ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮತ್ತೊಮ್ಮೆ ಬೆಂಗಳೂರಿಗೆ ಭೇಟಿ ಕೊಡಲಿದ್ದಾರೆ. ಇದೇ ತಿಂಗಳ 25 ರಂದು ಬೆಂಗಳೂರಿನಲ್ಲಿ ಹೆಚ್‍ಎಎಲ್ (HAL Airport) ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿಯವರು ಅಂದು ಬರುತ್ತಿದ್ದಾರೆ.
Advertisement
ಹೆಚ್‍ಎಎಲ್ ಕಾರ್ಯಕ್ರಮದ ಬಳಿಕ ಪ್ರಧಾನಿಯವರು ತೆಲಂಗಾಣಕ್ಕೆ ತೆರಳಿ, ಅಲ್ಲಿನ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ಪ್ರಧಾನಿಯವರ ಬೆಂಗಳೂರು ಭೇಟಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಪ್ರೊಟೋಕಾಲ್ ಪಾಲನೆ, ಅಗತ್ಯ ತಯಾರಿ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ರು. ಇದನ್ನೂ ಓದಿ: ಕಳೆದ ಬಾರಿ ಬೆಳಗಾವಿಯಿಂದ ಬಿದ್ದಿತ್ತು, ಈ ಸಲ ದುಬೈನಿಂದ ಸರ್ಕಾರ ಬೀಳುತ್ತೆ: ಆರ್.ಅಶೋಕ್ ಹೊಸ ಬಾಂಬ್
Advertisement
Advertisement
ಇತ್ತಿಚೆಗೆ ಚಂದ್ರಯಾನ-3 (Chandrayaan-3) ಯಶಸ್ವಿ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿದ್ದ ಮೋದಿಯವರು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದರು. ಆದರೆ ಆ ಸಂದರ್ಭದಲ್ಲಿ ಪ್ರಧಾನಿಯವರು ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗದೇ ದೂರವಿರಿಸಿದ್ದರು. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರ ನೇಮಕಾತಿ ಬಳಿಕ ಪ್ರಧಾನಿ ಮೋದಿಯವರು ಮೊದಲ ಭೇಟಿ ನೀಡುತ್ತಿದ್ದು ಮಹತ್ವ ಪಡೆದುಕೊಂಡಿದೆ.