ನವದೆಹಲಿ: ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ಸಂಭಾಷಣೆಯಲ್ಲಿ, ಭಾರತ ಮತ್ತು ಅಮೆರಿಕ ಜಂಟಿಯಾಗಿ ಕೊರೊನಾ ವಿರುದ್ಧ ಪೂರ್ಣ ಬಲದಿಂದ ಹೋರಾಡಲು ಒಪ್ಪಿಕೊಂಡಿವೆ.
ಅಮೆರಿಕದಲ್ಲಿ ಈವರೆಗೆ 2.78 ಲಕ್ಷಕ್ಕೂ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 7,100ಕ್ಕೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಭಾರತದಲ್ಲಿಯೂ ಇದುವರೆಗೆ ಸುಮಾರು 3,200ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, 87 ಜನರು ಬಲಿಯಾಗಿದ್ದಾರೆ.
Advertisement
Had an extensive telephone conversation with President @realDonaldTrump. We had a good discussion, and agreed to deploy the full strength of the India-US partnership to fight COVID-19.
— Narendra Modi (@narendramodi) April 4, 2020
Advertisement
ಕೊರೊನಾದ ಕಾರಣದಿಂದಾಗಿ ಉಭಯ ದೇಶಗಳ ಪರಿಸ್ಥಿತಿಯನ್ನು ಮೋದಿ ಮತ್ತು ಟ್ರಂಪ್ ವಿವರವಾಗಿ ಚರ್ಚಿಸಿದ್ದಾರೆ. ಈ ಚರ್ಚೆಯ ನಂತರ ಮೋದಿ ಟ್ವೀಟ್ ಮಾಡಿ, ನಾವು ಉತ್ತಮ ಚರ್ಚೆ ನಡೆಸಿದ್ದೇವೆ. ಭಾರತ ಮತ್ತು ಅಮೆರಿಕ ಜಂಟಿಯಾಗಿ ಕೋವಿಡ್ -19 ವಿರುದ್ಧ ಪೂರ್ಣ ಬಲದಿಂದ ಹೋರಾಡಲಿದೆ ಎಂದು ತಿಳಿಸಿದ್ದಾರೆ.
Advertisement
ವಿಪಕ್ಷ ನಾಯಕರೊಂದಿಗೆ ಮೋದಿ ಮಾತು:
ಕೊರೊನಾ ವೈರಸ್‍ನಿಂದ ಉದ್ಭವಿಸಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 8ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದ ವಿರೋಧ ಪಕ್ಷದ ನಾಯಕರೊಂದಿಗೆ ಮಾತನಾಡಲಿದ್ದಾರೆ. ಲಾಕ್‍ಡೌನ್ ಘೋಷಿಸಿದ ನಂತರ, ಲೋಕಸಭೆ ಮತ್ತು ರಾಜ್ಯಸಭೆಯ ಐದಕ್ಕೂ ಹೆಚ್ಚು ನಾಯಕರೊಂದಿಗೆ ಮೊದಲ ಬಾರಿಗೆ ಚರ್ಚೆ ನಡೆಸಲಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶನಿವಾರ ಈ ಮಾಹಿತಿ ನೀಡಿದ್ದಾರೆ.
Advertisement
ದೇಶದಲ್ಲಿ ಕಳೆದ ಒಂದು ವಾರದಿಂದ 1,973 ಕೊರೊನಾ ಸೋಂಕಿತರು ಹೆಚ್ಚಾಗಿದೆ. ಮಾರ್ಚ್ 29ರಂದು ಕೊರೊನಾ ಸೋಂಕಿತರ ಸಂಖ್ಯೆ 1,139 ಆಗಿತ್ತು. ಆದರೆ ಶನಿವಾರದ ವೇಳೆಗೆ 3,229ಕ್ಕೆ ಏರಿಕೆ ಕಂಡಿದೆ.