ನವದೆಹಲಿ: ದೆಹಲಿಯ (Delhi) ದ್ವಾರಕ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮಾರ್ಗದ ವಿಸ್ತರಣೆಯನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಮೆಟ್ರೋ (Metro) ರೈಲಿನಲ್ಲಿ ಸಾಮಾನ್ಯ ಜನರೊಂದಿಗೆ ಪ್ರಯಾಣಿಸಿದರು.
ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಮೋದಿ ಮೆಟ್ರೋದಲ್ಲಿ ಸಂಚರಿಸಿದ ಸಂದರ್ಭ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ತಮ್ಮನ್ನು ಸ್ವಾಗತಿಸಿದ ಮಕ್ಕಳಿಗೆ ಮೋದಿಯವರು ಚಾಕ್ಲೇಟ್‌ಗಳನ್ನು ನೀಡಿದ್ದು, ಅನೇಕ ಪ್ರಯಾಣಿಕರು ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅಲ್ಲದೇ ಪ್ರಧಾನಿ ದೆಹಲಿ ಮೆಟ್ರೋ ರೈಲು ನಿಗಮದ (DMRC) ಸಿಬ್ಬಂದಿಯೊಂದಿಗೆ ಮಾತನಾಡಿದರು. ಇದನ್ನೂ ಓದಿ: ಪ್ರಧಾನಿಯಿಂದ ದೆಹಲಿಯಲ್ಲಿ ಯಶೋಭೂಮಿ ಸಮಾವೇಶ ಕೇಂದ್ರ ಅನಾವರಣ – ಏನಿದರ ವಿಶೇಷತೆ?
#WATCH | Passengers in Delhi metro extend their wishes to Prime Minister Narendra Modi on his 73rd birthday. PM Modi travelled by metro, earlier today pic.twitter.com/fZjxjqzExa
— ANI (@ANI) September 17, 2023
ಹೈಸ್ಪೀಡ್ ಕಾರಿಡಾರ್ ಅನ್ನು ದ್ವಾರಕಾ ಸೆಕ್ಟರ್ 21 ನಿಲ್ದಾಣದಿಂದ ಯಶೋಭೂಮಿ (YashoBhoomi) ದ್ವಾರಕಾ ಸೆಕ್ಟರ್ 25 ನಿಲ್ದಾಣಕ್ಕೆ ವಿಸ್ತರಿಸಲಾಗಿದೆ. ಸುಮಾರು 2 ಕಿಲೋಮೀಟರ್ ಉದ್ದದ ವಿಸ್ತರಣೆ ದ್ವಾರಕ ಸೆಕ್ಟರ್ 21 ಮತ್ತು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಅನ್ನು ಸಂಪರ್ಕಿಸುತ್ತದೆ. ಇದನ್ನೂ ಓದಿ: ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ- ರಾಷ್ಟ್ರಪತಿ ಸೇರಿದಂತೆ ಗಣ್ಯರಿಂದ ಶುಭಾಶಯ
ಈ ವಿಭಾಗವನ್ನು ಸೇರಿಸುವುದರಿಂದ ನವದೆಹಲಿಯಿಂದ ಯಶೋಭೂಮಿ ದ್ವಾರಕಾ ಸೆಕ್ಟರ್ 25ರವರೆಗಿನ ಏರ್‌ಪೋರ್ಟ್ ಎಕ್ಸ್ಪ್ರೆಸ್ ಲೈನ್‌ನ ಒಟ್ಟು ಉದ್ದ 24.9 ಕಿಲೋ ಮೀಟರ್ ಆಗಲಿದೆ ಎಂದು ಡಿಎಂಆರ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು – INDIAಗೆ ಸೋನಿಯಾ ಕರೆ
ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮಾರ್ಗವನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ಮೋದಿ ದ್ವಾರಕಾದಲ್ಲಿ ಯಶೋಭೂಮಿ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ (IICC) ಅನ್ನು ಅನಾವರಣಗೊಳಿಸಿದರು. ಇದನ್ನೂ ಓದಿ: ಒಂದು ದೇಶ, ಒಂದು ಚುನಾವಣೆ – ಸೆ.23 ರಂದು ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದಲ್ಲಿ ಮೊದಲ ಸಭೆ
Web Stories