ನವದೆಹಲಿ: ಇದೇ ಸೋಮವಾರ ರುವಾಂಡಾ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಅಧ್ಯಕ್ಷ ಪಾಲ್ ಕಾಗೇಮ್ ಅವರಿಗೆ 200 ಹಸುಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ.
ದಕ್ಷಿಣ ಆಫ್ರಿಕಾ ಖಂಡ ಪಶ್ಚಿಮ ಭಾಗದಲ್ಲಿ ರುವಾಂಡೆ ದೇಶವಿದ್ದು, ಆ ದೇಶದ ಮಾದರಿ ಗ್ರಾಮ ರೇವೆರುಕ್ಕೆ ಪ್ರಧಾನಿ ಭೇಟಿ ನೀಡಲಿದ್ದಾರೆ. ಸ್ಥಳೀಯ ಸರ್ಕಾರ ಜಾರಿಗೆ ತಂದಿರುವ ‘ಗಿರಿಂಕಾ’ ಯೋಜನೆಗೆ ತಮ್ಮ ಕೊಡುಗೆ ನೀಡಲಿದ್ದಾರೆ.
ಏನಿದು ಗಿರಿಂಕಾ ಯೋಜನೆ?
2006ರಲ್ಲಿ ರುವಾಂಡಾ ಸರ್ಕಾರವು ‘ಪ್ರತಿ ಬಡ ಕುಟುಂಬಕ್ಕೆ ಒಂದು ಹಸು’ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಇಲ್ಲಿಯವರೆಗೆ 3.5 ಲಕ್ಷ ಫಲಾನುಭವಿಗಳಿಗೆ ಯೋಜನೆ ಮುಟ್ಟಿದೆ. ಸರ್ಕಾರದ ಡೈರಿಗಳಿಂದ ನೀಡಿದ ಹಸುವಿನ ಮೊದಲ ಹೆಣ್ಣು ಕರುವನ್ನು ತಮ್ಮ ಸಂಬಂಧಿಕರಿಗೆ ಹಾಗೂ ಸ್ಥಳಿಯರಿಗೆ ನೀಡುತ್ತಿದ್ದಾರೆ. ಇದು ಭಾರತದ ಹಳೆಯ ಸಂಪ್ರಾದಾಯ (ಬಳುವಳಿ ಪದ್ಧತಿ) ಕೂಡಾ ಆಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅದೇ ದೇಶದ 200 ಹಸುಗಳನ್ನು ಉಡುಗೂರೆಯಾಗಿ ನೀಡಲಿದ್ದಾರೆ.
ರುವಾಂಡಾ ದೇಶವನ್ನು ಭೇಟಿ ಮಾಡುತ್ತಿರುವ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ. 1994 ರಲ್ಲಿ ನಡೆದ ನರಮೇಧದಲ್ಲಿ ಅನೇಕ ಭಾರತೀಯರು ಮೃತಪಟ್ಟಿದ್ದು, ಕೆಲವರನ್ನು ಸ್ಥಳೀಯ ಸರ್ಕಾರ ರಕ್ಷಣೆ ಮಾಡಿತ್ತು. ಹೀಗಾಗಿ ಕಿಗಾಲಿ ಜೆನೋಸೈಡ್ ಸ್ಮಾರಕಕ್ಕೂ ಭೇಟಿ ನೀಡಿ, ನರಮೇಧದ ವೇಳೆ ಭಾರತೀಯರನ್ನು ರಕ್ಷಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಲಿದ್ದಾರೆ ಎಂದು ಉನ್ನತ ಅಧಿಕಾರಿ ಮೂಲಗಳು ತಿಳಿಸಿವೆ.