ನವದೆಹಲಿ: ಜಪಾನ್ ಅಧ್ಯಕ್ಷ ಫ್ಯೂಮಿಯೋ ಕಿಶಿಡಾ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನ ಜಪಾಸ್ ಪ್ರವಾಸ ಕೈಗೊಂಡಿದ್ದು, ಅವರು ಅಲ್ಲಿ ಕ್ವಾಡ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.
Advertisement
ಭಾನುವಾರ ರಾತ್ರಿ ಭಾರತದಿಂದ ತೆರಳಿರುವ ಪ್ರಧಾನಿ ನಾಳೆ ಸಂಜೆವರೆಗೂ ಜಪಾನ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕ್ವಾಡ್ ಶೃಂಗ ಸಭೆಯಲ್ಲಿ ಎರಡು ದೇಶಗಳ ಉಪಕ್ರಮಗಳ ಬಗ್ಗೆ ಚರ್ಚೆಯಾಗಲಿದ್ದು, ಆಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ಇದೆ ಎಂದು ಪ್ರವಾಸಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಶಾಂತನಾದ ವರುಣ, ತಗ್ಗಿದ ಪ್ರವಾಹ – ಚಿಕ್ಕಬಳ್ಳಾಪುರದ ಡ್ಯಾಮ್‍ನಲ್ಲಿ ಯುವಕನ ಕೋತಿಯಾಟ
Advertisement
Advertisement
ಇದೇ ವೇಳೆ ಅಮೇರಿಕ ಅಧ್ಯಕ್ಷ ಜೋ ಬೈಡನ್ ಜೊತೆಗೂ ಮೋದಿ ಸಭೆ ನಡೆಸಲಿದ್ದು, ಭಾರತದ ಅಮೇರಿಕದ ನಡುವೆ ದ್ವಿ ಪಕ್ಷೀಯ ಮಾತುಕತೆ ನಡೆಯಲಿದೆ. ಈ ಮಾತುಕತೆಯಲ್ಲಿ ಸಮಕಾಲಿಮ ಜಾಗತಿಕ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಯಲಿದೆ.