ನವದೆಹಲಿ: ಈ ಬಾರಿ ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷಗಳು ಗದ್ದಲ ಕೋಲಾಹಲ ನಡೆಸಿದ್ದರಿಂದ ಸಂಸತ್ತಿನ 23 ದಿನಗಳ ಕಲಾಪ ಹಾಳಾಗಿತ್ತು. ಇದನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಸಂಸದರ ಜೊತೆ ಗುರುವಾರ ಒಂದು ದಿನ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧಾರ ಮಾಡಿದ್ದಾರೆ.
ದೇಶದಲ್ಲಿ ಶಾಂತಿ, ಕೋಮು ಸೌಹಾರ್ದತೆಯನ್ನು ಕಾಪಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಪಕ್ಷದ ಸಂಸದರ ಜೊತೆ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದಕ್ಕೆ ತಿರುಗೇಟು ಎನ್ನುವಂತೆ ಬಿಜೆಪಿಯೂ ಉಪವಾಸ ನಡೆಸಲು ಮುಂದಾಗಿದೆ.
Advertisement
ಉಪವಾಸದ ದಿನ ತನ್ನ ದೈನಂದಿನ ಸರ್ಕಾರದ ಕೆಲಸಗಳನ್ನು ಎಂದಿನಂತೆ ಮೋದಿ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸುವುದರೊಂದಿಗೆ ಮೋದಿ ಸತ್ಯಾಗ್ರಹಕ್ಕೆ ಸಾಥ್ ನೀಡಲಿದ್ದಾರೆ.
Advertisement
ಅಮಿತ್ ಶಾ ಗುರುವಾರ ಮತ್ತು ಶುಕ್ರವಾರ ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿಯಲ್ಲಿ ಪ್ರವಾಸ ಮಾಡಲಿದ್ದಾರೆ. ಗುರುವಾರ ಬೆಳಗ್ಗೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾಂಗ್ರೆಸ್ ಸರ್ಕಾರದ ವಿಭಜನಕಾರಿ ರಾಜಕೀಯ ಖಂಡಿಸಿ ಆಯೋಜನೆಗೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ.
Advertisement
Congress President @RahulGandhi at Rajghat to lead the party's day-long fast protesting the rising instances of atrocities against Dalits, adivasis, and minorities under the Modi Govt. #CongressForPeaceAndHarmony pic.twitter.com/sqpMCxIxQg
— Congress (@INCIndia) April 9, 2018
Advertisement
ಸಂಸತ್ ಬಜೆಟ್‍ನ ಈ ಬಾರಿಯ 23 ದಿನಗಳ ಕಲಾಪ ಅನುತ್ಪಾದಕವಾಗಿತ್ತು. ಇದಕ್ಕೆ ಕಾಂಗ್ರೆಸ್ ಕಾರಣ ಅಂತ ಬಿಜೆಪಿ ಕಿಡಿಕಾರಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ. ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಮತ್ತು ಎನ್‍ಡಿಎ ಸಂಸದರು ದೇಶಾದ್ಯಂತ ನಿರಶನ ಕೈಗೊಳ್ಳಲಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ಪ್ರಧಾನಿಯೊಬ್ಬರು ಉಪವಾಸ ಕೂರುತ್ತಿರುವುದು ಇದೇ ಮೊದಲಾಗಿದೆ.
ಈ ಬಾರಿ ಬಜೆಟ್ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಗಿಂತ ರಫೇಲ್ ವಿಮಾನ ಡೀಲ್, ಪಿಎನ್‍ಬಿ ಬ್ಯಾಂಕ್‍ಗೆ ದೋಖಾ ಮಾಡಿದ್ದ ನೀರವ್ ಮೋದಿ-ಮೆಹುಲ್ ಚೋಕ್ಸಿ, ಎಸ್‍ಸಿ,ಎಸ್‍ಟಿ ಕಾಯ್ದೆ, ಆಂಧ್ರಕ್ಕಾಗಿ ವಿಶೇಷ ಸ್ಥಾನಮಾನ, ಕಾವೇರಿ ಜಲಮಂಡಳಿ ರಚನೆ, ಸಿಬಿಎಸ್‍ಇ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯಗಳನ್ನು ಮುಂದಿಟ್ಟು ವಿಪಕ್ಷಗಳು ಅಡ್ಡಿಪಡಿಸಿದ್ದವು.
ಬಜೆಟ್ ಅಧಿವೇಶನದ ಹೈಲೈಟ್ಸ್ ಏನು?
* 18 ವರ್ಷಗಳಲ್ಲೇ ಅತ್ಯಂತ ಕಡಿಮೆ ಉತ್ಪಾದಕ ಬಜೆಟ್ ಅಧಿವೇಶನ
* ಲೋಕಸಭೆ 33.6 ಗಂಟೆ, ರಾಜ್ಯಸಭೆ 55.2 ಗಂಟೆ ಮಾತ್ರ ಚರ್ಚೆ
* ಬಜೆಟ್ ಮೊದಲ ಅಧಿವೇಶನದಲ್ಲಿ ಬಹುತೇಕ ಸಮಯ ಬಜೆಟ್ ಚರ್ಚೆಗೆ ಮೀಸಲು
* ಶಾಸಕಾಂಗ ವ್ಯವಹಾರಗಳ ಸಂಬಂಧ ಒಟ್ಟಾರೆ 19 ಮಾತ್ರ ಚರ್ಚೆ
* ಈ 19 ನಿಮಿಷದಲ್ಲಿ 14 ನಿಮಿಷ 2 ಸರ್ಕಾರಿ ಬಿಲ್ ಪಾಸ್, ಖಾಸಗಿ ಬಿಲ್ ಬಗ್ಗೆ ಚರ್ಚೆ ಆಗಿಲ್ಲ
* ಬಜೆಟ್ ಎರಡನೇ ಅಧಿವೇಶನದಲ್ಲಿ 18 ನಿಮಿಷದೊಳಗೆ ಹಣಕಾಸು ಬಿಲ್ ಬಗ್ಗೆ ಚರ್ಚೆ
* ಯಾವುದೇ ಸಂಸದರು ಭಾಗಿಯಾಗದೆ ಹಣಕಾಸು ಬಿಲ್ ಪಾಸ್
* ರಾಜ್ಯಸಭೆಯಲ್ಲಿ 11 ಗಂಟೆ ಬಜೆಟ್ ಬಗ್ಗೆ ಚರ್ಚೆಯಾಗಿದೆ
* 2 ಗಂಟೆ 31 ನಿಮಿಷ ಶಾಸಕಾಂಗ ವ್ಯವಹಾರಗಳ ಬಗ್ಗೆ ಚರ್ಚಿಸಿದೆ
* ಇದರಲ್ಲಿ ಕೇವಲ 3 ನಿಮಿಷ ಸರ್ಕಾರಿ ಬಿಲ್, ಉಳಿದದ್ದು ಖಾಸಗಿ ಬಿಲ್ ಚರ್ಚೆಗೆ ಬಳಕೆ
* ಒಟ್ಟಾರೆ ನೋಡೋದಾದ್ರೆ ಲೋಕಸಭೆ ಕೇವಲ 33.6%, ರಾಜ್ಯಸಭೆಯಲ್ಲಿ 53.2% ರಷ್ಟು ಸಮಯ ವಿನಿಯೋಗ
Here are some glimpses of Congress party units across the country that are observing a day-long fast today to protest the rising atrocities against Dalits, adivasis, & minorities under the Modi Govt. #CongressForPeaceAndHarmony pic.twitter.com/XvPVxI3irD
— Congress (@INCIndia) April 9, 2018