ನವದೆಹಲಿ: ಬೆಂಗಳೂರಿನಲ್ಲಿ (Bengaluru) ನಡೆಯುತ್ತಿರುವ ವಿರೋಧ ಪಕ್ಷಗಳ ನಾಯಕರ ಸಭೆ ‘ಕಡು ಭ್ರಷ್ಟರ ಸಮ್ಮೇಳನ’. ಅತಿ ಹೆಚ್ಚು ಭ್ರಷ್ಟಚಾರ ಮಾಡಿದ ವ್ಯಕ್ತಿಗೆ ಇಲ್ಲಿ ಹೆಚ್ಚು ಗೌರವ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ ಉದ್ಘಾಟನೆ ಬಳಿಕ ಮಾತನಾಡಿದ ಅವರು ಪ್ರತಿಪಕ್ಷಗಳ ಸಭೆ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೋದಿ ಕಟ್ಟಿಹಾಕಲು ಮಹಾಘಟಬಂಧನ್ – ಇಂದು ಬೆಂಗ್ಳೂರಲ್ಲಿ ವಿಪಕ್ಷಗಳ ಶಕ್ತಿಪ್ರದರ್ಶನ!
Advertisement
Advertisement
ಕಡು ಭ್ರಷ್ಟರು ಎಲ್ಲ ಒಟ್ಟಾಗಿ ಬೆಂಗಳೂರಿನಲ್ಲಿ ಸಭೆ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಜನರಿಂದ, ಜನರಿಗಾಗಿ, ಜನರಿಸ್ಕೋರ ಇದೆ. ಆದರೆ ರಾಜವಂಶದ ರಾಜಕೀಯ ಪಕ್ಷಗಳ ಧ್ಯೇಯ ವಾಕ್ಯ ಕುಟುಂಬದಿಂದ ಕುಟುಂಬಕ್ಕಾಗಿ, ಕುಟುಂಬಸ್ಕೋರ. ಇವರಿಗೆ ಕುಟುಂಬ ಮೊದಲಾದ್ರೆ ರಾಷ್ಟ್ರ ಏನು? ಅಲ್ಲಿ ದ್ವೇಷ, ಭ್ರಷ್ಟಾಚಾರ ಮತ್ತು ತುಷ್ಟೀಕರಣ ರಾಜಕಾರಣವಿದೆ. ದೇಶವು ವಂಶಾಡಳಿತದ ಬೆಂಕಿಗೆ ಬಲಿಯಾಗಿದೆ. ಅವರಿಗೆ ದೇಶದ ಬಡವರ ಬೆಳವಣಿಗೆ ಮುಖ್ಯವಲ್ಲ ಕೇವಲ ಕುಟುಂಬದ ಬೆಳವಣಿಗೆ ಮಾತ್ರ ಮುಖ್ಯ ಎಂದು ಕಿಡಿ ಕಾರಿದರು.
Advertisement
Advertisement
ಈ ಸಭೆಯ ಮತ್ತೊಂದು ವಿಶೇಷತೆ ಏನಂದ್ರೆ, ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದಲ್ಲಿ ಯಾರಾದರೂ ಜಾಮೀನಿನ ಮೇಲೆ ಹೊರಗಿದ್ದರೆ ಅವರನ್ನ ಗೌರವದಿಂದ ಕಾಣುತ್ತಾರೆ. ಇಡೀ ಕುಟುಂಬ ಜಾಮೀನಿನ ಮೇಲೆ ಹೊರಗಿದ್ದರೆ ಅವರಿಗೆ ಹೆಚ್ಚು ಗೌರವ, ಯಾರಾದರೂ ಒಂದು ಸಮುದಾಯವನ್ನ ಅವಮಾನಿಸಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದರೆ ಅವರಿಗೆ ವಿಶೇಷ ಗೌರವ ನೀಡಲಾಗುತ್ತೆ ಎಂದು ಲೇವಡಿ ಮಾಡಿದರು.
ಕಳೆದ 9 ವರ್ಷಗಳಲ್ಲಿ ನಾವು ಹಳೆಯ ಸರ್ಕಾರಗಳ ತಪ್ಪುಗಳನ್ನ ಸರಿಪಡಿಸಿದ್ದೇವೆ, ಜನರಿಗೆ ಹೊಸ ಸೌಲಭ್ಯಗಳನ್ನ ನೀಡಿದ್ದೇವೆ. ಭಾರತದಲ್ಲಿ ಹೊಸ ಮಾದರಿಯ ಅಭಿವೃದ್ಧಿ ಕಂಡುಬಂದಿದೆ ಇದು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮಾದರಿಯಾಗಿದೆ ಎಂದು ತಮ್ಮ ಸರ್ಕಾರದ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ವಿರೋಧಿಗಳ ರಣಕಹಳೆ – ಯಾವೆಲ್ಲ ಪಕ್ಷಗಳು ಭಾಗಿ ಆಗುತ್ತಿವೆ?
Web Stories