ನವದೆಹಲಿ: ಪರೀಕ್ಷೆ, ಇಂಟರ್ ವ್ಯೂವ್ ಪಾಸ್ ಮಾಡಿ ಮೆರಿಟ್ ಅಡಿಯಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತೇವೆ ಅನ್ನೋ ಸ್ಪರ್ಧಾರ್ಥಿಗಳ ಲೆಕ್ಕಾಚಾರ ಉಲ್ಟಾಪಲ್ಟಾ ಆಗೋದು ಬಹುತೇಕ ಖಚಿತವಾಗಿದೆ.
ಐಎಎಸ್, ಐಪಿಎಸ್ ಸೇರಿ ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಮಹತ್ವದ ಬದಲಾವಣೆಯಾಗೋ ಸಾಧ್ಯತೆಯಿದ್ದು, ಯುಪಿಎಸ್‍ಸಿ ತನ್ನ ಸ್ವಾಯತ್ತ ಅಧಿಕಾರವನ್ನು ಕಳೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಕೇಂದ್ರೀಯ ಸೇವೆಗೆ ಆಯ್ಕೆ ಆಗುವ ಅಭ್ಯರ್ಥಿಗಳು ಮಸ್ಸೌರಿಯಲ್ಲಿರೋ ಲಾಲ್ ಬಹುದ್ದೂರ್ ಶಾಸ್ತ್ರಿ ಆಡಳಿತಾತ್ಮಕ ಅಕಾಡೆಮಿಯಲ್ಲಿ ಮೂರು ತಿಂಗಳು ಫೌಂಡೇಷನ್ ಕೋರ್ಸ್ ಗೆ ಹಾಜರಾಗಬೇಕಾಗುತ್ತದೆ. ಆ ಕೋರ್ಸ್ ನಲ್ಲಿ ಸಿಗುವ ಅಂಕಗಳ ಆಧಾರದ ಮೇಲೆ ಐಎಎಸ್, ಐಪಿಎಸ್ ಮತ್ತು ಐಆರ್ ಎಸ್ ಹುದ್ದೆ ನಿರ್ಧಾರವಾಗಲಿದೆ. ಅಂದಹಾಗೆ ಈ ಅಂಕಗಳನ್ನು ನಿರ್ಧರಿಸೋದು ಅಕಾಡೆಮಿಯೇ ಹೊರತು ಯುಪಿಎಸ್‍ಸಿ ಅಲ್ಲ.
ಈ ಸಂಬಂಧ ಒಂದು ವಾರದೊಳಗೆ ಪ್ರಧಾನಮಂತ್ರಿ ಕಾರ್ಯಾಲಯ ಅಭಿಪ್ರಾಯ ಕೇಳಿ ಆಡಳಿತ ಮತ್ತು ಸಿಬ್ಬಂದಿ ಸಚಿವಾಲಯಕ್ಕೆ ಸುತ್ತೋಲೆಯನ್ನು ಹೊರಡಿಸಿದೆ.