ನವದೆಹಲಿ: ಸದ್ಯ ತಿಹಾರ್ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ಶನಿವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆಯಾಗಿದೆ.
ಬುಧವಾರ ವಿಚಾರಣೆಯ ಸಂದರ್ಭದಲ್ಲಿ ಗೈರಾಗಿದ್ದ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಕಲಾಪ ಆರಂಭಗೊಳ್ಳುವ ಮುನ್ನವೇ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದನ್ನು ಓದಿ: ಡಿಕೆಶಿಗೆ ವಿವಿಐಪಿ ಟ್ರೀಟ್, ಚಿದಂಬರಂ ಪಕ್ಕದ ಸೆಲ್‍ನಲ್ಲೇ ಬಂಡೆ
Advertisement
Advertisement
ಆರಂಭದಲ್ಲಿ ಕ್ಷಮೆ ಕೋರಿ ವಾದ ಮಂಡಿಸಿದ ಅವರು ಡಿಕೆ ಶಿವಕುಮಾರ್ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ. ಕೊಲೆಗೆ ಹಫ್ತಾ ಅಥವಾ ಸುಪಾರಿ ಕೊಟ್ಟರೆ ಕೊಲೆ ಮಾಡಿದವ ಮಾತ್ರ ಮುಖ್ಯ ಅಲ್ಲ, ಕೊಲೆ ಮಾಡಿಸಿದವನು ಮುಖ್ಯ. ಅದನ್ನು ಕೂಡಾ ತನಿಖೆ ಮಾಡಬೇಕು. ಅಪರಾಧಗಳನ್ನು ಆಧರಿಸಿ ತನಿಖೆ ಕೈಗೊಳ್ಳಲಾಗುವ ಕ್ರಮಗಳ ಕಾಯ್ದೆ ಅಡಿ ಉಲ್ಲೇಖವಾಗಿದೆ. ಹಫ್ತಾ ಖಾತೆಯಲ್ಲಿಟ್ಟು ತೆರಿಗೆ ಪಾವತಿಸಿದ್ದೇನೆ ಎಂದರೆ ಅದು ಹೇಗೆ? ಅದು ಅಕ್ರಮ ಹಣ. ಹಫ್ತಾ ಹಣದ ಹರಿವಿನ ಬಗ್ಗೆ ತನಿಖೆ ಆಗಬೇಕು ಹೀಗಾಗಿ ಜಾಮೀನು ಮಂಜೂರು ಮಾಡಬೇಡಿ ಎಂದು ವಾದಿಸಿದರು. ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ತೆರೆ ಕಾಣಲಿದೆ ಡಿಕೆಶಿ ಜೀವನಾಧಾರಿತ ಚಿತ್ರ?
Advertisement
ಡಿಕೆಶಿ ಪರ ವಕೀಲರು ಆಸ್ತಿ ಬೆಲೆ ಏರಿಕೆಯಾಗಿದೆ. ವಾಣಿಜ್ಯ ವ್ಯವಹಾರಗಳಿಂದ ಆದಾಯ ಹೆಚ್ಚಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು. 1 ಗಂಟೆ 40 ನಿಮಿಷಗಳ ಕಾಲ ನಟರಾಜ್ ವಾದ ಮಂಡಿಸಿದರು. ನಟರಾಜ್ ವಾದಕ್ಕೆ ಅಭಿಷೇಕ್ ಮನು ಸಿಂಘ್ವಿ ಪ್ರತಿವಾದ ನಡೆಸಲು ಸಿದ್ಧತೆ ನಡೆಸುತ್ತಿದ್ದಾಗ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅರ್ಜಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದರು.
Advertisement
ಹೈ ಬಿಪಿ ಮತ್ತು ಹೈ ಶುಗರ್ ಹಿನ್ನೆಲೆಯಲ್ಲಿ ಶನಿವಾರದಿಂದ ಡಿಕೆ ಶಿವಕುಮಾರ್ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ವೈದ್ಯಾಧಿಕಾರಿಗಳು ಆರೋಗ್ಯ ಸ್ಥಿರ ಎಂಬ ವರದಿ ನೀಡಿದ ಬೆನ್ನಲ್ಲೇ ಇಂದು ಮಧ್ಯಾಹ್ನ ತಿಹಾರ್ ಜೈಲಿಗೆ ಡಿ.ಕೆ.ಶಿವಕುಮಾರ್ ಅವರನ್ನು ಶಿಫ್ಟ್ ಮಾಡಲಾಗಿದೆ. ಡಿಕೆ ಶಿವಕುಮಾರ್ ಅವರನ್ನು ಕೋರ್ಟ್ ಅಕ್ಟೋಬರ್ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು.