ನವದೆಹಲಿ/ಟೆಲ್ ಅವಿವ್: ಕಷ್ಟದ ಸಮಯದಲ್ಲಿ ಇಸ್ರೇಲ್ (Israel) ಜೊತೆಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.
Deeply shocked by the news of terrorist attacks in Israel. Our thoughts and prayers are with the innocent victims and their families. We stand in solidarity with Israel at this difficult hour.
— Narendra Modi (@narendramodi) October 7, 2023
Advertisement
ಎಕ್ಸ್‌ನಲ್ಲಿ ಮೋದಿ ಅವರು, ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಬಲಿಯಾದ ಮುಗ್ಧ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಒಳಗೆ ನುಗ್ಗಿದ ಉಗ್ರರು – ಸಾರ್ವಜನಿಕರ ಮೇಲೆ ಗುಂಡಿನ ಮಳೆ
Advertisement
Breaking: Hundreds and possibly thousands of Israeli civilians are being butchered by Palestinians and #Hamas terrorists who have carried out a surprise attack. Attacks are ongoing.
They are attacking Israeli men woman and children and killing without conscience.… pic.twitter.com/Xr0Tgh0DEp
— Jim Ferguson (@JimFergusonUK) October 7, 2023
Advertisement
ಹಮಾಸ್‌ನಿಂದ ದಾಳಿ
ಪ್ಯಾಲೆಸ್ಟೈನ್ ಹಮಾಸ್ ಉಗ್ರಗಾಮಿಗಳು (Hamas Terrorists) ಗಾಜಾಪಟ್ಟಿಯಿಂದ ಆಪರೇಷನ್ ಅಲ್-ಅಕ್ಸಾ ಫ್ಲಡ್ (Operation Al Aqsa Flood) ಹೆಸರಿನಲ್ಲಿ ನಿದ್ದೆಯಲ್ಲಿ ಮಲಗಿದ್ದ ಇಸ್ರೇಲಿಗರ ಮೇಲೆ 5 ಸಾವಿರ ರಾಕೆಟ್ ಮಳೆಗರೆದಿದ್ದಾರೆ. ಇಸ್ರೇಲ್‌ನ ದಕ್ಷಿಣ ಇಸ್ರೇಲ್, ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಅಪಾರ ಸಾವು-ನೋವಾಗಿದೆ.
Advertisement
35 ಎಕರೆ ಭೂಭಾಗ ನಮಗೆ ಸೇರಿದ್ದು ಅಂತ ಘೋಷಣೆ ಮೊಳಗಿಸಿದ್ದಾರೆ. ಗಡಿ ಪಟ್ಟಣ ಸ್ಡೆರೊಟ್, ಮುಂದುವರಿಯುತ್ತಾ ರಾಜಧಾನಿ ಟೆಲ್ ಅವಿವ್ ಮೇಲೂ ಹಮಾಸ್ ಉಗ್ರರು ಕ್ಷಿಪಣಿ ದಾಳಿ ಮಾಡಿದ್ದಾರೆ.
Israel retaliating. #Israel #Hamas #Palestine #Palestinian #IronDome #Gaza #TelAviv pic.twitter.com/755Vt1TJTT
— Paul Golding (@GoldingBF) October 7, 2023
ಈ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೇನೆ ಕೂಡ ಗಾಜಾ ಪಟ್ಟಿ ಮೇಲೆ ವೈಮಾನಿಕ ದಾಳಿ ಮಾಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್‌ಯಹೂ (Benjamin Netanyahu) ಆಕ್ರೋಶಗೊಂಡಿದ್ದು, ಸ್ವೋರ್ಡ್ ಆಫ್ ಐರನ್ (Sword of Iron) ಹೆಸರಿನಲ್ಲಿ ಆಪರೇಷನ್ ಆರಂಭಿಸಿ, ಪ್ಯಾಲೆಸ್ತೀನ್‌ನ ಹಮಾಸ್ ಮೇಲೆ ಸಮರ ಸಾರಿದ್ದಾರೆ.
Since this morning, the State of Israel has been at war. Our first objective is to clear out the hostile forces that infiltrated our territory and restore the security and quiet to the communities that have been attacked.
The second objective, at the same time, is to exact an… pic.twitter.com/MzKs7tfv4M
— Benjamin Netanyahu – בנימין נתניהו (@netanyahu) October 7, 2023
ತನ್ನ ದೇಶದ ಜನತೆ ಸುರಕ್ಷಿತ ಬಂಕರ್‌ಗಳಿಗೆ ತೆರಳುವಂತೆ ಕರೆ ನೀಡಿದ್ದು, ನಮ್ಮನ್ನು ಕೆಣಕಿರುವ ಹಮಾಸ್ ಉಗ್ರರು ತಪ್ಪು ಮಾಡಿದ್ದಾರೆ. ಅವರು ತಕ್ಕ ಬೆಲೆ ತೆರಲೇಬೇಕು ಅಂತ ಗುಡುಗಿದ್ದಾರೆ. ಜೆರುಸಲೇಂನಲ್ಲಿ ದಾಳಿಯ ಸೈರನ್ ಮೊಳಗಿಸಲಾಗಿದೆ. ಹಮಾಸ್ ಬಂಡುಕೋರರ ದಾಳಿಯನ್ನು ವಿಶ್ವದ ರಾಷ್ಟ್ರಗಳು ಖಂಡಿಸಿವೆ.
Web Stories