ಲಕ್ನೋ: ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra modi) ಅವರು ಮಟ್ಕಾ ಚಾಯ್ (Matka Chai) ಸವಿದಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಉತ್ತರ ಪ್ರದೇಶದಲ್ಲಿ ಮಾರ್ಚ್ 7 ರಂದು ಏಳನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯ ವಿವಿಧ ಪ್ರದೇಶಗಳಲ್ಲಿ ಬೃಹತ್ ರೋಡ್‍ಶೋ ನಡೆಸಿದ್ದಾರೆ. ನಗರದ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಂತರ ಮೋದಿ ಅವರು ನಗರದ ಸ್ಥಳೀಯ ಟೀ ಸ್ಟಾಲ್‍ವೊಂದರಲ್ಲಿ ಮಟ್ಕಾ ಚಾಯ್ ಸವಿದಿದ್ದಾರೆ. ಕುಡಿಕೆಯಲ್ಲಿ ಚಹಾವನ್ನು ಮೋದಿ ಜೊತೆಗೆ ಅನೇಕ ನಾಯಕರು ಸಹ ಸವಿದಿದ್ದಾರೆ.
#WATCH PM Narendra Modi enjoys chai at a tea stall during his roadshow in his parliamentary constituency Varanasi pic.twitter.com/bVN73HvdDT
— ANI UP/Uttarakhand (@ANINewsUP) March 4, 2022
ಮೋದಿ ಅವರು ಸ್ಥಳೀಯ ಟೀ ಸ್ಟಾಲ್‍ನಲ್ಲಿ (tea stall) ಕುಳಿತು ಜನರೊಂದಿಗೆ ಸಂವಹನ ನಡೆಸಿದ್ದಾರೆ. ಚಹಾವನ್ನು ಸವಿಯುತ್ತಾ ಆನಂದಿಸುತ್ತಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ. ಮೋದಿ ಮಾರ್ಚ್ 4, 5 ರಂದು ವಾರಣಾಸಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ಈಗಾಗಲೇ ನಡೆದಿರುವ ರೋಡ್‍ಶೋ ಉದ್ದಕ್ಕೂ ಜನಸಮೂಹ ಮೋದಿಯನ್ನು ಹಿಂಬಾಲಿಸಿತು ಮತ್ತು ಅನೇಕ ಜನರು ಬಾಲ್ಕನಿಗಳು ಮತ್ತು ಮೇಲ್ಛಾವಣಿಗಳ ಮೇಲೆ ನಿಂತು ಅವರತ್ತ ಕೈ ಬೀಸುತ್ತಾ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಒಂದೇ ಹಳಿಯಲ್ಲಿ ಎರಡು ರೈಲು – ಅಪಾಯದಿಂದ ಪಾರಾಗುವ ಹೊಸ ತಂತ್ರಜ್ಞಾನ ಪರೀಕ್ಷೆ ಯಶಸ್ವಿ