– ಭಾರತದ ಹಡಗು ನಿರ್ಮಾಣ ಸಂಸ್ಥೆಯ ಮೈಲಿಗಲ್ಲು
ಉಡುಪಿ: ಭಾರತದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾದ ಉಡುಪಿ (Udupi) ಕೊಚ್ಚಿನ್ ಶಿಪ್ ಯಾರ್ಡ್ (Cochin Shipyard) ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ. ನಾರ್ವೆ (Norway) ದೇಶಕ್ಕೆ 3,800 ಟಿಡಬ್ಲ್ಯೂಡಿ ಸಾಮರ್ಥ್ಯದ ಬೃಹತ್ ಹಡಗನ್ನು ಪೂರೈಕೆ ಮಾಡಿದೆ.
Advertisement
Advertisement
ನಾರ್ವೆ ಭಾರತದ ಜೊತೆ ಸುಮಾರು 2,000 ಕೋಟಿ ರೂ. ಎಂಒಯು ಮಾಡಿಕೊಂಡಿದ್ದು, ಮೇಕ್ ಇನ್ ಇಂಡಿಯಾ ಯೋಜನೆಗಳು ಯಶಸ್ವಿ ಆಗಿರುವುದಕ್ಕೆ ಇದು ಸಾಕ್ಷಿ. ನಾರ್ವೆಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ನಾರ್ವೆ ವಿಲ್ಸನ್ ಕಂಪನಿ ಸಿಬ್ಬಂದಿ ಖರೀದಿ ಪ್ರಕ್ರಿಯೆ ಪೂರೈಸಿದರು. ಉಡುಪಿಯ ಮಲ್ಪೆ ಸಮೀಪದ ಬೋಟ್ ಬಿಲ್ಡಿಂಗ್ ಯಾರ್ಡ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಜೊತೆ ಭಾರತೀಯ ಸಂಸ್ಕೃತಿಯ ಪ್ರಕಾರ ಪೂಜೆ ನೆರವೇರಿಸಲಾಯಿತು. ಹಡಗಿಗೆ (Ship) ಕಾಯಿ ಒಡೆದು, ಆರತಿ ಎತ್ತಿ ಪೂಜೆ ಮಾಡಲಾಯಿತು. ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು ಮುಚಖಂಡಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
Advertisement
Advertisement
ಆತ್ಮನಿರ್ಭರ (Aatmanirbhar Bharat) ಮತ್ತು ಮೇಕ್ ಇನ್ ಇಂಡಿಯಾ (Make In India) ಕಾನ್ಸೆಪ್ಟ್‌ನಲ್ಲಿ ಈ ಬೃಹತ್ ಶಿಪ್ ತಯಾರಾಗಿದೆ. ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧ ಭಾಗದ 1,000ಕ್ಕೂ ಹೆಚ್ಚು ಜನ ಈಗಾಗಲೇ ಉದ್ಯೋಗ ಪಡೆದಿದ್ದಾರೆ. ಕಾರ್ಗೋ ಹಡಗುಗಳ ನಿರ್ಮಾಣದಲ್ಲಿ ಭಾರತ ವಿಶ್ವದಲ್ಲೇ ಸದ್ಯ 17ನೇ ಸ್ಥಾನದಲ್ಲಿದೆ. 2030ರ ವೇಳೆಗೆ ಟಾಪ್ ಟೆನ್ ಆಗುವ ಗುರಿಯನ್ನು ಹೊಂದಿದೆ. 2047ರ ವೇಳೆಗೆ ಟಾಪ್ 5ರ ಗುರಿಮುಟ್ಟುವ ಟಾರ್ಗೆಟ್ ಅನ್ನು ಭಾರತ ಸರ್ಕಾರ ನೀಡಿದೆ. ಇದನ್ನೂ ಓದಿ: Video | ಹೊಸ ವರ್ಷಕ್ಕೆ ದರ ಏರಿಕೆ ಶಾಕ್ – ಆಟೋ ದರ ಪ್ರತಿ ಕಿಮೀಗೆ 5 ರೂ. ಏರಿಕೆ ಸಾಧ್ಯತೆ!