ಶತಮಾನಗಳ ಕನಸು ನನಸಾಗಲು ಕ್ಷಣಗಣನೆ – ಅಯೋಧ್ಯೆ ಬಾಲರಾಮನಿಗೆ ಮೊದಲ ಮಜ್ಜನ

Public TV
2 Min Read
Modi 7

– ಅಯೋಧ್ಯೆಯಲ್ಲಿಂದು ಮೋದಿ ಕಾರ್ಯಕ್ರಮಗಳೇನು?

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ನಿರ್ಮಿಸಲಾಗಿರುವ ರಾಮಮಂದಿರದಲ್ಲಿಂದು ರಾಮಲಲ್ಲಾ (Ram lalla) ಪ್ರಾಣಪ್ರತಿಷ್ಠೆ ನೆರವೇರಲಿದೆ. ಈಗಾಗಲೇ ರಾಮಲಲ್ಲಾಗೆ 114 ಕ್ಷೇತ್ರಗಳಿಂದ ತರಿಸಲಾಗಿದ್ದ ನೀರಿನಿಂದ ಮೊದಲ ಮಜ್ಜನ ಮಾಡಿಸಲಾಗಿದೆ.

ರಾಮಮಂದಿರದ (Ram Mandir) 500 ವರ್ಷಗಳ ಕನಸು ಈಗ ನನಸಾಗುತ್ತಿರುವ ಕಾರಣ ಕೋಟ್ಯಂತರ ಭಾರತೀಯರು ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದು, ಸೋಮವಾರ ಸುಮಾರು 5 ಗಂಟೆ ಮೋದಿ ಅವರು ಅಯೋಧ್ಯೆಯಲ್ಲಿಯೇ ಕಾಲ ಕಳೆಯಲಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿಂದು ರಾಮ ವಿರಾಜಮಾನ – ಬೆಂಗಳೂರಿನಲ್ಲಿ ಹೈ ಅಲರ್ಟ್

Ram Mandir 5

ರಾಮಲಲ್ಲಾಗೆ ಮೊದಲ ಮಜ್ಜನ: ಅಯೋಧ್ಯೆಯ ಗರ್ಭಗುಡಿ ಪ್ರವೇಶಿಸಿರುವ ರಾಮಲಲ್ಲಾ ಮೂರ್ತಿಗೆ ಸೋಮವಾರ ಮೊದಲ ಬಾರಿಗೆ ಸ್ನಾನ ಮಾಡಿಸಲಾಗಿದೆ. ಸುಮಾರು 114 ತೀರ್ಥಕ್ಷೇತ್ರಗಳಿಂದ ತಂದ ನೀರಿನಲ್ಲಿ ರಾಮಲಲ್ಲಾ ಮೂರ್ತಿಗೆ ಮಹಾಮಜ್ಜನ ಮಾಡಿಸಲಾಗಿದೆ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠೆಯನ್ನು ಸಿಹಿ ತಿಂದು ಸಂಭ್ರಮಿಸಿ – ಚಂಪಾಕಲಿ ರೆಸಿಪಿ ನಿಮಗಾಗಿ

ಅಯೋಧ್ಯೆಯಲ್ಲಿಂದು ಮೋದಿ:
ಬೆಳಗ್ಗೆ 10.25: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ
ಬೆಳಗ್ಗೆ 10.55: ರಾಮಜನ್ಮಭೂಮಿ ಆವರಣ ತಲುಪಲಿರುವ ಹೆಲಿಕಾಪ್ಟರ್‌
ಬೆಳಗ್ಗೆ 11 ರಿಂದ ಮಧ್ಯಾಹ್ನ 12: ರಾಮಮಂದಿರದ ವೀಕ್ಷಣೆ ಮಾಡಲಿರುವ ಪ್ರಧಾನಿ
ಮಧ್ಯಾಹ್ನ 12.05-12.55: ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಮೋದಿ. ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ.
ಮಧ್ಯಾಹ್ನ 1-2: ನರೇಂದ್ರ ಮೋದಿ, ಮೋಹನ್‌ ಭಾಗವತ್‌, ಯೋಗಿ ಆದಿತ್ಯನಾಥ್‌ ಸಾರ್ವಜನಿಕ ಭಾಷಣ
ಮಧ್ಯಾಹ್ನ 2.10: ರಾಮಜನ್ಮಭೂಮಿ ಆವರಣದಲ್ಲಿರುವ ಶಿವ ಮಂದಿರಕ್ಕೆ ಭೇಟಿ, ವಿಶೇಷ ಪ್ರಾರ್ಥನೆ
ಮಧ್ಯಾಹ್ನ 3.30: ಅಯೋಧ್ಯೆಯಿಂದ ಪ್ರಧಾನಿ ನಿರ್ಗಮನ

Narendra Modi Dhanushkodi 2

ಖ್ಯಾತ ನಟರ ಆಗಮನ:
ಅಮಿತಾಬ್‌ ಬಚ್ಚನ್‌, ಚಿರಂಜೀವಿ, ರಾಮ್‌ಚರಣ್‌, ಪವನ್‌ ಕಲ್ಯಾಣ್‌ ಸೇರಿದಂತೆ ಅನೇಕ ನಟ ನಟಿಯರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಕ್ರೀಡಾ ತಾರೆ ಸಚಿನ್‌ ತೆಂಡೂಲ್ಕರ್‌, ವೆಂಕಟೇಶ್‌ ಪ್ರಸಾದ್‌, ಆರ್‌.ಅಶ್ವಿನ್‌, ಸೈನಾ ನೆಹ್ವಾಲ್‌ ಸೇರಿದಂತೆ ಅನೇಕರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಗಣ್ಯರ ಸಮ್ಮುಖದಲ್ಲಿ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

Share This Article