ಮುಂಬೈ: ಕೋಟ್ಯಂತರ ರೂ. ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿರುವ ವಜ್ರ ಉದ್ಯಮಿ ನೀರವ್ ಮೋದಿ(Nirav Modi) ಸಂಬಂಧಿಸಿದ ಆಸ್ತಿಯನ್ನು ಹರಾಜು(Auction) ಹಾಕಲು ಸಾಲ ವಸೂಲಾತಿ ನ್ಯಾಯಮಂಡಳಿ-1(DRT-1) ಮುಂದಾಗಿದೆ.
ಪುಣೆಯ ಅಪಾರ್ಟ್‌ಮೆಂಟ್‌ನಲ್ಲಿರುವ 398 ಚದರ ಮೀಟರ್ ಮತ್ತು 396 ಚದರ ಮೀಟರ್ ಅಳತೆಯನ್ನು ಹೊಂದಿರುವ ಫ್ಲ್ಯಾಟ್ ಮಾರಾಟಕ್ಕೆ ಸಿದ್ಧತೆ ನಡೆದಿದೆ.
Advertisement
Advertisement
ಈ ಎರಡು ಫ್ಲ್ಯಾಟ್‌ಗಳಿಗೆ ಕ್ರಮವಾಗಿ ರೂ 8.99 ಕೋಟಿ ರೂ. ಮತ್ತು ರೂ 8.93 ಕೋಟಿ ರೂ. ಮೂಲ ಬೆಲೆಯನ್ನು ನಿಗದಿಪಡಿಸಲಾಗಿದ್ದು, ಫೆಬ್ರವರಿ 3 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಗೆ ಬಂದವರಿಗೆ ಯಾರಿಗೆ ಎಷ್ಟು ಲಕ್ಷ ಮೊತ್ತದ ಬಹುಮಾನ?
Advertisement
ಏನಿದು ಪ್ರಕರಣ?
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ(Punjab National Bank) 13 ಸಾವಿರ ಕೋಟಿ ರೂ. ವಂಚಿಸಿದ ಆರೋಪ ನೀರವ್ ಮೋದಿ ಮೇಲಿದೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ(Mehul Choksi) ವಿರುದ್ಧ ಕೂಡ ಸಿಬಿಐ, ಇಡಿ ಪ್ರಕರಣ ದಾಖಲಿಸಿದೆ. ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ತನಿಖಾ ಸಂಸ್ಥೆಗಳು ಮುಟ್ಟುಗೋಲು ಹಾಕಿದೆ.
Advertisement
ನೀರವ್ ಮೋದಿ ಲಂಡನ್‌ನಲ್ಲಿ ನೆಲೆಸಿದ್ದರೆ ಮೆಹುಲ್ ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ನೆಲೆಸಿದ್ದಾರೆ. ಇಬ್ಬರನ್ನು ಭಾರತಕ್ಕೆ ಕರೆ ತರಲು ಕಾನೂನು ಹೋರಾಟ ನಡೆಯುತ್ತಿದೆ.