸ್ತುತ ನೀರವ್ ವಂಚನೆ ಪ್ರಕರಣ ಭಾರತ ಬ್ಯಾಂಕಿಂಗ್ ವಲಯದಲ್ಲಿ ನಡೆದ ಅತ್ಯಂತ ದೊಡ್ಡ ಮಟ್ಟದ ವಂಚನೆ ಪ್ರಕರಣ ಎಂಬ ಕುಖ್ಯಾತಿ ಗಳಿಸಿದೆ.
Advertisement
Advertisement
ವಂಚನೆ ಪ್ರಕರಣ ಬೆಳಕಿಗೆ ಬರುವ ಮುನ್ನವೇ ನೀರವ್ ಹಾಗೂ ಆತನ ಕುಟುಂಬ ಭಾರತ ಬಿಟ್ಟು ಅಮೆರಿಕಗೆ ಪರಾರಿಯಾಗಿದ್ದರು. ಶನಿವಾರ ನೀರವ್ ಅವರ ಪಾಸ್ ಪೋರ್ಟ್ ಅನ್ನು ರದ್ದು ಮಾಡಲಾಗಿತ್ತು. ನೀರವ್ ಸುಕ್ಷತೆ ದೃಷ್ಟಿಯಿಂದ ಕೆರಿಬಿಯನ್ ದ್ವೀಪ ರಾಷ್ಟ್ರಗಳ ಪೌರತ್ವ ಪಡೆಯಲು ಪ್ರಯತ್ನಿಸಿದ ಕುರಿತು ಮಾಹಿತಿ ಬಹಿರಂಗಗೊಂಡಿತ್ತು.