-ಪ್ರಧಾನಮಂತ್ರಿ ಜನ್ ಆರೋಗ್ಯ ಅಭಿಯಾನ ಆರಂಭ
ನವದೆಹಲಿ: 72ನೇ ಸ್ವತಂತ್ರ್ಯದಿನಾಚರಣೆ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನರನ್ನು ಕುರಿತು ಮಾತನಾಡಿದ್ರು.
ಮೊದಲಿಗೆ ಎಲ್ಲ ಭಾರತೀಯರಿಗೂ ಸ್ವತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದ ಪ್ರಧಾನಿ, ದೇಶ ಆತ್ಮ ವಿಶ್ವಾಸದಲ್ಲಿದ್ದು, ಹೊಸ ಕನಸು, ಉತ್ಸಾಹದೊಂದಿಗೆ ಮುನ್ನಡೆಯುತ್ತಿದೆ. ತೆಲಂಗಾಣ ಆಂಧ್ರದ ಹೆಣ್ಣು ಮಕ್ಕಳು ಸಪ್ತ ಸಮುದ್ರ ದಾಟಿ ಬಂದಿದ್ದಾರೆ. ಈ ವರ್ಷ ಕಲಾಪಗಳು ಸುಗಮವಾಗಿ ನಡೆದು ಬಂದಿದ್ದು, ವಿಶ್ವದ 6 ಅತಿ ದೊಡ್ಡ ಆರ್ಥಿಕ ವ್ಯವಸ್ಥೆ ರಾಷ್ಟ್ರಗಳಲ್ಲಿ ಭಾರತ ಸಹ ಒಂದಾಗಿದೆ. ಹಿಂದುಳಿದ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ನಿರಂತರವಾಗಿ ಉತ್ತಮ ಮಳೆಯಾಗ್ತಿದ್ದು, ಪ್ರವಾಹ ಪೀಡಿತ ರಾಜ್ಯಗಳೊಂದಿಗೆ ಇಡೀ ದೇಶವೇ ಇದೆ ಎಂದು ಹೇಳಿದ್ರು.
Advertisement
ಆಯುಷ್ಮಾನ್ ಯೋಜನೆ ಅಡಿಯಲ್ಲಿ ಪ್ರಧಾನಮಂತ್ರಿ ಜನ್ ಆರೋಗ್ಯ ಅಭಿಯಾನ ಆರಂಭಿಸಲಾಗುವುದು. ಈ ಯೋಜನೆಯಿಂದ 10 ಕೋಟಿ ಕುಟುಂಬಗಳಿಗೆ 50 ಕೋಟಿ ಜನರಿಗೆ ಪ್ರಯೋಜನವಾಗಲಿದೆ. ಗಂಭೀರ ರೋಗಗಳಿಗೆ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಲಿದ್ದು, ಟ್ರೀಟಮೆಂಟ್ ಗಾಗಿ ಹಣ ಹೊಂದಿಸಲು ಕಷ್ಟಪಡೋದು ತಪ್ಪಲಿದೆ. 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ. ಸೆಪ್ಟೆಂಬರ್ 25ರಿಂದ ದೇಶದ 70ರಿಂದ 75 ಜಿಲ್ಲೆಗಳಲ್ಲಿಶ ಆಯುಷ್ಮಾನ್ ಯೋಜನೆ ಆರಂಭವಾಗಲಿದೆ ಎಂದು ತಿಳಿಸಿದ್ರು.
Advertisement
अगले वर्ष बैसाखी पर जलियांवाला बाग़ नरसंहार के 100 वर्ष होने जा रहे हैं। मैं इस नरसंहार में शहीद हुए हर देशवासी को याद करते हुए उन्हें विनम्र श्रद्धांजलि देता हूं: PM @narendramodi #IndependenceDayIndia https://t.co/DJlD9Eicm5 pic.twitter.com/UcfBQaHYqz
— BJP (@BJP4India) August 15, 2018
Advertisement
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು 100 ವರ್ಷಗಳು ಕಳೆದಿವೆ. ನಮ್ಮ ವೀರರ ಬಲಿದಾನವನ್ನು ನಾವೆಲ್ಲರು ಸ್ಮರಿಸಬೇಕಿದೆ. 2014ರಲ್ಲಿ ಜನರು ಕೇವಲ ಸರ್ಕಾರ ರಚಿಸಿ ಸುಮ್ಮನೆ ಕುಳಿತಿರಲಿಲ್ಲ. ದೇಶದ ರಚನೆಗಾಗಿ ಸರ್ಕಾರದ ಜೊತೆ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಇದು ಹೇಗೆ ಮುಂದುವರೆಯುತ್ತದೆ. ಇದು ನಮ್ಮ ದೇಶದ ಸುಂದರತೆ. ಕಳೆದ 4 ವರ್ಷಗಳಲ್ಲಿ ನಡೆದಿರುವ ಪ್ರಗತಿ ಕೆಲಸಗಳನ್ನು ನೋಡಿದ್ರೆ ದೇಶದ ಅಭಿವೃದ್ಧಿ ಹೇಗೆ ನಡೆಯುತ್ತಿದೆ ಎಂಬುವುದ ನಿಮಗೆ ತಿಳಿಯಲಿದೆ.
Advertisement
2013ರಲ್ಲಿದ್ದು ಸರ್ಕಾರದ ರೀತಿಯ ವೇಗದಲ್ಲಿ ನಾವು ಕೆಲಸಗಳನ್ನು ಮಾಡಿದ್ರೆ ಇಂದು ಆಗಿರುವ ಸಾಧನೆಗೆ ದಶಕಗಳೇ ಬೇಕಾಗಿತ್ತು. 2013ರಲ್ಲಿ ಇದ್ದ ದೇಶದ ಸ್ಥಿತಿ ಇಂದಿಲ್ಲ. ದೇಶದ ನಗರಗಳಲ್ಲಿ ಸ್ಟಾರ್ಟ್ ಅಪ್ ಆರಂಭವಾಗಿದೆ. ದೇಶದ ಆಧುನಿಕತೆ ವಿಜ್ಞಾನದತ್ತ ಸಾಗುತ್ತಿದ್ದು, ಗ್ರಾಮ ಗ್ರಾಮಗಳು ಡಿಜಿಟಲೀಕರಣಕ್ಕೆ ಒಳಪಡುತ್ತೀವೆ. ಏಕ ಶ್ರೇಣಿ, ಏಕ ವೇತನ ಮೂಲದ ನಿವೃತ್ತ ಯೋಧರ ಬೇಡಿಕೆಗಳನ್ನು ಈಡೇರಿಸಿದ್ದೇವೆ. ಜಿಎಸ್‍ಟಿ ಜಾರಿ ಮೂಲಕ ಏಕರೂಪದ ತೆರಿಗೆಯನ್ನು ಜಾರಿಗೆ ತರಲಾಗಿದೆ. ಬೇನಾಮಿ ಆಸ್ತಿಗಾಗಿ ಹೊಸ ಹೊಸ ತಂತ್ರಗಳನ್ನು ರಚಿಸಿದೆ. ಈ ಮೊದಲು ಪತ್ರಿಕೆಗಳಲ್ಲಿ ಭಾರತ ಆರ್ಥಿಕ ಸಂಕಷ್ಟದಲ್ಲಿದೆ ಎಂದು ವರದಿಯಾಗುತ್ತಿದೆ.
Tripura, Meghalaya and many parts of Arunachal Pradesh are seeing historic peace. From 126, Left Wing Extremism is restricted to 90 districts. We are working to ensure peace across the nation: PM Modi pic.twitter.com/wSEkwgp4yu
— ANI (@ANI) August 15, 2018
ಭಾರತ ಮಲ್ಟಿ ಬಿಲಿಯನ್ ಡಾಲರ್ ಹೂಡಿಕೆ ಸ್ಥಳವಾಗಿದೆ. ಮಲಗಿದ್ದ ಆನೆ ಇಂದು ಎಚ್ಚರಗೊಂಡು ಓಡುತ್ತಿದೆ ಎಂದು ವಿಶ್ವದ ಆರ್ಥಿಕ ತಜ್ಞರು ಹೇಳುತ್ತಿದೆ. ವಿಶ್ವದ ಉನ್ನತ ಸಂಸ್ಥೆಗಳು ಭಾರತದ ಬಗ್ಗೆ ಧನಾತ್ಮಕವಾಗಿ ಮಾತನಾಡುವಂತೆ ದೇಶದ ಆರ್ಥಿಕ ವ್ಯವಸ್ಥೆ ಬದಲಾಗಿದೆ. ಜಾಗತಿಕವಾಗಿ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. 2022ರಲ್ಲಿ ಸ್ವತಂತ್ರದ 75ನೇ ವರ್ಷಾಚರಣೆಯಲ್ಲಿ ದೇಶದ ಮಹಿಳೆ, ಮಕ್ಕಳು ಎಲ್ಲರು ಭಾರತದ ಧ್ವಜ ಹಿಡಿದು ಅಂತರಿಕ್ಷೆಗೆ ಹೋಗುವಂತೆ ಮಾಡಲಾಗುವುದು. 2022ರಲ್ಲಿ ದೇಶದ ರೈತರ ಆದಾಯವನ್ನು ದ್ವಿಗುಣ ಆಗುವಂತೆ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಬಲತ್ಕಾರ ಮಾಡುವ ರಾಕ್ಷಸ ಮನೋವೃತ್ತಿಗೆ ಅಂತ್ಯ ಹಾಡಬೇಕಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಒಳಾಗದವರ ಬಗ್ಗೆ ಪ್ರಚಾರಗೊಳಿಸಬೇಕಿದೆ. ರಾಕ್ಷಸ ಮನೋವೃತ್ತಿಯ ಅಂತ್ಯಗೊಳಿಸಲು ನಾವೆಲ್ಲರೂ ಪಣ ತೊಡಬೇಕಿದೆ. ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ವಿಶೇಷ ಕಾನೂನು ತಂದು ತರಲು ಸತತ ಪ್ರಯತ್ನ ಮಾಡುತ್ತಿದ್ದೇನೆ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ನಾನು ಸತತವಾಗಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Jab honsle buland hote hain, desh ke liye kuch karne ka irada hota hai toh benami sampati ka kanoon bhi lagu hota hai: Prime Minister Narendra Modi #IndiaIndependenceDay pic.twitter.com/0S7ZIZrzwQ
— ANI (@ANI) August 15, 2018
2014 se ab tak main anubhav kar raha hun ki sawa sau crore deshwasi sirf sarkaar banakar ruke nahi, woh desh banane mein jutte hue hain: PM Narendra Modi #IndependenceDayIndia pic.twitter.com/swD1YUzj21
— ANI (@ANI) August 15, 2018