ನವದೆಹಲಿ: ದೇಶಾದ್ಯಂತ ಪವಿತ್ರ ಬಕ್ರೀದ್ ಹಬ್ಬದ (Bakrid Festival) ಆಚರಣೆ ಹಿನ್ನೆಲೆಯಲ್ಲಿ ಸಮಸ್ತ ಮುಸ್ಲಿಂ (Muslims) ಬಾಂಧವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಭಾಶಯ ಕೋರಿದ್ದಾರೆ.
ಟ್ವೀಟ್ ಮೂಲಕ ಶುಭ ಕೋರಿರುವ ಪ್ರಧಾನಿ ಮೋದಿ, ಸರ್ವರಿಗೂ ಬಕ್ರೀದ್ ಹಬ್ಬದ (ಈದ್-ಉಲ್-ಅಧಾ) ಶುಭಾಶಯಗಳು. ಈ ದಿನ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನ ನೀಡಲಿ, ನಮ್ಮ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ ಎತ್ತಿ ಹಿಡಿಯುವಂತಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರೆಲ್ಲ ಐಸಿಸ್ ಆಗಲ್ಲ, ಮುಸ್ಲಿಂ ಮದುವೆ ಆಗಿದ್ದೇ ತಪ್ಪಾ?: ಪ್ರಿಯಾಮಣಿ ಮನದಾಳ
Advertisement
Greetings on Eid-ul-Adha. May this day bring happiness and prosperity to everyone. May it also uphold the spirit of togetherness and harmony in our society. Eid Mubarak!
— Narendra Modi (@narendramodi) June 29, 2023
Advertisement
ಈ ವರ್ಷ ಪವಿತ್ರ ಬಕ್ರೀದ್ ಹಬ್ಬವನ್ನು ಜೂನ್ ತಿಂಗಳ ಕೊನೆಯಲ್ಲಿ ಆಚರಿಸಲಾಗುತ್ತಿದೆ. ಇಸ್ಲಾಂ ಧರ್ಮವನ್ನು ನಂಬುವ ಜನರ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಕೂಡ ಒಂದು. ಈ ಹಬ್ಬವನ್ನು ತ್ಯಾಗದ ಸಂಕೇತವೆಂದು ಆಚರಿಸುತ್ತಾರೆ. ಇದನ್ನೂ ಓದಿ: ಬ್ಯಾಕ್ಟೀರಿಯಾ ಸೋಂಕಿಗೆ ತುತ್ತಾಗಿದ್ದ ಖ್ಯಾತ ಗಾಯಕಿ ಮಡೋನಾ ಆರೋಗ್ಯದಲ್ಲಿ ಚೇತರಿಕೆ
Advertisement
ಈ ದಿನ, ಈದ್ಗಾಗಳಲ್ಲಿ (Eidgah) ಮತ್ತು ಮಸೀದಿಗಳಲ್ಲಿ ಜಮಾತ್ ಜೊತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಕ್ರೀದ್ ದಿನದಂದು ಬೆಳಗ್ಗೆ ನಮಾಜ್ ಅರ್ಪಿಸುವುದರೊಂದಿಗೆ ಆಚರಣೆ ಪ್ರಾರಂಭವಾಗುತ್ತದೆ. ಈ ಸಂತೋಷದ ಸಂದರ್ಭಗಳಲ್ಲಿ ಬಡವರಿಗೆ ಸಹಾಯ ಮಾಡಬೇಕೆಂದು ಇಸ್ಲಾಂನಲ್ಲಿ ಹೇಳಲಾಗಿದೆ ಎಂದು ಧರ್ಮಗುರುಗಳು ಹೇಳುತ್ತಾರೆ.
Advertisement
ಬಕ್ರೀದ್ ಹಬ್ಬದ ದಿನದಂದು ಯಾವ ಪ್ರಾಣಿಯನ್ನೂ ತ್ಯಾಗ ಮಾಡಿದರೂ, ಅದರ ಮಾಂಸವನ್ನು ಮೂರು ಭಾಗಗಳನ್ನಾಗಿ ಮಾಡುತ್ತಾರೆ. ಈ 3 ಭಾಗಗಳಲ್ಲಿ ಒಂದು ಭಾಗವನ್ನ ಬಡವರಿಗೆ, 2ನೇ ಭಾಗವನ್ನ ಸಂಬಂಧಿಕರಿಗೆ ದಾನ ಮಾಡಬೇಕು. 3ನೇ ಭಾಗವನ್ನ ಮನೆಯವರು ಬಳಸಬೇಕು ಎನ್ನುವ ಸಂಪ್ರದಾಯವಿದೆ. ಬಕ್ರೀದ್ ಹಬ್ಬವು ಮುಸ್ಲಿಂ ಸಮುದಾಯದವರ ಪವಿತ್ರ ಹಬ್ಬವಾಗಿದ್ದು, ಇದು ಇಬ್ರಾಹಿಂನ ತ್ಯಾಗವನ್ನು ನೆನೆಯುವ ದಿನವಾಗಿದೆ.
Web Stories