ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರನ ಮಗಳ ಪರ್ಸ್ ಅನ್ನು ಖದೀಮರು ದೋಷಿ ಪರಾರಿಯಾದ ಘಟನೆ ನವದೆಹಲಿಯಲ್ಲಿ ಶನಿವಾರ ನಡೆದಿದೆ.
ಪ್ರಧಾನಿ ಮೋದಿ ಅವರ ಅಣ್ಣ ಪ್ರಹ್ಲಾದ್ ಮೋದಿ ಅವರ ಮಗಳು ದಮಯಂತಿ ಬೆನ್ ಮೋದಿ ಪರ್ಸ್ ಕಳೆದುಕೊಂಡವರು. ದಮಯಂತಿ ಬೆನ್ ಅವರು ಅಮೃತಸರದಿಂದ ದೆಹಲಿಗೆ ಆಗಮಿಸಿದ್ದರು. ಹೀಗಾಗಿ ಉಳಿದುಕೊಳ್ಳಲು ಸಿವಿಲ್ ಲೇನ್ಸ್ ನಲ್ಲಿರುವ ಗುಜರಾತಿ ಸಮಾಜ ಭವನದಲ್ಲಿ ರೂಮ್ ಬುಕ್ ಮಾಡಿದ್ದರು. ಗುಜರಾತಿ ಸಮಾಜ ಭವನದ ಗೇಟ್ ಬಳಿ ಆಟೋದಿಂದ ಕೆಳಗಿಳಿಯುತ್ತಿದ್ದರು. ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಕಳ್ಳರ ಪರ್ಸ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
Advertisement
Advertisement
ಪರ್ಸ್ ನಲ್ಲಿ ಎರಡು ಮೊಬೈಲ್, 56,000 ರೂ. ನಗದು, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಇದ್ದವೆಂದು ದಮಯಂತಿ ತಿಳಿಸಿದ್ದಾರೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿವಿಲ್ ಲೇನ್ಸ್ ಪೊಲೀಸರು ಕಳ್ಳರಿಗೆ ಬಲೆ ಬೀಸಿದ್ದಾರೆ.
Advertisement
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಘಟನೆ ನಡೆದಿದೆ. ಹೀಗಾಗಿ ಬಿಜೆಪಿ ಮುಖಂಡ ಮನೋಜ್ ತಿವಾರಿ ದೆಹಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಕ್ರಮ ವಲಸಿಗರಿಂದಲೇ ದೆಹಲಿಯಲ್ಲಿ ಸಮಾಜವಿರೋಧಿ ಕೃತ್ಯಗಳು ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರವು ವಿಫಲವಾಗಿದೆ ಎಂದು ದೂರಿದ್ದಾರೆ.