ಬೆಂಗಳೂರು: ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಇಂದು ಇಡಿ ಕಚೇರಿಗೆ ತೆರಳಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲಿದ್ದಾರೆ.
ಬುಧವಾರ ಸಮನ್ಸ್ ಪಡೆದಿರುವ ಐಶ್ವರ್ಯ, ತಾಯಿ ಸುಮಾ ಹಾಗೂ ಕುಣಿಗಲ್ ಶಾಸಕ ರಂಗನಾಥ್ ಜೊತೆ ಈಗಾಗಲೇ ದೆಹಲಿಯಲ್ಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಲೋಕನಾಯಕ ಭವನದಲ್ಲಿರುವ ಇಡಿ ಪ್ರಧಾನ ಕಚೇರಿಯಲ್ಲಿ ಐಶ್ವರ್ಯ ವಿಚಾರಣೆ ಎದುರಿಸಲಿದ್ದಾರೆ.
Advertisement
ಹಗರಿಬೊಮನಹಳ್ಳಿಯ ಸೋಲಾರ್ ಪ್ಲಾಂಟ್ ಸೋಲ್ಸ್ ಆಂಡ್ ಸೇಲ್ಸ್, ಸೋಲ್ ಅರೆನಾ ಮಾಲ್‍ನಲ್ಲಿ ಪಾಲುದಾರಿಕೆ, ಉತ್ತರಹಳ್ಳಿಯಲ್ಲಿ ಅಜ್ಜಿಯಿಂದ 3 ಎಕರೆ ಗಿಫ್ಟ್ ಡೀಡ್, ಆರ್.ಆರ್ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ನ್ಯಾಷನಲ್ ಹಿಲ್ ವ್ಯೂ ಸ್ಕೂಲ್‍ನಲ್ಲಿ ಪಾತ್ರ, ಹಾಗೂ ಶ್ರೀರಾಮ್ ಫೈನಾನ್ಸಿನಲ್ಲಿ ಇರುವ ಪಾಲುದಾರಿಕೆ ಬಗ್ಗೆ ಐಶ್ವರ್ಯಗೆ ಇಡಿ ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇದೆ. ಇದನ್ನೂ ಓದಿ:ಮಗಳ ಹೆಸರಲ್ಲಿಟ್ಟಿದ್ದ 78 ಕೋಟಿ ಹಣವೇ ಡಿಕೆಶಿಗೆ ಮುಳುವಾಯ್ತು
Advertisement
Advertisement
ಸಮನ್ಸ್ ಜಾರಿ ಮಾಡಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದ್ದಕ್ಕೆ ಡಿಕೆ ಶಿವಕುಮಾರ್ ಬಂಧನಕ್ಕೆ ಒಳಗಾಗಿದ್ದರು. ಈಗ ಪುತ್ರಿಗೂ ಸಮನ್ಸ್ ಜಾರಿಯಾಗಿದ್ದು ಸರಿಯಾದ ಉತ್ತರ ನೀಡದೇ ಇದ್ದರೆ ಐಶ್ವರ್ಯ ಸಹ ಬಂಧನವಾಗುವ ಸಾಧ್ಯತೆಯಿದೆ. ಇದನ್ನೂ ಓದಿ:ಬೇನಾಮಿಯಾಗಿ ಅರಮನೆ ಆಸ್ತಿ ಖರೀದಿ – ಇಡಿ ಪ್ರಕರಣಕ್ಕೆ ತಿರುವು ಕೊಟ್ಟಿದ್ದೇ ವಿಶಾಲಾಕ್ಷಿ ದೇವಿ
Advertisement
ಯಾವೆಲ್ಲ ಪ್ರಶ್ನೆಗಳನ್ನು ಕೇಳಬಹುದು.
ನಿಮ್ಮ ಕ್ವಾಲಿಫಿಕೇಶನ್ ಏನು? ಯಾವಾಗ ನಿಮ್ಮ ಡಿಗ್ರಿ ಕಂಪ್ಲೀಟ್ ಆಗಿದ್ದು?
ನಿಮ್ಮ ಹೆಸರಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ ಇದೆ?
ಇಷ್ಟೆಲ್ಲಾ ಆಸ್ತಿಯೂ ನಿಮ್ಮ ತಂದೆಯಿಂದ ನಿಮಗೆ ಬಂದಿದ್ದಾ?
ಯಾವ ವರ್ಷದ ಹಣಕಾಸು ವರ್ಷದಲ್ಲಿ ಎಷ್ಟು ಆಸ್ತಿ ಘೋಷಣೆ ಮಾಡಿದ್ದೀರಿ?
ಪ್ರಸಕ್ತ ಸಾಲಿನಲ್ಲಿ ಎಷ್ಟು ಆದಾಯ ತೆರಿಗೆ ಪಾವತಿಸಿದ್ದೀರಿ?
ಹಗರಿಬೊಮ್ಮನಹಳ್ಳಿಯ ಸೋಲಾರ್ ಪ್ಲಾಂಟ್ ಸೋಲ್ಸ್ & ಸೇಲ್ಸ್ ನಲ್ಲಿ ನಿಮ್ಮ ಹೂಡಿಕೆ ಎಷ್ಟು?
78 ಕೋಟಿ ಹಣ ಹೂಡಿಕೆಗೆ ಎಲ್ಲಿಂದ ಸಂಪನ್ಮೂಲ ಕ್ರೂಢೀಕರಣ ಮಾಡಿದ್ರಿ?
ಯಾವ ವರ್ಷ ಈ ಸೋಲಾರ್ ಪ್ರಾಜೆಕ್ಟ್ ಆರಂಭಿಸಿದ್ದು?
ಸದ್ಯ ಸೋಲಾರ್ ಪ್ರಾಜೆಕ್ಟ್ ವ್ಯವಹಾರ ಯಾರು ನೋಡಿಕೊಳ್ತಿರೋದು?
ಸೋಲ್ ಅರೆನಾ ಮಾಲ್‍ನಲ್ಲಿ ನೀವು ಹೊಂದಿರೊ ಶೇ.50ರಷ್ಟು ಪಾಲುದಾರಿಕೆಯ ಬಗ್ಗೆ ಹೇಳಿ
ಉತ್ತರಹಳ್ಳಿಯ ಮೂರು ಎಕರೆ ಜಮೀನನ್ನ ಅಜ್ಜಿ ಗೌರಮ್ಮ ನಿಮ್ಮ ಹೆಸರಿಗೇ ಗಿಫ್ಟ್ ಡೀಡ್ ಮಾಡಲು ಕಾರಣ?
ಅವಸರದಲ್ಲಿ ಗಿಫ್ಟ್ ಡೀಡ್ ಮಾಡಲು ಕಾರಣ ಏನು?
ಆರ್.ಆರ್.ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಮತ್ತು ನ್ಯಾಷನಲ್ ಹಿಲ್ ವ್ಯೂ ಸ್ಕೂಲ್‍ನಲ್ಲಿ ನಿಮ್ಮ ಪಾತ್ರ ಏನು?
ಯಾವಾಗಿಂದ ಈ ಎರಡೂ ಸಂಸ್ಥೆಗಳ ಉಸ್ತುವಾರಿ ನೋಡಿಕೊಳ್ತಿದ್ದೀರಿ?
ಎರಡೂ ಶಿಕ್ಷಣ ಸಂಸ್ಥೆಗಳಲ್ಲಿ ನಿಮ್ಮ ಹೆಸರಲ್ಲಿರೊ ಶೇರ್ ಎಷ್ಟು?
ಶಿಕ್ಷಣ ಸಂಸ್ಥೆಗಳಲ್ಲಿ ಶೇ.25 ಶೇರ್ ಹೊಂದಿರೊ ನೀವು ವಾರ್ಷಿಕಗಳಿಸುತ್ತಿರುವ ಆದಾಯ ಎಷ್ಟು?
ಶ್ರೀ ರಾಮ್ ಫೈನಾನ್ಸ್ ನಲ್ಲಿ ಎಷ್ಟು ಪಾಲು ಹೊಂದಿದ್ದೀರಿ?
ನಿಮ್ಮ ಪಾಲಿನ ಶ್ರೀರಾಮ್ ಫೈನಾನ್ಸ್ ಶೇರ್ ಶೇ.10%ಕ್ಕೆ ಎಷ್ಟು ವರಮಾನ ಬರುತ್ತಿದೆ?