ಗುವಾಹಟಿ: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಇಂದು ರಾಮನವಮಿ ಹಬ್ಬವನ್ನು ವಿಶೇಷ ಹಾಗೂ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಸೂರ್ಯ ರಶ್ಮಿಯು ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸುವ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ವೀಕ್ಷಣೆ ಮಾಡಿದ್ದಾರೆ.
After my Nalbari rally, I watched the Surya Tilak on Ram Lalla. Like crores of Indians, this is a very emotional moment for me. The grand Ram Navami in Ayodhya is historic. May this Surya Tilak bring energy to our lives and may it inspire our nation to scale new heights of glory. pic.twitter.com/QqDpwOzsTP
— Narendra Modi (@narendramodi) April 17, 2024
Advertisement
ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಲ್ಬರಿ ರ‍್ಯಾಲಿಯ ನಂತರ ನಾನು ಸೂರ್ಯ ತಿಲಕವನ್ನು (Surya Tilak) ವೀಕ್ಷಿಸಿದೆ. ಕೋಟಿಗಟ್ಟಲೆ ಭಾರತೀಯರಂತೆ ನನಗೂ ಇದು ಅತ್ಯಂತ ಭಾವನಾತ್ಮಕ ಹಾಗೂ ಐತಿಹಾಸಿಕ ಕ್ಷಣವಾಗಿದೆ. ಈ ಸೂರ್ಯ ತಿಲಕ ನಮ್ಮ ಜೀವನಕ್ಕೆ ಶಕ್ತಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರವು ವೈಭವದ ಹೊಸ ಎತ್ತರಗಳನ್ನು ಏರಲು ಪ್ರೇರೇಪಿಸಲಿ ಎಂದು ಶುಭಹಾರೈಸಿದ್ದಾರೆ. ಇದನ್ನೂ ಓದಿ: ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆಬಾಗುತ್ತೇನೆ: ಅರುಣ್ ಯೋಗಿರಾಜ್
Advertisement
#WATCH | PM Narendra Modi watched the Surya Tilak on Ram Lalla after his rally in Nalbari, Assam
"Like crores of Indians, this is a very emotional moment for me. The grand Ram Navami in Ayodhya is historic. May this Surya Tilak bring energy to our lives and may it inspire our… pic.twitter.com/hA0aO2QbxF
— ANI (@ANI) April 17, 2024
Advertisement
ಪ್ರಧಾನಿಯವರು ಇಂದು ಅಸ್ಸಾಂನ ನಲ್ಬರಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಈ ನಡುವೆಯೇ ತಮ್ಮ ಟ್ಯಾಬ್ಲೆಟ್‌ನಲ್ಲಿ ಸೂರ್ಯ ತಿಲಕ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. ಶೂ ಕಳಚಿಟ್ಟು ವೀಕ್ಷಿಸುತ್ತಿದ್ದ ಮೋದಿ ಸೂರ್ಯ ತಿಲಕ ವೀಕ್ಷಿಸುತ್ತಿರುವ ವೀಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿವೆ.
Advertisement