ಕೊಯಮತ್ತೂರು: ಇಶಾ ಫೌಂಡೇಷನ್ ಸಂಸ್ಥಾಪಕ, ಪ್ರಸಿದ್ಧ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ತಮಿಳುನಾಡಿನ ವೆಲ್ಲಯಂಗಿರಿ ಪರ್ವತದ ತಪ್ಪಲಿನಲ್ಲಿ ನಿರ್ಮಿಸಿದ್ದ 112 ಅಡಿ ಎತ್ತರದ ಬೃಹತ್ ಶಿವನ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.
ಶಿವನ ವಿಗ್ರಹ ತೂಕ ಬರೋಬ್ಬರಿ 500 ಟನ್ ಇದ್ದು, ಭೂಮಿಯ ಮೇಲಿನ ವಿಗ್ರಹಗಳಲ್ಲಿ ಅತಿ ದೊಡ್ಡ ಮುಖವಿರುವ ವಿಗ್ರಹ ಇದಾಗಿದೆ. ಈ ಬೃಹತ್ ವಿಗ್ರಹವನ್ನು ಸಂಪೂರ್ಣವಾಗಿ ಸ್ಟೀಲ್‍ನಿಂದ ನಿರ್ಮಿಸಲಾಗಿದೆ.
Advertisement
ಯೋಗದ ಮುಲಕ ಮುಕ್ತಿ ಸಾಧನೆಗಾಗಿ ಮಾನವನಿಗೆ ಇರುವ 112 ದಾರಿಗಳ ದ್ಯೋತಕವಾಗಿ 112 ಅಡಿಗಳ ಶಿವನ ಮೂರ್ತಿಯನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲೇ ಮಾನವ ದೇಹದಲ್ಲಿರುವ 112 ಚಕ್ರಗಳನ್ನೂ ಇದು ಪ್ರತಿನಿಧಿಸುತ್ತದೆ. 8 ತಿಂಗಳಿನಲ್ಲಿ ಈ ಮೂರ್ತಿಯನ್ನು ನಿರ್ಮಿಸಲಾಗಿದೆ. ಇಂತಹ ಮೂರ್ತಿಗಳನ್ನು ಮುಂಬೈ ಸೇರಿದಂತೆ ದೇಶದ ನಾಲ್ಕು ದಿಕ್ಕುಗಳಲ್ಲಿಯೂ ನಿರ್ಮಿಸಲು ಇಶಾ ಫೌಂಡೇಷನ್ ಉದ್ದೇಶಿಸಿದೆ.
Advertisement