ನವದೆಹಲಿ: ಸೌದಿಯಿಂದ ಬರುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಏರ್ ಇಂಡಿಯಾ ಒನ್ ವಿಮಾನ ಪಾಕ್ ವಾಯುಸೀಮೆ ಬಳಸದೇ ಭಾರತದ ವಾಯುಸೀಮೆ ಬಳಸಿ ದೆಹಲಿಯಲ್ಲಿ ಲ್ಯಾಂಡ್ ಆಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಹಿಂದೂಗಳ ನರಮೇಧ ಕೃತ್ಯದ ಬಳಿಕ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿದ ಪ್ರಧಾನಿ ಮೋದಿ ಇಂದು ಮುಂಜಾನೆ ದೆಹಲಿಗೆ ಆಗಮಿಸಿ ವಿಮಾನ ನಿಲ್ದಾಣದಲ್ಲೇ ಸಭೆ ನಡೆಸಿದ್ದರು. ಇದನ್ನೂ ಓದಿ: ಬಾಲಾಕೋಟ್ ಏರ್‌ಸ್ಟ್ರೈಕ್‌ನಂತೆ ದಾಳಿ ಭೀತಿ – ಗಡಿಗೆ ವಿಮಾನಗಳನ್ನು ಸಾಗಿಸುತ್ತಿದೆ ಪಾಕ್
ಸೌದಿ ಅರೇಬಿಯಾಕ್ಕೆ ಹೊರಡುವಾಗ ಪಾಕಿಸ್ತಾನ ವಾಯು ಸೀಮೆ ಬಳಸಿದ್ದ ಮೋದಿ ಪಹಲ್ಗಾಮ್ ದಾಳಿಯ ನಂತರ ಭಾರತಕ್ಕೆ ಮರಳುವಾಗ ಮಾರ್ಗ ಬದಲಾಯಿಸಿರುವುದು ಟ್ರಾವೆಲ್ ಹಿಸ್ಟರಿಯಿಂದ ಕಂಡುಬಂದಿದೆ. ಇದನ್ನೂ ಓದಿ: ಗುಡ್ಡಕುಸಿತವಾಗಿದ್ದಕ್ಕೆ ಬಚಾವ್ – ಪಹಲ್ಗಾಮ್‌ಗೆ ಹೋಗಬೇಕಿದ್ದ 13 ಕನ್ನಡಿಗರು ಅದೃಷ್ಟವಶಾತ್ ಪಾರು
ಸೌದಿಗೆ ಪ್ರವಾಸ ಹೊರಡುವಾಗ ಪ್ರಧಾನಿ ಮೋದಿ ಅವರ IAF ಬೋಯಿಂಗ್ 777-300 (K7067) ವಿಮಾನವು ಪಾಕಿಸ್ತಾನ ವಾಯುಪ್ರದೇಶದಿಂದ ಒಮನ್ ತಲುಪಿದ್ದು, ಅಲ್ಲಿಂದ ಜೆಡ್ಡಾಗೆ ತಲುಪಿತ್ತು. ಆದ್ರೆ ಭಯೋತ್ಪಾದಕ ದಾಳಿಯ ಬಳಿಕ ತುರ್ತಾಗಿ ದೆಹಲಿಗೆ ಹಿಂತಿರುಗುವಾಗ ಪಾಕಿಸ್ತಾನ ವಾಯುಪ್ರದೇಶ ಬಳಸದೇ ಭಾರತಕ್ಕೆ ಮರಳಿತು. ಇದಕ್ಕೆ ಸಂಬಂಧಿಸಿದ ಮ್ಯಾಪ್ ಚಿತ್ರಗಳು ಲಭ್ಯವಾಗಿದೆ.
ದೆಹಲಿಗೆ ಮರಳಿದ ಬಳಿಕ ವಿಮಾನ ನಿಲ್ದಾಣದಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಅಲ್ಲದೇ ಇಂದು ಸಂಜೆ 6 ಗಂಟೆಗೆ ಭದ್ರತೆ ಕುರಿತಂತೆ ಸಂಪುಟ ಸಭೆ ನಡೆಯಲಿದೆ. ಇದನ್ನೂ ಓದಿ: Pahalgam Terror Attack | ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ
ಶಾಗೆ ಸೂಚನೆ ನೀಡಿದ್ದ ಮೋದಿ:
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಸೌದಿ ಅರೇಬಿಯಾದಿಂದಲೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿದ್ದ ಮೋದಿ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದ್ದರು. ಅದರಂತೆ ಮಂಗಳವಾರ ರಾತ್ರಿಯೇ ಶ್ರೀನಗರಕ್ಕೆ ಭೇಟಿ ನೀಡಿ ಉನ್ನತ ಅಧಿಕಾರಿಗಳೊಂದಿಗೆ ಅಮಿತ್ ಶಾ ಸಭೆ ನಡೆಸಿದ್ದರು. ಅಲ್ಲದೇ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದ ಮೋದಿ, ಈ ಹತ್ಯಾಕಾಂಡದ ಹಿಂದೆ ಯಾರೇ ಇದ್ದರೂ ಬಿಡೋದಿಲ್ಲ ಎಂದು ಶಪಥ ಮಾಡಿದ್ದರು. ಇದನ್ನೂ ಓದಿ: Pahalgam Terror Attack | ಹಿಂದೂಗಳೇ ಭಯೋತ್ಪಾದಕರ ಟಾರ್ಗೆಟ್!