LatestMain PostNational

ಸ್ವಾತಂತ್ರ್ಯ ಹೋರಾಟಗಾರರ ಮಗಳ ಕಾಲು ಮುಟ್ಟಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ

Advertisements

ಅಮರಾವತಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ ಪಸಲ ಕೃಷ್ಣ ಮೂರ್ತಿ ಅವರ ಕುಟುಂಬವನ್ನು ಭೇಟಿ ಮಾಡಿದರು.

ಪಸಲ ಕೃಷ್ಣ ಮೂರ್ತಿ ಅವರ 90 ವರ್ಷದ ಪುತ್ರಿ ಪಸಲ ಭಾರತಿ, ಅವರ ಸಹೋದರಿ ಹಾಗೂ ಸೊಸೆಯನ್ನು ಮೋದಿ ಭೇಟಿ ಮಾಡಿದ್ದಾರೆ. ಈ ವೇಳೆ ಮೋದಿ ಭಾರತಿಯವರ ಕಾಲನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ವ್ಹೀಲ್ ಚೇರ್‌ನಲ್ಲಿ ಕುಳಿತಿರುವ ಭಾರತಿ ಅವರ ಕಾಲನ್ನು ಮುಟ್ಟಿ ನಮಸ್ಕರಿಸುತ್ತಿರುವ ಮೋದಿಯವರ ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕೋವಿಡ್ ವೇಳೆ ಜನರ ಜೀವ ರಕ್ಷಣೆಗೆ ಮೋದಿಯವ್ರು ಹಗಲು-ರಾತ್ರಿ ಪ್ರಯತ್ನ ಮಾಡಿದ್ದಾರೆ: ಶೋಭಾ ಕರಂದ್ಲಾಜೆ

ಪಸಲ ಕೃಷ್ಣ ಮೂರ್ತಿ ಅವರು 1900 ಇಸವಿಯಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೆಂ ತಾಲೂಕಿನ ಪಶ್ಚಿಮ ವಿಪ್ಪರ್ರಿ ಗ್ರಾಮದಲ್ಲಿ ಜನಿಸಿದರು. ಅವರು 1921ರಲ್ಲಿ ತಮ್ಮ ಪತ್ನಿಯೊಂದಿಗೆ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಗಾಂಧಿವಾದಿಯಾಗಿದ್ದ ಕೃಷ್ಣ ಮೂರ್ತಿ ಉಪ್ಪಿನ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿದ್ದರು. ಇದಕ್ಕಾಗಿ ಅವರಿಗೆ 1 ವರ್ಷದ ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು. ಕೃಷ್ಣ ಮೂರ್ತಿ 1978ರಲ್ಲಿ ನಿಧನರಾದರು. ಇದನ್ನೂ ಓದಿ: ಮಿಗ್ 29 ಬದಲಿಸಲು ಮಲೇಷ್ಯಾದ ಮೊದಲ ಆಯ್ಕೆ ಭಾರತದ ತೇಜಸ್

ಆಂಧ್ರಪ್ರದೇಶದ ಭೀಮಾವರಂನಲ್ಲಿ ಇಂದು ನಡೆದ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ದಿನದ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು. ಈ ವಿಶೇಷ ಕಾರ್ಯಕ್ರಮದಲ್ಲಿ 30 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಮೋದಿ ಅನಾವಣಗೊಳಿಸಿದರು.

Live Tv

Leave a Reply

Your email address will not be published.

Back to top button