– ಸಿಎಂ ಬಿಎಸ್‍ವೈ, ರಾಜ್ಯಪಾಲ ವಾಲಾರಿಂದ ಸ್ವಾಗತ
ಬೆಂಗಳೂರು: ಚಂದ್ರಯಾನ-2 ಚಂದ್ರನ ಅಂಗಳದಲ್ಲಿ ಇಳಿಯಲಿರುವ ರೋಚಕ ಕ್ಷಣಗಳನ್ನು ವೀಕ್ಷಣೆ ಮಾಡಲು ಇಂದು ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದು, ಯಲಹಂಕ ವಾಯುನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯಪಾಲ ವಾಜುಭಾಯ್ ವಾಲಾ ಅವರು ಪ್ರಧಾನಿಗಳಿಗೆ ಸ್ವಾಗತ ಕೋರಿದರು.
ಚಂದ್ರಯಾನ-2ನ ಮಹತ್ವದ ಕ್ಷಣಗಳನ್ನು ವೀಕ್ಷಿಸಲು ನಗರದ ಇಸ್ರೋ ಕೇಂದ್ರ ಸಂಸ್ಥೆಯಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಯಲಹಂಕ ವಾಯುನೆಲೆಯಿಂದ ನೇರ ಪ್ರಧಾನಿಗಳು ಇಸ್ರೋದ ಗೆಸ್ಟ್ ಹೌಸ್ ತೆರಳಿದ್ದು. ಅಲ್ಲಿಯೇ ಕೆಲ ಸಮಯ ವಿಶ್ರಾಂತಿ ಪಡೆಯಲಿದ್ದಾರೆ. ತಡರಾತ್ರಿ 1.30ರ ವೇಳೆಗೆ ಇಸ್ರೋ ಕೇಂದ್ರಕ್ಕೆ ಆಗಮಿಸಲಿರುವ ಪ್ರಧಾನಿಗಳು ನಾಳೆ ಮುಂಜಾನೆ 7 ಗಂಟೆವರೆಗೂ ಇಸ್ರೋ ಕೇಂದ್ರದಲ್ಲಿಯೇ ಇರಲಿದ್ದಾರೆ.
Advertisement
Advertisement
ಅಂದಹಾಗೇ ತಡರಾತ್ರಿ 1 ಗಂಟೆ 30 ರಿಂದ 2.30ರ ವೇಳೆಗೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದ್ದು, ಇದರ ನೇರ ಪ್ರಸಾರವನ್ನು ಪ್ರಧಾನಿ ಮೋದಿ ಅವರು ಮಕ್ಕಳೊಂದಿಗೆ ವೀಕ್ಷಿಸಲಿದ್ದಾರೆ. ಮೋದಿರೊಂದಿಗೆ 70 ವಿದ್ಯಾರ್ಥಿಗಳು ಸಹ ಈ ವಿಸ್ಮಯವನ್ನು ಆನಂದಿಸಲಿದ್ದಾರೆ. ಈ ಕಾರ್ಯಕ್ರಮದ ಬಳಿಕ ನಾಳೆ ಬೆಳಗ್ಗೆ 7ಕ್ಕೆ ಇಸ್ರೋದ ಗೆಸ್ಟ್ ಹೌಸ್ ಗೆ ವಾಪಸ್ ತೆರಳಿ ಅಲ್ಲಿಂದ ಮುಂಬೈಗೆ ತೆರಳಲಿದ್ದಾರೆ.
Advertisement
ಚಂದ್ರಯಾನ -2 ಚಂದ್ರನಂಗಳದಲ್ಲಿ ಇಳಿಯಲಿರುವ ಕ್ಷಣಗಳ ವೀಕ್ಷಣೆಗೆ ಆಗಮಿಸಿದ ಪ್ರಧಾನಿಗಳಿಗೆ ಸ್ವಾಗತ ಕೋರಲು ಸಿಎಂ ಬಿಎಸ್‍ವೈ ಅವರೊಂದಿಗೆ ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗಮಿಸಿದ್ದರು.
Advertisement
PM @narendramodi landed in Bengaluru.
He was welcomed by Governor of Karnataka Shri Vajubhai Vala, CM @BSYBJP, Union Ministers @DVSadanandGowda, @JoshiPralhad, Ministers of the Karnataka Cabinet and officials. pic.twitter.com/2kEwDX4N26
— PMO India (@PMOIndia) September 6, 2019