– ಬ್ರೂನೈ ಪ್ರವಾಸದಲ್ಲಿ ಪ್ರಧಾನಿ ಮೋದಿ; ಭವ್ಯ ಸ್ವಾಗತ ಕೋರಿದ ವಿಶ್ವದ ಶ್ರೀಮಂತ ದೊರೆ
ಬ್ರೂನೈ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಬ್ರೂನೈಗೆ (Brunei) ಐತಿಹಾಸಿಕ ಪ್ರವಾಸ ಕೈಗೊಂಡಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಪ್ರವಾಸ ಇದಾಗಿದೆ. ಬ್ರೂನೈ ಸುಲ್ತಾನನಿಂದ ಮೋದಿಗೆ ಭವ್ಯ ಸ್ವಾಗತ ಕೂಡ ಸಿಕ್ಕಿದೆ.
Advertisement
ಬ್ರೂನೈನಲ್ಲಿ ಪ್ರಧಾನಿ ಮೋದಿ 2 ದಿನದ ಪ್ರವಾಸದಲ್ಲಿದ್ದಾರೆ. ಬ್ರೂನೈ ಸುಲ್ತಾನನ ಐಷಾರಾಮಿ ಮನೆಯಲ್ಲಿ ಮೋದಿ ಊಟ ಸವಿಯಲಿದ್ದಾರೆ. ಪ್ರವಾಸದ 2 ನೇ ದಿನದಂದು, ಪ್ರಧಾನಿ ಮೋದಿ ಅವರು ಬ್ರೂನೈ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರನ್ನು ಅವರ ಅಧಿಕೃತ ನಿವಾಸ, ವಿಶ್ವದ ಅತಿದೊಡ್ಡ ಇಸ್ತಾನಾ ನೂರುಲ್ ಇಮಾನ್ ಅರಮನೆಯಲ್ಲಿ ಭೇಟಿಯಾಗಲಿದ್ದಾರೆ. ಇದನ್ನೂ ಓದಿ: ಇಂದು ಬ್ರೂನೈಗೆ ಪ್ರಧಾನಿ ಮೋದಿ ಭೇಟಿ – 7 ಸಾವಿರ ಕಾರುಗಳ ಒಡೆಯ ಬ್ರೂನಿ ಸುಲ್ತಾನನಿಂದ ಸ್ವಾಗತ
Advertisement
Advertisement
ಅರಮನೆಯು ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ತನ್ನ ಹೆಸರನ್ನು ನೋಂದಾಯಿಸಿದೆ. 1,788 ಕೊಠಡಿಗಳು, 257 ಸ್ನಾನಗೃಹಗಳು ಮತ್ತು 38 ರೀತಿಯ ಅಮೃತಶಿಲೆಯಿಂದ ಮಾಡಿದ 44 ಮೆಟ್ಟಿಲುಗಳನ್ನು ಹೊಂದಿದೆ. ಈ ಅರಮನೆಯಲ್ಲಿ ಪ್ರಧಾನಿ ಮೋದಿಗೆ ವಿಶೇಷ ಆತಿಥ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
Advertisement
ದಿವಂಗತ ರಾಣಿ ಎಲಿಜಬೆತ್ II ಅವರನ್ನು ಬಿಟ್ಟರೆ, ವಿಶ್ವದಲ್ಲೇ ಅತ್ಯಂತ ದೀರ್ಘಾವಧಿಯ ದೊರೆಯಾಗಿರುವ ಎರಡನೇ ಸುಲ್ತಾನ ಇವರಾಗಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು ಕೂಡ. ಇದನ್ನೂ ಓದಿ: ಚೀನಾ, ಫಿಲಿಪೈನ್ಸ್ ಗಡಿ ವಿವಾದ – ಶಮನವಾಗದ ದಶಕಗಳ ಉದ್ವಿಗ್ನತೆಗೆ ಕಾರಣವೇನು ಗೊತ್ತಾ?
ಪ್ರಧಾನಿ ಮೋದಿ ಮತ್ತು ಬ್ರೂನೈ ಸುಲ್ತಾನ್ ಅವರು 2014 ನವೆಂಬರ್‌ನಲ್ಲಿ ನೇ ಪೈ ತಾವ್‌ನಲ್ಲಿ ನಡೆದಿದ್ದ 25 ನೇ ಆಸಿಯಾನ್ ಶೃಂಗಸಭೆ ಮತ್ತು ಮನಿಲಾದಲ್ಲಿ ನಡೆದ 2017 ರ ಪೂರ್ವ ಏಷ್ಯಾ ಶೃಂಗಸಭೆಯ ಸಂದರ್ಭದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು.
ಭಾರತ ಮತ್ತು ಬ್ರೂನೈ ನಡುವಿನ ರಾಜತಾಂತ್ರಿಕ ಸಂಬಂಧಗಳ 40 ನೇ ವಾರ್ಷಿಕೋತ್ಸವದ ಹಿನ್ನೆಲೆ ಮೋದಿ ಐತಿಹಾಸಿಕ ಪ್ರವಾಸ ಕೈಗೊಂಡಿದ್ದಾರೆ. ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆ, ಇಂಧನ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಆರೋಗ್ಯದಂತಹ ಸಹಕಾರದ ಕ್ಷೇತ್ರಗಳ ಮೇಲೆ ದ್ವಿಪಕ್ಷೀಯ ಚರ್ಚೆಗಳಲ್ಲಿ ಪ್ರಧಾನಮಂತ್ರಿ ತೊಡಗುತ್ತಾರೆ. ಉಭಯ ರಾಷ್ಟ್ರಗಳು ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.