ನವದೆಹಲಿ: ಕಾಂಗ್ರೆಸ್ ಸಂಸದ ಧೀರಜ್ ಸಾಹು (Dhiraj Sahu) ಅವರ ಮನೆಯಿಂದ ಆದಾಯ ತೆರಿಗೆ ಇಲಾಖೆ 350 ಕೋಟಿಗೂ ಅಧಿಕ ಹಣ ಮತ್ತು ಸುಮಾರು 3 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
In India, who needs ‘Money Heist’ fiction, when you have the Congress Party, whose heists are legendary for 70 years and counting! https://t.co/J70MCA5lcG
— Narendra Modi (@narendramodi) December 12, 2023
Advertisement
ಜನಪ್ರಿಯ ‘ಮನಿ ಹೀಸ್ಟ್’ (Money Heist) ವೆಬ್ ಸೀರೀಸನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಕಳೆದ 70 ವರ್ಷಗಳಿಂದ ದೇಶವನ್ನು ಲೂಟಿ ಮಾಡುತ್ತಿದೆ. ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಸಂಸದ ಧೀರಜ್ ಸಾಹುಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಿ ಆದಾಯ ತೆರಿಗೆ ಇಲಾಖೆ (Income Tax Department) ದಾಖಲೆಯ 353 ಕೋಟಿ ರೂ. ನಗದು ವಶಪಡಿಸಿಕೊಂಡಿರುವುದೇ ಇದಕ್ಕೆ ತಾಜಾ ಉದಾಹರಣೆಯಾಗಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ರಾಜಮನೆತನದಿಂದ ರಾಜಕೀಯಕ್ಕೆ; ರಾಜಸ್ಥಾನದ ನೂತನ ಡಿಸಿಎಂ ದಿಯಾ ಕುಮಾರಿ – ಯಾರು ಈ ರಾಜಕುಮಾರಿ?
Advertisement
Advertisement
ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಿಂದಲೂ ಭಾರತವನ್ನೂ ಲೂಟಿ ಮಾಡುತ್ತಾ ಬಂದಿದೆ. ಇಂತಹ ಪಕ್ಷವನ್ನೇ ಭಾರತ ಹೊಂದಿರುವ ಮನಿ ಹೀಸ್ಟ್ ಸಿರೀಸ್ ಯಾರಿಗೆ ಬೇಕಾಗಿದೆ? ಎಂದು ಕುಟುಕಿದ್ದಾರೆ. ಅಷ್ಟೇ ಅಲ್ಲದೇ ʻಕಾಂಗ್ರೆಸ್ ಪ್ರೆಸೆಂಟ್ಸ್ – ದಿ ಮನಿ ಹೀಸ್ಟ್ʼಹೆಸರಿನಲ್ಲಿ ಬಿಜೆಪಿ ಹಂಚಿಕೊಂಡಿರುವ ವಿಶೇಷ ವೀಡಿಯೋವನ್ನೂ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Advertisement
Dear @narendramodi
The nation wants you to explain the biggest “money heist” since 1947 ????????
????Your close friend Adani siphons out ₹17,500 crore from India by inflating the prices of imported coal and power equipment.
????He brings another ₹20,000 crore back into India via…
— Jairam Ramesh (@Jairam_Ramesh) December 12, 2023
ಕಾಂಗ್ರೆಸ್ ಸಂಸದರ ಮನೆ ಮೇಲೆ ನಡೆದ ಐಟಿ ದಾಳಿ ವಿಷಯವಾಗಿ ಇದು ಮೋದಿ ಅವರ 2ನೇ ಪ್ರತಿಕ್ರಿಯೆಯಾಗಿದೆ. ಇತ್ತೀಚೆಗೆ ಜನರಿಂದ ಲೂಟಿ ಮಾಡಿದ ಪ್ರತಿಯೊಂದು ಪೈಸೆಯನ್ನೂ ವಾಪಸ್ ಪಡೆಯುವುದು ಮೋದಿಯವರ ಗ್ಯಾರಂಟಿ ಎಂದು ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ ಸ್ಕಂದಗಿರಿ – ಇಲ್ಲಿದೆ ಸಂಪೂರ್ಣ ಮಾಹಿತಿ
ಇನ್ನೂ ಹೆಚ್ಚುತ್ತಲೇ ಇದೆ ಕಾಂಚಾಣ: ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಐಟಿ ದಾಳಿ ನಡೆದಿದ್ದು, ಈವರೆಗೆ 353 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದೆ. ಇದು ಭಾರತದಲ್ಲಿ ಅತಿದೊಡ್ಡ ಐಟಿ ದಾಳಿ ಎಂದು ಕೆಲವರು ಹೇಳಿದ್ದಾರೆ. ಓವರೆಗೆ 28 ಮಿಷಿನ್‌ಗಳನ್ನು ಹಣ ಎಣಿಕೆ ಕಾರ್ಯಕ್ಕೆ ಬಳಸಲಾಗಿದೆ. ಹಣ ಬಚ್ಚಿಟ್ಟಿರುವ ಬಗ್ಗೆ ಇನ್ನಷ್ಟು ಮಾಹಿತಿ ಪತ್ತೆಯಾಗಿದ್ದು, ಪರಿಶೀಲಿಸಬೇಕಾದ ಸ್ಥಳಗಳು ಬಾಕಿಯಿವೆ. ತಪಾಸಣೆ ಬಳಿಕ ಹಣದ ಮೌಲ್ಯ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಐಟಿ ಅಧಿಕಾರಿ ಮೂಲಗಳು ತಿಳಿಸಿವೆ. ಸದ್ಯ ಧೀರಜ್ ಸಾಹು ಅವರ ನಿವಾಸ, ಕಚೇರಿಯ ಮೇಲೆ ನಡೆದ ಐಟಿ ದಾಳಿ ಬಗ್ಗೆ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡದೇ ಅಂತರ ಕಾಯ್ದುಕೊಂಡಿದೆ.